Cyclone Gulab: ಇಂದು ಸಂಜೆ ಒಡಿಶಾ, ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ‘ಗುಲಾಬ್​‘ ಚಂಡಮಾರುತ; ರೆಡ್​ ಅಲರ್ಟ್ ಘೋಷಣೆ

ಚಂಡಮಾರುತಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಅಪ್ಪಳಿಸುವುದು ಬಹಳ ಅಪರೂಪ. ನಿರ್ದಿಷ್ಟವಾಗಿ ಮುಂಗಾರು ಬಹಳ ಸಕ್ರಿಯವಾಗಿದ್ದಾಗ, ಗಾಳಿಯ ವ್ಯವಸ್ಥೆಗಳು ಬಂಗಾಳ ಕೊಲ್ಲಿಯಲ್ಲಿ ಬಿರುಗಾಳಿಗಳನ್ನು ತಡೆಯುತ್ತದೆ. ಜೊತೆಗೆ ಚಂಡಮಾರುತದ ತೀವ್ರತೆಯನ್ನು ತಡೆಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಸೆ.26): ಆಂಧ್ರ ಪ್ರದೇಶದ ಉತ್ತರ ಭಾಗ(Northern Andhra Pradesh) ಮತ್ತು ದಕ್ಷಿಣ ಒಡಿಶಾದ ಕರಾವಳಿ(South Odisha Coastal) ಭಾಗದಲ್ಲಿ ಭಾನುವಾರ(ಇಂದು) ಸಂಜೆ ಚಂಡಮಾರುತ(cyclone) ಅಪ್ಪಳಿಸಲಿದೆ. ಗಂಟೆಗೆ ಸುಮಾರು 95 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಮಾನ ಇಲಾಖೆ(Indian Metrological Department) ಮುನ್ನೆಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ‘ಗುಲಾಬ್​‘(Gulab Cyclone) ಎಂದು ಹೆಸರಿಡಲಾಗಿದೆ. ಶನಿವಾರ ಮಧ್ಯಾಹ್ನ ಬಂಗಾಳ ಕೊಲ್ಲಿಯಲ್ಲಿ(Bay of Bengal) ತೀವ್ರವಾದ ವಾಯುಭಾರ ಕುಸಿತ ಉಂಟಾಗಿರುವುದರಿಂದ ಈ ಚಂಡಮಾರುತ ಸೃಷ್ಟಿಯಾಗಿದೆ. ಭಾನುವಾರ ಕಾಳಿಂಗಪಟ್ನಂ, ವಿಶಾಖಪಟ್ನಂ ಮತ್ತು ಗೋಪಾಲಪುರ ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಹೇಳಿದೆ.

ಒಡಿಶಾ ಮತ್ತು ಆಂಧ್ರ ಪ್ರದೇಶದ ಬಹುತೇಕ ಕಡೆಗಳಲ್ಲಿ ಇಂದು ಭಾರೀ ಮಳೆಯಾಗುವ ಹಿನ್ನೆಲೆ, ಭಾರತೀಯ ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದೆ. ಜೊತೆಗೆ ಸೋಮವಾರ ಛತ್ತೀಸ್​ಗಡದ ದಕ್ಷಿಣ ಭಾಗದಲ್ಲೂ ಅಧಿಕ ಮಳೆಯಾಗಲಿದ್ದು, ಅಲ್ಲಿಯೂ ರೆಡ್​ ಅಲರ್ಟ್​ ನೀಡಿದೆ. ಬಳಿಕ ಚಂಡಮಾರುತದ ಪ್ರಭಾವ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.

ಸೈಕ್ಲೋನ್ ಪ್ರಭಾವದಿಂದಾಗಿ ಹಲವೆಡೆ ಭಾರೀ ಮಳೆಯಿಂದಾಗಿ ಪ್ರವಾಹ
ಸೃಷ್ಟಿಯಾಗುವ ಸಾಧ್ಯತೆ ಇದೆ. ಜೊತೆಗೆ ಭೂಕುಸಿತಗಳು ಸಂಭವಿಸಲಿವೆ. ಭಾರೀ ಮಳೆಗೆ ವಿದ್ಯುತ್​ ಸಂಪರ್ಕ ಕಡಿತವಾಗಲಿದೆ. ಬೆಳೆಗಳೂ ಸಹ ನಾಶವಾಗಲಿವೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.

ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಹೆಚ್ಚಾಗಲಿದೆ ವರುಣನ ಆರ್ಭಟ- ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ..

ಇದರೊಂದಿಗೆ, ಸೆಪ್ಟೆಂಬರ್ 29ರಂದು ವಿದರ್ಭ, ತೆಲಂಗಾಣ, ಮಾರತ್​ವಾಡ, ಕೊಂಕಣ ಕರಾವಳಿ ಮುಂಬೈ ಮತ್ತು ಗುಜರಾತ್​​ನಲ್ಲಿ ಭಾರೀ ಮಳೆಯಾಗಲಿದ್ದು, ಈ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಚಂಡಮಾರುತಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಅಪ್ಪಳಿಸುವುದು ಬಹಳ ಅಪರೂಪ. ನಿರ್ದಿಷ್ಟವಾಗಿ ಮುಂಗಾರು ಬಹಳ ಸಕ್ರಿಯವಾಗಿದ್ದಾಗ, ಗಾಳಿಯ ವ್ಯವಸ್ಥೆಗಳು ಬಂಗಾಳ ಕೊಲ್ಲಿಯಲ್ಲಿ ಬಿರುಗಾಳಿಗಳನ್ನು ತಡೆಯುತ್ತದೆ. ಜೊತೆಗೆ ಚಂಡಮಾರುತದ ತೀವ್ರತೆಯನ್ನು ತಡೆಯುತ್ತದೆ.

ಸೆಪ್ಟೆಂಬರ್ 28ರ ಸಂಜೆಯಿಂದ ಗುಲಾಬ್​ ಚಂಡಮಾರುತದ ಪ್ರಭಾವ ಹೆಚ್ಚಾಗಲಿದೆ. ಕೊಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳು, ಉತ್ತರ ಪ್ರದೇಶ ಮತ್ತು ದೆಹಲಿ-ಎನ್​ಸಿಆರ್​ನಲ್ಲಿ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತದ ಪರಿಣಾಮ, ಸೆ.27ರವರೆಗೆ ಭಾರತೀಯ ರೈಲ್ವೆ ಇಲಾಖೆಯು ಹಲವು ಮಾರ್ಗಗಳ ರೈಲ್ವೆ ಸಂಚಾರವನ್ನು ರದ್ದು ಮಾಡಿದೆ. ಭಾರತೀಯ ರೈಲ್ವೆಯ ಪೂರ್ವ ಕರಾವಳಿ ರೈಲ್ವೆ ವಲಯ ಪ್ರಕಟಣೆಯಲ್ಲಿ ಹೇಳಿದೆ. ಗುಲಾಬ್ ಚಂಡಮಾರುತದ ಪ್ರಭಾವದಿಂದಾಗಿ ಸೆಪ್ಟೆಂಬರ್ 27ರ ವರೆಗೆ ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಕಾರ್ಯಾಚರಣೆಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಗುಲಾಬ್ ಚಂಡಮಾರುತವು ದಕ್ಷಿಣ ಒಡಿಶಾ ಮತ್ತು ಉತ್ತರ ಆಂಧ್ರ ಪ್ರದೇಶದ ನಡುವೆ ಅಪ್ಪಳಿಸುವುದರಿಂದ, ಆ ಭಾಗಗಳಿಗೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಸೆಪ್ಟೆಂಬರ್ 26ರಂದು ರದ್ದಾದ ರೈಲುಗಳು:

08463 ಭುವನೇಶ್ವರ-ಬೆಂಗಳೂರು ಪ್ರಶಾಂತಿ ಸ್ಪೆಷಲ್

02845 ಭುವನೇಶ್ವರ- ಯಶವಂತಪುರ ಸ್ಪೆಷಲ್

08969 ಭುವನೇಶ್ವರ-ವಿಶಾಖಪಟ್ಟಣಂ ಸ್ಪೆಷಲ್

08570 ವಿಶಾಖಪಟ್ಟಣಂನಿಂದ ಭುವನೇಶ್ವರ ಸ್ಪೆಷಲ್

07015 ಭುವನೇಶ್ವರ-ಸಿಕಂದರಾಬಾದ್ ವಿಶಾಖಪಣ್ನಂ ಸ್ಪೆಷಲ್

02071 ಭುವನೇಶ್ವರ-ತಿರುಪತಿ ಸ್ಪೆಷಲ್ ರೈಲುಗಳನ್ನು ರದ್ದು ಮಾಡಲಾಗಿದೆ.
Published by:Latha CG
First published: