Cyrus Mistry: ಸಾವಿನ ಕುರಿತು ಮತ್ತಷ್ಟು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸರು

ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಯವರು ಸಾವನ್ನಪ್ಪಿದ್ದು ಇದಕ್ಕೆ ಕಾರಣ ಹೆಚ್ಚು ವೇಗವಾಗಿ ಕಾರು ಚಲಾಯಿಸುವುದರ ಜೊತೆಗೆ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿದ್ದೆ ಈ ಅಪಘಾತ ಆಗಲು ಮುಖ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ಮತ್ತಷ್ಟು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

 ಸೈರಸ್‌ ಮಿಸ್ತ್ರಿ, ಕಾರು ಅಪಘಾತ ಪ್ರಕರಣ

ಸೈರಸ್‌ ಮಿಸ್ತ್ರಿ, ಕಾರು ಅಪಘಾತ ಪ್ರಕರಣ

  • Share this:
ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ (Cyrus Mistry) ಕಾರು ಅಪಘಾತದಲ್ಲಿ (Car Accident) ಬಲಿಯಾಗಿದ್ದಾರೆ. ಕಾರನ್ನು ಖ್ಯಾತ ವೈದ್ಯೆಯೊಬ್ಬರು ಚಲಾಯಿಸುತ್ತಿದ್ದರು. ಹಾಗೆ, ಹೆಚ್ಚು ವೇಗವಾಗಿ ಕಾರು ಚಲಾಯಿಸುವುದರ (Car Drive) ಜೊತೆಗೆ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿದ್ದೆ ಈ ಅಪಘಾತ ಆಗಲು ಮುಖ್ಯ ಕಾರಣ ಎಂದು ಪೊಲೀಸರು (Police) ತಿಳಿಸಿದ್ದಾರೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೆ ಕಾರಿನ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸೈರಸ್‌ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಳೆ ಇಬ್ಬರೂ ಸೀಟ್ ಬೆಲ್ಟ್ (Seat Belt) ಧರಿಸಿರಲಿಲ್ಲ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದ ಕುರಿತು ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ.

9 ನಿಮಿಷಗಳಲ್ಲಿ 20 ಕಿ.ಮೀ. ಪ್ರಯಾಣ
ಇದರ ಜತೆಗೆ, ಪಾಲ್ಘರ್‌ನ ಚರೋಟಿ ಚೆಕ್ ಪೋಸ್ಟ್ ದಾಟಿದ ನಂತರ ಕಾರು ಕೇವಲ 9 ನಿಮಿಷಗಳಲ್ಲಿ 20 ಕಿ.ಮೀ. ಪ್ರಯಾಣ ಮಾಡಿದೆ. ಮಧ್ಯಾಹ್ನ 2.21ರ ಸುಮಾರಿಗೆ ಚೆಕ್‌ಪಾಯಿಂಟ್‌ನಲ್ಲಿ ಸೆರೆಹಿಡಿಯಲಾದ ಸಿಸಿಟಿವಿ ದೃಶ್ಯಾವಳಿಗಳಿಂದ ಈ ವಿಷಯ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆಕ್ ಪೋಸ್ಟ್‌ನಿಂದ 20 ಕಿಮೀ ದೂರದಲ್ಲಿರುವ ಸೂರ್ಯ ನದಿಯ ಸೇತುವೆಯ ಮೇಲೆ 2.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸಿಸಿಟಿವಿ ಕ್ಯಾಮೆರಾಗಳಿಂದ ಕಾರು ಕೇವಲ 9 ನಿಮಿಷಗಳಲ್ಲಿ ಪ್ರಯಾಣದ ದೂರವನ್ನು ಕ್ರಮಿಸಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವರದಿ ತಿಳಿಸಿದೆ. ಚಾಲಕಿ ಅನಾಹಿತಾ ಪಂಡೋಳೆ ಅವರು ಓವರ್‌ಟೇಕ್‌ ಮಾಡಲು ಹೋದಾಗ ಸಂಭವಿಸಿದ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದ ಹಿನ್ನೆಲೆ :
ಅಹಮದಾಬಾದ್‌ನಿಂದ ಮುಂಬೈಗೆ ಮಿಸ್ತ್ರಿ ಹಾಗೂ ಇತರರು ಮರ್ಸಿಡೀಸ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರನ್ನು ಡಾ. ಅನಾಹಿತಾ ಪಂಡೋಳೆ ಚಲಾಯಿಸುತ್ತಿದ್ದರು. ಮುಂಬೈನಿಂದ 120 ಕಿ.ಮೀ. ದೂರದ ಪಾಲ್ಘರ್‌ ಜಿಲ್ಲೆಯಲ್ಲಿ ಮಧ್ಯಾಹ್ನ 2.15 ಕ್ಕೆ ಸೂರ್ಯ ನದಿಯ ಮೇಲಿನ ಸೇತುವೆ ಮೇಲೆ ಕಾರು ಸಾಗುತ್ತಿತ್ತು. ಎಡಗಡೆಯಿಂದ ಓವರ್‌ಟೇಕ್‌ ಮಾಡಲು ಹೋದಾಗ ಕಾರಿನ ಚಾಲಕಿ ನಿಯಂತ್ರಣ ಕಳೆದುಕೊಂಡಿದ್ದಾಳೆ. ಆಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದ ಗೋಡೆಗೆ ಗುದ್ದಿದೆ. ಇದರಿಂದಲೇ ಅಪಘಾತ ಸಂಭವಿಸಿದೆ ಎಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:  Cyrus Mistry: ಸೈರಸ್ ಮಿಸ್ತ್ರಿ ಭೀಕರ ಅಪಘಾತಕ್ಕೆ ಬಲಿ, ಟಾಟಾ ಗ್ರೂಪ್​ನಿಂದ ಉಚ್ಛಾಟನೆಗೊಂಡಿದ್ದ ಉದ್ಯಮಿ ಬಗ್ಗೆ ಒಂದಷ್ಟು ಮಾಹಿತಿ!

ಕಾರು ಅತಿಯಾದ ವೇಗದಲ್ಲಿ ಸಾಗುತ್ತಿತ್ತು. ಹೀಗಾಗಿ ಡಿಕ್ಕಿ ಹೊಡೆದು ಏರ್‌ಬ್ಯಾಗ್‌ ಓಪನ್‌ ಆದರೂ ಅವುಗಳಿಂದ ಸಂಪೂರ್ಣ ರಕ್ಷಣೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಚಾಲಕಿ ಡಾ. ಅನಾಹಿತಾ ಹಾಗೂ ಡಾರಿಯಸ್‌ ಮುಂಭಾಗದಲ್ಲಿದ್ದು, ಸೀಟ್‌ಬೆಲ್ಟ್‌ ಧರಿಸಿದ್ದರು. ಸೈರಸ್‌ ಹಾಗೂ ಜಹಾಂಗೀರ್‌ ಅವರು ಹಿಂಬದಿಯಲ್ಲಿದ್ದರು. ಆದರೆ ಕಾರಿನ ಮುಂಭಾಗ ಮಾತ್ರ ಜಜ್ಜಿದ್ದು ಹಿಂಭಾಗಕ್ಕೆ ಯಾವುದೇ ಹಾನಿ ಆಗಿಲ್ಲ. ಇದನ್ನು ಕೂಡ ಪೊಲೀಸರು ತನಿಖೆ ವೇಳೆ ಗಮನಿಸುತ್ತಿದ್ದಾರೆ. ಗಾಯಾಳು ಡಾ. ಅನಾಹಿತಾ ಪಂಡೋಳೆ ಹಾಗೂ ಡಾರಿಯಸ್‌ ಪಂಡೋಳೆ ಅವರನ್ನು ಗುಜರಾತ್‌ನ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ದಾಖಲು 
ಈ ಅಪಘಾತ ಸಂಭವಿಸಿದ ಕೂಡಲೇ ಕೇವಲ 10 ನಿಮಿಷಗಳಲ್ಲಿ ಇವರ ಸಹಾಯಕ್ಕೆ ಹಲವರು ಧಾವಿಸಿ ಬಂದಿದ್ದಾರೆ. ಇಬ್ಬರು ಗಾಯಗೊಂಡ ವ್ಯಕ್ತಿಗಳನ್ನು ಕಾರಿನಿಂದ ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಹೇಳಿದರು. ಆದರೆ, ಇನ್ನಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಇದನ್ನೂ ಓದಿ:  Explained: ಸ್ಟಾರ್‌ಬಕ್ಸ್‌ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಯಾರು? ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ

“ಸೈರಸ್ ಮಿಸ್ತ್ರಿ ಸೇರಿದಂತೆ ಇಬ್ಬರನ್ನು ಆಸ್ಪತ್ರೆಗೆ ಕರೆತಂದಿತ್ತು. ಸೈರಸ್ ತಲೆಗೆ ಗಾಯವಾಗಿತ್ತು ಮತ್ತು ಆಂತರಿಕ ರಕ್ತಸ್ರಾವವಾಗಿತ್ತು. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಸೈರಸ್‌ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಇದು ಆಕಸ್ಮಿಕ ಸಾವು ಎಂದು ಕಂಡುಬಂದರೂ ತಕ್ಷಣವೇ ಯಾವ ಅಭಿಪ್ರಾಯಕ್ಕೂ ಬರಲು ಸಾಧ್ಯವಿಲ್ಲ. ಪೊಲೀಸ್ ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ತಿಳಿಯಬಹುದು ”ಎಂದು ಕಾಸ ಜಿಲ್ಲಾ ಆಸ್ಪತ್ರೆಯ ಡಾ.ಶುಬಹಂ ಸಿಂಗ್ ಹೇಳಿದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಬೈಗೆ ರವಾನೆ
ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಸರ್ಕಾರಿ ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಪಘಾತದಲ್ಲಿ ಅನಾಹಿತಾ ಪಾಂಡೋಲೆ ಮತ್ತು ಆಕೆಯ ಪತಿ ಡೇರಿಯಸ್ ಪಾಂಡೋಲೆ (60) ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ತಡರಾತ್ರಿ ಅವರನ್ನು ಗುಜರಾತ್‌ನ ವಾಪಿಯಿಂದ ರಸ್ತೆಯ ಮೂಲಕ ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Published by:Ashwini Prabhu
First published: