ಇಂದು ಮಧ್ಯರಾತ್ರಿಯಿಂದ ವಾಯು ತೀವ್ರತೆ ಕುಸಿತ; ಆದಾಗ್ಯೂ ಕಛ್​ ಜಿಲ್ಲೆಯಲ್ಲಿ ಹೈ ಅಲರ್ಟ್​ ಘೋಷಣೆ

ತೀವ್ರತೆ ಕಳೆದುಕೊಂಡ ಚಂಡಮಾರುತವು ಮರುಕಳಿಸುವ ಸಾಧ್ಯತೆ ಇದ್ದು, ಕುಛ್​ ಜಿಲ್ಲೆಯ ಕರಾವಳಿಗೆ ಮರಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕಳೆದ ಶುಕ್ರವಾರ ಹೇಳಿತ್ತು.

Latha CG | news18
Updated:June 17, 2019, 4:27 PM IST
ಇಂದು ಮಧ್ಯರಾತ್ರಿಯಿಂದ ವಾಯು ತೀವ್ರತೆ ಕುಸಿತ; ಆದಾಗ್ಯೂ ಕಛ್​ ಜಿಲ್ಲೆಯಲ್ಲಿ ಹೈ ಅಲರ್ಟ್​ ಘೋಷಣೆ
ಸಾಂದರ್ಭಿಕ ಚಿತ್ರ
  • News18
  • Last Updated: June 17, 2019, 4:27 PM IST
  • Share this:
ಅಹಮದಾಬಾದ್​,(ಜೂ.17): ಕೆಲವು ದಿನಗಳ ಹಿಂದೆ ಗುಜರಾತ್ ಹಾಗೂ ರಾಜಸ್ಥಾನಕ್ಕೆ ಅಪ್ಪಳಿಸಿದ್ದ 'ವಾಯು' ಚಂಡಮಾರುತದ ತೀವ್ರತೆ ಸೋಮವಾರ ಮಧ್ಯರಾತ್ರಿಯಿಂದ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದಾಗ್ಯೂ  ಕಛ್​ ಜಿಲ್ಲೆಯಲ್ಲಿ ಮಳೆಯಾಗುವ  ಭಾರೀ ಸಾಧ್ಯತೆ ಇದೆ ಎಂದು ಹೈ ಅಲರ್ಟ್​​ ಘೋಷಿಸಲಾಗಿದೆ.

ಕಛ್​ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 5 ಎನ್​ಡಿಆರ್​ಎಫ್​ ತಂಡ ಮತ್ತು ಸ್ಥಳೀಯ ಅಧಿಕಾರಿಗಳ ತಂಡವು ಅಗತ್ಯ ಪರಿಹಾರ ನೀಡಲು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ಸಿದ್ಧವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಯು ಚಂಡಮಾರುತ ಈಶಾನ್ಯ ಅರೇಬಿಯನ್ ಸಮುದ್ರದ ಕಡೆ ಸಾಗಲಿದೆ. ಪ್ರತಿ ಗಂಟೆಗೆ 13 ಕಿ.ಮೀ. ವೇಗದಲ್ಲಿ ಗಾಳಿಯ ವೇಗ ಇರಲಿದೆ. ಕೊನೆಯ 6 ಗಂಟೆಗಳವರೆಗೆ ಈ ವೇಗದಲ್ಲಿ ಗಾಳಿ ಬೀಸಲಿದ್ದು, ಬಳಿಕ ತೀವ್ರ ಕಡಿಮೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ದಲಿತನ ಸಜೀವ ದಹನ; ಕ್ರಿಕೆಟ್​ನಲ್ಲಿ ಭಾರತ ಗೆದ್ದ ಸಂಭ್ರಮವನ್ನು ಆಚರಿಸಿದ್ದಕ್ಕೆ ಬೆಂಕಿ ಹಚ್ಚಿ ಕೊಂದ ಅನ್ಯ ಕೋಮಿನವರು

ಸೋಮವಾರ ಬೆಳಗ್ಗೆ ವಾಯು ಚಂಡಮಾರುತ ಪಶ್ಚಿಮ-ನೈರುತ್ಯ ನಲಿಯಾದಲ್ಲಿ 260 ಕಿ.ಮೀ ವೇಗದಲ್ಲಿ, ಪಶ್ಚಿಮ-ನೈರುತ್ಯ ದ್ವಾರಕಾದಲ್ಲಿ 240 ಕಿ.ಮೀ ಹಾಗೂ ಗುಜರಾತ್​ನ ಪಶ್ಚಿಮ-ನೈರುತ್ಯ ಭುಜ್​​ನಲ್ಲಿ 340 ಕಿ.ಮೀ. ಕೇಂದ್ರೀಕೃತವಾಗಿತ್ತು.ಬಳಿಕ ಮುಂದಿನ 6 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಕುಸಿಯತೊಡಗಿತು ಎನ್ನಲಾಗಿದೆ.

ಜೂನ್​ 17ರ ಸೋಮವಾರ ಮಧ್ಯರಾತ್ರಿ ಈಶಾನ್ಯ ಹಾಗೂ ಉತ್ತರ ಗುಜರಾತ್​​ನ ಕರಾವಳಿ ತೀರದ ಕಡೆ ಮಾರುತಗಳು ಸಾಗಲಿದ್ದು, ಚಂಡಮಾರುತದ ಪ್ರಭಾವ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಅರೇಬಿಯನ್​ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಲಿದ್ದು, ಕರಾವಳಿಯುದ್ದಕ್ಕೂ ಈ ಪ್ರಭಾವ ಹಾಗೇಯೇ ಇರುತ್ತದೆ. ಹೀಗಾಗಿ ಮುಂದಿನ 24 ಗಂಟೆಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ​ ಈಗಾಗಲೇ 5 ಎನ್​ಡಿಆರ್​ಎಫ್​ ತಂಡ ಜಿಲ್ಲೆಯ ಹಲವು ಕಡೆ ಬೀಡು ಬಿಟ್ಟಿದ್ದು, ಅಗತ್ಯ ನೆರವು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿವೆ ಎಂದು ಕಛ್​ ಜಿಲ್ಲಾಧಿಕಾರಿ ರೆಮ್ಯಾ ಮೋಹನ್ ತಿಳಿಸಿದ್ದಾರೆ.ಜೂನ್​ 13 ರಂದು ವಾಯು ಚಂಡಮಾರುತದಿಂದಾಗಿ ಗುಜರಾತ್​ನಲ್ಲಿ ಭೂ ಕುಸಿತ ಉಂಟಾಗಿತ್ತು. ಹೀಗಾಗಿ ಕರಾವಳಿ ತೀರ ಹಾಗೂ ಕೆಲವು ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ತೀವ್ರತೆ ಕಳೆದುಕೊಂಡ ಚಂಡಮಾರುತವು ಮರುಕಳಿಸುವ ಸಾಧ್ಯತೆ ಇದ್ದು, ಕಛ್​ ಜಿಲ್ಲೆಯ ಕರಾವಳಿಗೆ ಮರಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕಳೆದ ಶುಕ್ರವಾರ ಹೇಳಿತ್ತು.

First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ