• Home
  • »
  • News
  • »
  • national-international
  • »
  • Rape Case: 12 ಜನರಿಂದ ಅತ್ಯಾಚಾರ: ಆರೋಪಿಗಳ ಬದಲು ಸಂತ್ರಸ್ತೆಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

Rape Case: 12 ಜನರಿಂದ ಅತ್ಯಾಚಾರ: ಆರೋಪಿಗಳ ಬದಲು ಸಂತ್ರಸ್ತೆಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಳ ಹಂತದ ನ್ಯಾಯಾಲಯ ಈ ಘಟನೆ ಯಲ್ಲಿ ಮಹಿಳೆಯದೇ ತಪ್ಪು. ಆಕೆ ಸುಳ್ಳು  ಹೇಳುತ್ತಿದ್ದಾಳೆ ಎಂದು ಆಕೆಗೆ ಶಿಕ್ಷೆ ವಿಧಿಸಿತ್ತು

  • Share this:

    ದ್ವೀಪ ರಾಷ್ಟ್ರ ಸೈಪ್ರಸ್​​ಗೆ (Cyprus) ರಜೆಯ ಮಜಾವನ್ನು ಕಳೆಯಲು ಬಂದಿದ್ದ ಬ್ರಿಟಿಷ್​ ಮಹಿಳಾ ಪ್ರಜೆ (British women)  12 ಜನ ಇಸ್ರೇಲಿಗರಿಂದ (Israelis) ಅತ್ಯಾಚಾರಕ್ಕೆ (Rape) ಒಳಗಾಗಿದ್ದಳು. ಈ ಸಂಬಂಧ ಆಕೆ ದೂರು ಕೂಡ ನೀಡಿದ್ದಳು. ಈ ಸಂಬಂಧ ದಾಖಲಾದ ಪೊಲೀಸ್​ ಪ್ರಕರಣ ವಿಚಾರಣೆ ನಡೆಸಿದ ಸೈಪ್ರಸ್​ನ ಕೆಳ ಹಂತದ ನ್ಯಾಯಾಲಯ ಈ ಘಟನೆ ಯಲ್ಲಿ ಮಹಿಳೆಯದೇ ತಪ್ಪು. ಆಕೆ ಸುಳ್ಳು  ಹೇಳುತ್ತಿದ್ದಾಳೆ ಎಂದು ಆಕೆಗೆ ಶಿಕ್ಷೆ ವಿಧಿಸಿತ್ತು. ಈ ಪ್ರಕಣ ಸಂಬಂಧ ವಿಚಾರಣೆ ನಡೆಸಿದ ಸೈಪ್ರಸ್​ನ ಸುಪ್ರೀಂಕೋರ್ಟ್ (Supreme Court) ಕಡೆಗೂ ಮಹಿಳೆಗೆ ನ್ಯಾಯ ಒದಗಿಸಿದೆ. ಆಕೆಯ ಶಿಕ್ಷೆಯನ್ನು ಅಮಾನತು ಮಾಡಿ ಬಿಡುಗಡೆಗೊಳಿಸಿದೆ.


    ನಾಲ್ಕು ತಿಂಗಳ ಸೆರೆವಾದ ಬಳಿಕ ಕಡೆಗೂ ಸಂತ್ರಸ್ತೆಗೆ ಸಿಕ್ಕಿದ ಗೆಲುವು


    ಈ ಪ್ರಕರಣ ಸಂಬಂಧ ಬ್ರಿಟಿಷ್​ ಮಹಿಳೆಯ ಪರವಾದ ವಕೀಲರ ಮನವಿ ಆಲಿಸಿದ ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲು ಒಪ್ಪಿಕೊಂಡಿತು. ಬ್ರಿಟಿಷ್ ಮಹಿಳೆ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಯುತ ವಿಚಾರಣೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.


    ಏನಿದು ಪ್ರಕರಣ
    ಮಾಹಿತಿ ಪ್ರಕಾರ 2019ರಲ್ಲಿ ಸೈಪ್ರೆಸ್​​ಗೆ ರಜೆ ಕಳೆಯಲು ಬಂದ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಳು. 2020 ರ ಜನವರಿಯಲ್ಲಿ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಯುವತಿ ಮತ್ತು ಅವರ ಕಾನೂನು ತಂಡವನ್ನು ವಿಚಾರಣೆ ನಡೆಸಲು ಅನುಮತಿಸಲಿಲ್ಲ. ಅಲ್ಲದೇ ಸಾಕ್ಷ್ಯವನ್ನು ಪ್ರಸ್ತುತಪಡಿಸಲು ಅವಕಾಶವನ್ನು ನೀಡಲಿಲ್ಲ. ಅಲ್ಲದೇ, ಈ ಪ್ರಕರಣದಲ್ಲಿ ಯುವತಿಯೇ ಸುಳ್ಳು ಹೇಳುತ್ತಿದ್ದಾಳೆ. ಈ ಪ್ರಕರಣದ ತಪ್ಪಿಸ್ಥತೆ ಯುವತಿ ಎಂದು ನ್ಯಾಯಾಲಯ ಯುವತಿಗೆ 4 ತಿಂಗಳು ಶಿಕ್ಷೆ ವಿಧಿಸಿತು.


    ಅಧಿಕಾರಿಗಳ ಕಾರ್ಯಕ್ಕೆ ಸಂತ್ರಸ್ತೆ ತಾಯಿ ಅಸಮಾಧಾನ


    ಈ ಪ್ರಕರಣದ ತೀರ್ಪಿನ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತ ಯುವತಿ ಸುಪ್ರೀಂ ಕೋರ್ಟ್​ ಮೊರೆ ಹೋದರು. ಸದ್ಯ ಪ್ರಕರಣ ಆಲಿಸಿದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಯುವತಿ ನಿರ್ದೋಷಿ ಎಂದು ತೀರ್ಪು ನೀಡಿದೆ. ತೀರ್ಪಿನ ಬಳಿಕ ಮಾತನಾಡಿದ ಸಂತ್ರಸ್ತೆ ತಾಯಿ, ಈ ಸಂಬಂಧ ಅಧಿಕಾರಿಗಳ ಮೂಲಕ ಕಾನೂನು ಪ್ರಕ್ರಿಯೆ ನ್ಯೂನತೆ, ಪೊಲೀಸರು, ನ್ಯಾಯಾಧೀಶರು ಅಥವಾ ಅಧಿಕಾರಿಗಳ ವರ್ತನೆಯನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.


    ಇದನ್ನು ಓದಿ: 2024 ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ TMC ಸ್ಪರ್ಧೆ; Mamata Banerjee


    ನಿಷ್ಪಕ್ಷಪಾತ ತನಿಖೆಗೆ ಆಗ್ರಹ


    ಸಂತ್ರಸ್ತ ಬ್ರಿಟಿಷ್​ ಯುವತಿಗೆ ನ್ಯಾಯ ನೀಡುವಂತೆ ಒತ್ತಾಯಿಸಿ ಅನೇಕರು ಈ ಸಂಬಂಧ ಪ್ರತಿಭಟನೆ ನಡೆಸಿದ್ದರು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ಸಂತ್ರಸ್ತೆ ಪರ ತೀರ್ಪು ನೀಡುತ್ತಿದ್ದಂತೆ ಅವರೆಲ್ಲಾ ಸಮಾಧಾನ ವ್ಯಕ್ತಪಡಿಸಿದರು.  ನಿಕೋಸಿಯಾದ ನ್ಯಾಯಾಲಯದ ಹೊರಗೆ ಜಮಾಯಿಸಿದ ಅವರು ಖುಷಿಯಿಂದ ಚಪ್ಪಾಳೆ ತಟ್ಟಿ ತೀರ್ಪನ್ನು ಸ್ವಾಗತಿಸಿದರು. ಜೊತೆಗೆ  ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ದೇಶದಲ್ಲಿನ ಅತ್ಯಾಚಾರ ಸಂಸ್ಕೃತಿಗೆ ಕಡಿವಾಣ ಹಾಕಬೇಕು. ನಾವು  ಸಂತ್ರಸ್ತೆಯನ್ನು  ನಂಬುತ್ತೇವೆ ಎಂಬ ಭಿತ್ತಿಪತ್ರಗಳು ಹಾಗೂ ಬ್ಯಾನರ್‌ಗಳು ಎಲ್ಲೆಡೆ ಕಂಡು ಬಂದವು.


    ಇದನ್ನು ಓದಿ: ನಾನು ಹೇಮಮಾಲಿನಿಯಂತೆ ಆಗಬೇಕಿಲ್ಲ; ವಿವಾದ ಮೂಡಿಸಿದ ಜಯಂತ್​ ಚೌಧರಿ


    ನ್ಯಾಯಾಲಯದ ತೀರ್ಪಿನ ನಂತರ, ಅತ್ಯಾಚಾರ ಪ್ರಕರಣ ತನಿಖೆಗೆ ಒತ್ತಾಯ ಕೇಳಿ ಬಂದಿದ್ದು, ತನಿಖೆ ಸಂಬಂಧ  ಸ್ವತಂತ್ರ ಪೊಲೀಸ್ ತಂಡವನ್ನು ರಚಿಸಬೇಕು ಎಂದು ಸಂತ್ರಸ್ತೆಯ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಸಂತ್ರಸ್ತ ಯುವತಿ ನ್ಯಾಯಯುತ ವಿಚಾರಣೆಯಿಂದ ವಂಚಿತಳಾಗಿದ್ದಾಳೆ. ಜೊತೆಗೆ ಪೊಲೀಸ್​ ಸೇರಿದಂತೆ ಅಧಿಕಾರಿಗಳು ಕೆಳ ಹಂತದ ನ್ಯಾಯಾಲಯ ಸಂಪೂರ್ಣ ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಾಳರೆ  ಎಂದು ನ್ಯಾಯಾಲಯವು ತೀರ್ಪು ನೀಡಿದೆ.

    Published by:Seema R
    First published: