Cyclone Gulab: ಓಡಿಶಾದಲ್ಲಿ ಆರಂಭವಾದ ಭೂ ಕುಸಿತ: ಆಂಧ್ರ ಸಿಎಂ ಜಗನ್ ಜೊತೆಗೆ ಪ್ರಧಾನಿ ಸಮಾಲೋಚನೆ

ನಿರಂತರ ಮಳೆಯಿಂದಾಗಿ ಒಡಿಶಾದ ಗಜಪತಿ ಜಿಲ್ಲೆಯ ಗುಮ್ಮಾ ಬ್ಲಾಕ್‌ನಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ನಾಮಂಗಡ ಮತ್ತು ಅಜಯಗಡ ನಡುವೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಗಜಪತಿ ಜಿಲ್ಲೆಯ ಬೆಟ್ಟದ ಬದಿಯಿಂದ ಮತ್ತು ತಗ್ಗು ಪ್ರದೇಶದಿಂದ 1,600 ಜನರನ್ನು ರಕ್ಷಣಾ ತಂಡಗಳು ಸ್ಥಳಾಂತರಿಸಿದೆ. ಆರು ODRAF ಮತ್ತು ಎರಡು NDRF ತಂಡಗಳನ್ನು ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ.

ಒಡಿಶಾದಲ್ಲಿ ಗಜಪತಿ ಜಿಲ್ಲೆಯಲ್ಲಿ ಸಂಭವಿಸಿರುವ ಭೂ ಕುಸಿತ

ಒಡಿಶಾದಲ್ಲಿ ಗಜಪತಿ ಜಿಲ್ಲೆಯಲ್ಲಿ ಸಂಭವಿಸಿರುವ ಭೂ ಕುಸಿತ

  • Share this:
    ಭಾರತೀಯ ಹವಾಮಾನ ಇಲಾಖೆ (IMD) ವಾಯುವ್ಯ ಮತ್ತು ಪಕ್ಕದ ಪಶ್ಚಿಮ- ಮಧ್ಯ ಬಂಗಾಳ ಕೊಲ್ಲಿಯಲ್ಲಿ 'ಗುಲಾಬ್' ಚಂಡಮಾರುತ (Gulab Cyclone) ರೂಪುಗೊಂಡಿದೆ ಎಂದು ಹೇಳಿದೆ. ಉತ್ತರ ಆಂಧ್ರ ಪ್ರದೇಶ ಮತ್ತು ಪಕ್ಕದ ದಕ್ಷಿಣ ಒಡಿಶಾ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಆರಂಭದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಮತ್ತು ನಂತರ ಪಶ್ಚಿಮ-ನೈರುತ್ಯ ದಿಕ್ಕಿನಲ್ಲಿ ಚಂಡಮಾರುತ ಚಲಿಸುವ ಸಾಧ್ಯತೆ ಇದ್ದು, ದಕ್ಷಿಣ ಸಂಜೆಯ ವೇಳೆಗೆ ಕಳಿಂಗಪಟ್ಟಣದ ಸುತ್ತ ವಿಶಾಖಪಟ್ಟಣಂ ಮತ್ತು ಗೋಪಾಲಪುರ ನಡುವೆ ದಕ್ಷಿಣ ಒಡಿಶಾ-ಉತ್ತರ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಏತನ್ಮಧ್ಯೆ, ಭಾರತೀಯ ರೈಲ್ವೆಯ ‘ಈಸ್ಟ್ ಕೋಸ್ಟ್ ರೈಲ್ವೇ (ಇಕೋಆರ್) ವಲಯವು ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಗಾಗಿ ಕೆಲವು ರೈಲುಗಳನ್ನು ರದ್ದುಗೊಳಿಸಲು/ ಅಲ್ಪಾವಧಿಗೆ ನಿಲ್ಲಿಸಲು ನಿರ್ಧರಿಸಿದೆ.

    ಐಎಂಡಿ  ಪ್ರಧಾನ ನಿರ್ದೇಶಕ ಡಾ ಮೃತುಂಜಯ್ ಮೊಹಾಪಾತ್ರ ಮಾತನಾಡಿ, ಗಾಳಿಯ ವೇಗವು 75 ಕಿಮೀ ನಿಂದ 85 ಕಿಮೀ ವರೆಗೆ ಬದಲಾಗುತ್ತದೆ. ಇದು 95 ಕಿಮೀ ವೇಗಕ್ಕೂ ಬದಲಾಗುತ್ತದೆ ಎಂದು ಹೇಳಿದರು. ಸಂಜೆ 5.30 ಕ್ಕೆ ಶನಿವಾರ, 'ಗುಲಾಬ್' ಚಂಡಮಾರುತವು ಒಡಿಶಾದ ಗೋಪಾಲಪುರದಿಂದ ಪೂರ್ವ-ಆಗ್ನೇಯಕ್ಕೆ 370 ಕಿಮೀ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣದಿಂದ 440 ಕಿಮೀ ಪೂರ್ವಕ್ಕೆ ಕೇಂದ್ರೀಕೃತವಾಗಿತ್ತು ಎಂದು ಅವರು ಹೇಳಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ರೆಡ್ಡಿಯವರೊಂದಿಗೆ ಮಾತನಾಡಿದ್ದಾರೆ ಮತ್ತು ಚಂಡಮಾರುತದಿಂದ ಉದ್ಭವಿಸಿದ ಪರಿಸ್ಥಿತಿಯ ಅವಲೋಕನ ನಡೆಸಿದರು. ಕೇಂದ್ರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ಭರವಸೆ ನೀಡುತ್ತೇನೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

    ಒಡಿಶಾದಲ್ಲಿ ಗುಲಾಬ್ ಚಂಡಮಾರುತ ಭಾರಿ ಪ್ರಭಾವಶಾಲಿಯಾಗಿದ್ದು, ಹೆಚ್ಚು ಹಾನಿ ಮಾಡುವ ಲಕ್ಷಣ ಗೋಚರಿಸಿದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಒಡಿಶಾ ಸರ್ಕಾರವು ಏಳು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ ಮತ್ತು ಹಾನಿಯಾದ ಪ್ರದೇಶಗಳಿಗೆ ರಕ್ಷಣಾ ಪಡೆಗಳು ಆಗಮಿಸಿದ್ದು, ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮುಂದುವರಿದಿದೆ.

    ನಿರಂತರ ಮಳೆಯಿಂದಾಗಿ ಒಡಿಶಾದ ಗಜಪತಿ ಜಿಲ್ಲೆಯ ಗುಮ್ಮಾ ಬ್ಲಾಕ್‌ನಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ನಾಮಂಗಡ ಮತ್ತು ಅಜಯಗಡ ನಡುವೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಗಜಪತಿ ಜಿಲ್ಲೆಯ ಬೆಟ್ಟದ ಬದಿಯಿಂದ ಮತ್ತು ತಗ್ಗು ಪ್ರದೇಶದಿಂದ 1,600 ಜನರನ್ನು ರಕ್ಷಣಾ ತಂಡಗಳು ಸ್ಥಳಾಂತರಿಸಿದೆ. ಆರು ODRAF ಮತ್ತು ಎರಡು NDRF ತಂಡಗಳನ್ನು ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ.

    ಇದನ್ನು ಓದಿ: Cyclone Gulab: ಇಂದು ಸಂಜೆ ಒಡಿಶಾ, ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ‘ಗುಲಾಬ್​‘ ಚಂಡಮಾರುತ; ರೆಡ್​ ಅಲರ್ಟ್ ಘೋಷಣೆ

    ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೆನಾ ಅವರು, 42 ODRAF ತಂಡಗಳು, 24 NDRF ತಂಡಗಳು ಮತ್ತು 102 ಅಗ್ನಿಶಾಮಕ ಸೇವಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಏಳು ಜಿಲ್ಲೆಗಳಲ್ಲಿ ನಿಯೋಜಿಸಲಾಗುವುದು. 2018 ತಿತ್ಲಿ ಚಂಡಮಾರುತದ ಸಮಯದಲ್ಲಿ, ನಾವು ಗಜಪತಿ ಜಿಲ್ಲೆಯಲ್ಲಿ ಭೂ ಕುಸಿತವನ್ನು ಕಂಡಿದ್ದೆವು. ಭೂ ಕುಸಿತದ ಸಮಸ್ಯೆಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಗಜಪತಿ ಮತ್ತು ರಾಯಗಡ ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಸರಿಯಾದ ಸ್ಥಳಾಂತರಕ್ಕೆ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

    ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಓಡಿಶಾ ರಾಜ್ಯದಲ್ಲಿ ಚಂಡಮಾರುತ ಅಪ್ಪಳಿಸಿದೆ.  ಚಂಡಮಾರುತವು ಗೋಪಾಲಪುರದ ಪೂರ್ವ -ಆಗ್ನೇಯದಲ್ಲಿ 140 ಕಿಮೀ ಮತ್ತು ಕಳಿಂಗಪಟ್ಟಣದಿಂದ 190 ಕಿಮೀ ಪೂರ್ವ- ಈಶಾನ್ಯದಲ್ಲಿ ಕೇಂದ್ರೀಕೃತವಾಗಿತ್ತು. ಇದು ಬಹುತೇಕ ಪಶ್ಚಿಮ ದಿಕ್ಕಿಗೆ ಚಲಿಸುವ ಮತ್ತು ಉತ್ತರ ಆಂಧ್ರ ಪ್ರದೇಶ- ದಕ್ಷಿಣ ಒಡಿಶಾ ಕರಾವಳಿಯನ್ನು ದಾಟುವ ಸಾಧ್ಯತೆಯಿದ್ದು, ಇಂದು ಮಧ್ಯರಾತ್ರಿ ಸುಮಾರು 75- 85 ಕಿಮೀ ಪ್ರತಿ ಗಂಟೆಗೆ ಗರಿಷ್ಠ ಗಂಟೆಗೆ 75 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಭಾನುವಾರ ತಡರಾತ್ರಿಯಿಂದಲೇ ಭೂ ಕುಸಿತಗಳು ಆರಂಭವಾಗಿವೆ.
    Published by:HR Ramesh
    First published: