ಇಂದು 110 ಕಿ.ಮೀ. ವೇಗದಲ್ಲಿ ಮುಂಬೈಗೆ ಬಂದಪ್ಪಳಿಸಲಿದೆ ನಿಸರ್ಗ ಚಂಡಮಾರುತ; ಕರ್ನಾಟಕದಲ್ಲೂ ಹೈ ಅಲರ್ಟ್

ಈಗಾಗಲೇ ಪಾಲ್ಘರ್​, ಮುಂಬೈ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಚಂಡಮಾರುತ ಲಗ್ಗೆ ಇಟ್ಟ ನಂತರ ಮಳೆ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Rajesh Duggumane | news18-kannada
Updated:June 3, 2020, 8:22 AM IST
ಇಂದು 110 ಕಿ.ಮೀ. ವೇಗದಲ್ಲಿ ಮುಂಬೈಗೆ ಬಂದಪ್ಪಳಿಸಲಿದೆ ನಿಸರ್ಗ ಚಂಡಮಾರುತ; ಕರ್ನಾಟಕದಲ್ಲೂ ಹೈ ಅಲರ್ಟ್
ಮುಂಬೈ
  • Share this:
ಮುಂಬೈ (ಜೂ.3): ಕೊರೋನಾ ವೈರಸ್​ಗೆ ತತ್ತರಿಸಿರುವ ಮಹಾರಾಷ್ಟ್ರಕ್ಕೆ ಇಂದು ನಿಸರ್ಗ ಚಂಡಮಾರುತ ಬಂದಪ್ಪಳಿಸಲಿದೆ. 100-110 ಕಿಲೋ ಮೀಟರ್​ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲೂ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ಬೆಳಗ್ಗೆ 5:30ಕ್ಕೆ ನಿಸರ್ಗ ಚಂಡಮಾರುತ ತೀವ್ರತೆ ಪಡೆದುಕೊಂಡಿದೆ. ಈ ಸೈಕ್ಲೋನ್​ ಗಂಟೆಗೆ 120 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ, ಮುಂಬೈ ಹಾಗೂ ಸುತ್ತಮುತ್ತ ಭಾಗದಲ್ಲಿ ಭಾರೀ ಹಾನಿ ಸೃಷ್ಟಿಯಾಗಬಹುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗೃತೆ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​) ಕಾರ್ಯಪ್ರವೃತ್ತವಾಗಿದೆ. ಗುಜರಾತ್​ ಹಾಗೂ ಮಹಾರಾಷ್ಟ್ರದಲ್ಲಿ 40 ಎನ್​ಡಿಆರ್​ಎಫ್​ ತಂಡ ನಿಯೋಜನೆ ಮಾಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಕರಾವಳಿ ಅಂಚಿನಲ್ಲಿರುವ ಕೆಲವರನ್ನು ಸ್ಥಳಾಂತರ ಮಾಡುವ ಬಗ್ಗೆಯೂ ಎನ್​ಡಿಆರ್​ಎಫ್​ ಚಿಂತನೆ ನಡೆಸಿದೆ.ಮುಂಬೈ ಹೊರತಾಗಿ ಪುಣೆ ಭಾಗದಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಮೋದಿ-ಟ್ರಂಪ್ ಮಾತುಕತೆ; ಚೀನಾ ಗಡಿ ವಿವಾದ, ಅಮೆರಿಕದ ಹಿಂಸಾಚಾರ ಸೇರಿದಂತೆ ಮಹತ್ವದ ಚರ್ಚೆ

ಈಗಾಗಲೇ ಪಾಲ್ಘರ್​, ಮುಂಬೈ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಚಂಡಮಾರುತ ಲಗ್ಗೆ ಇಟ್ಟ ನಂತರ ಮಳೆ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

78 ಸಾವಿರ ಜನರ ಸ್ಥಳಾಂತರ:

ನಿಸರ್ಗ ಪರಿಣಾಮಗಳನ್ನು ಗುಜರಾತ್​ ಕೂಡ ಎದುರಿಸಬೇಕಿದೆ. ಗುಜರಾತ್​ ಕರಾವಳಿ ತೀರದಲ್ಲಿ ಭಾರೀ ಮಳೆ ಆಗುತ್ತಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಗುಜರಾತ್​ ನಲುಗುವ ಸಾಧ್ಯತೆ ಇದೆ. ಹೀಗಾಗಿ, ಕರಾವಳಿ ಭಾಗದಲ್ಲಿರುವ 78 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ.ಕರ್ನಾಟಕಕ್ಕೂ ಎಫೆಕ್ಟ್​:

ಮಹಾರಾಷ್ಟ್ರಕ್ಕೆ ಅಪ್ಪಳಿಸುವ ಚಂಡಮಾರುತದ ಎಫೆಕ್ಟ್​ ಕರ್ನಾಟಕದಮೇಲೂ ಉಂಟಾಗಲಿದೆ. ಕಾರವಾರ, ಕುಮಟಾ, ಉಡಪಿ, ಮಂಗಳೂರು ಭಾಗದಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್​ ಕೊಂಚ ಪ್ರಮಾಣದಲ್ಲಿ ಇರಲಿದೆ. ಇನ್ನು, ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಈ ಮಳೆ ಮುಂದುವರಿಯಲಿದೆ.
Published by: Rajesh Duggumane
First published: June 3, 2020, 8:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading