Mumbai Rain: ಮುಂಬೈನಲ್ಲಿ ಬಾರ್ಜ್ ದುರಂತದ ಸಾವಿನ ಸಂಖ್ಯೆ 37ಕ್ಕೆ ಏರಿಕೆ; 38 ಪ್ರಯಾಣಿಕರು ನಾಪತ್ತೆ

Cyclone Tauktae | ಮುಂಬೈನಲ್ಲಿ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಪಿ-305 ಬಾರ್ಜ್​ನಲ್ಲಿದ್ದ 261 ಜನರ ಪೈಕಿ 186 ಜನರನ್ನು ರಕ್ಷಿಸಲಾಗಿದೆ. ಬಾರ್ಜ್​ನಲ್ಲಿದ್ದ 37 ಪ್ರಯಾಣಿಕರ ಮೃತದೇಹಗಳನ್ನು ದಡಕ್ಕೆ ತರಲಾಗಿದೆ. ಇನ್ನೂ 38 ಜನರಿಗಾಗಿ ಶೋಧ ನಡೆಸಲಾಗಿದೆ.

ಬಾರ್ಜ್​ನಲ್ಲಿ ಸಿಲುಕಿದ್ದವರ ರಕ್ಷಣೆ

ಬಾರ್ಜ್​ನಲ್ಲಿ ಸಿಲುಕಿದ್ದವರ ರಕ್ಷಣೆ

  • Share this:
ಮುಂಬೈ (ಮೇ 20): ತೌಕ್ತೆ ಚಂಡಮಾರುತದ (Cyclone Tauktae) ಅಬ್ಬರಕ್ಕೆ ಮಹಾರಾಷ್ಟ್ರ, ಗುಜರಾತ್​ನಲ್ಲಿ ಅಪಾರ ಆಸ್ತಿ-ಪಾಸ್ತಿ ನಾಶವಾಗಿದೆ. ಇದರ ಜೊತೆಗೆ ಅನೇಕ ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಮುಂಬೈನಲ್ಲಿ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಪಿ-305 ಬಾರ್ಜ್​ನಲ್ಲಿದ್ದ  (Barge P-305) 261 ಜನರ ಪೈಕಿ 186 ಜನರನ್ನು ರಕ್ಷಿಸಲಾಗಿದೆ. 3 ದಿನಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಆ ಬಾರ್ಜ್​ನಲ್ಲಿದ್ದ 37 ಪ್ರಯಾಣಿಕರ ಮೃತದೇಹಗಳನ್ನು ದಡಕ್ಕೆ ತರಲಾಗಿದೆ. ಇನ್ನೂ 38 ಜನರು ನಾಪತ್ತೆಯಾಗಿದ್ದು, ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಮುಂಬೈ ಕರಾವಳಿ ಪ್ರದೇಶದಲ್ಲಿ ಸುಮಾರು 35 ನಾಟಿಕಲ್ ಮೈಲು ದೂರದಲ್ಲಿ ಪಿ-305 ಬಾರ್ಜ್ ಮುಳುಗಿತ್ತು. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನು 38 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 261 ಮಂದಿಯಿದ್ದ ಈ ಬಾರ್ಜ್ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸೋಮವಾರ ಸಮುದ್ರದಲ್ಲಿ ಮುಳುಗಿತ್ತು. ಬಾರ್ಜ್ ನಲ್ಲಿದ್ದ 261 ಮಂದಿಯ ಪೈಕಿ 186 ಮಂದಿಯನ್ನು ರಕ್ಷಿಸಲಾಗಿತ್ತು. ಐಎನ್​ಎಸ್​ ಕೊಚ್ಚಿ (INS Cochin) ಮತ್ತು ಐಎನ್​ಎಸ್​ ಕೊಲ್ಕತ್ತಾದ (INS Kolkata) ಹಡಗುಗಳಲ್ಲಿ ಬುಧವಾರ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿ ಒಟ್ಟು 37 ಜನರ ಶವಗಳನ್ನು ಹೊರಗೆ ತೆಗೆಯಲಾಗಿದೆ.



ಈ ಬಗ್ಗೆ ಮಾತನಾಡಿರುವ ನೌಕಾಪಡೆಯ ಕಮಾಂಡರ್ ಆಪರೇಷನ್ಸ್ ನೇವಲ್ ಕಮಾಂಡ್ ಎಂ.ಕೆ. ಝಾ (MK Jha, Commander Operations, Naval Command), ಈ ದುರಂತದಲ್ಲಿ 37 ಜನರು ಸಾವನ್ನಪ್ಪಿದ್ದು, ಮೃತಪಟ್ಟವರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಈ ದುರಂತಕ್ಕೆ ಕಾರಣ ಏನು? ಯಾರು ಹೊಣೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.



ಹಡಗುಗಳು, ಹೆಲಿಕಾಪ್ಟರ್, ಎನ್​ಡಿಆರ್​​ಎಫ್​ ಯೋಧರು ಈ ದುರಂತ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ತೌಕ್ತೆ ಚಂಡಮಾರುತದ ಆರ್ಭಟ ಕಡಿಮೆಯಾಗಿಲ್ಲ. ಗುಜರಾತ್, ಮಹಾರಾಷ್ಟ್ರ ಮಾತ್ರವಲ್ಲದೆ ದೆಹಲಿಯಲ್ಲೂ ಇಂದು ಮುಂಜಾನೆಯಿಂದ ಭಾರೀ ಮಳೆಯಾಗುತ್ತಿದೆ. ಇದರ ಜೊತೆಗೆ ಮತ್ತೊಂದು ಚಂಡಮಾರುತದ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.

ಯಾಸ್ ಎಂಬ ಚಂಡಮಾರುತ (Cyclone Yaas) ಮೇ 23ರಂದು ಆರ್ಭಟಿಸಲಿದ್ದು, ನಾಳೆಯಿಂದ ಮೇ 26ರವರೆಗೆ ಭಾರೀ ಮಳೆಯಾಗಲಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತದ ಆರ್ಭಟವಿರಲಿದೆ.

ಇದನ್ನೂ ಓದಿ: Cyclone Yaas: ತೌಕ್ತೆ ಬೆನ್ನಲ್ಲೇ ಮೇ 23ರಿಂದ ಅಪ್ಪಳಿಸಲಿದೆ ಯಾಸ್ ಚಂಡಮಾರುತ; ನಾಳೆಯಿಂದ ಭಾರೀ ಮಳೆ ಸಾಧ್ಯತೆ

ಇದನ್ನೂ ಓದಿ: ಇಂದು ಮತ್ತೆ 10 ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮೇ 23ರಿಂದ 26ರವರೆಗೆ ಯಾಸ್ ಚಂಡಮಾರುತ ಪಶ್ಚಿಮ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಲಿದೆ. ಮೇ 23ರಂದು ಈ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಮೇ 26ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
Published by:Sushma Chakre
First published: