ಕ್ಯಾರ್​​​ ಮತ್ತು ಮಹಾ ಬೆನ್ನಲ್ಲೀಗ ಬುಲ್​​ಬುಲ್​​ ಚಂಡಮಾರುತ: ಕೊಲ್ಕತ್ತಾದಲ್ಲಿ ಭೂಕುಸಿತ, ಇಬ್ಬರು ಬಲಿ

ದಕ್ಷಿಣ ಕೋಲ್ಕತ್ತಾದಿಂದ 750 ಕಿ.ಮೀ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ಶನಿವಾರ ರಾತ್ರಿ ಸೈಕ್ಲೋನ್​ ತೀವ್ರತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.

news18-kannada
Updated:November 10, 2019, 10:58 AM IST
ಕ್ಯಾರ್​​​ ಮತ್ತು ಮಹಾ ಬೆನ್ನಲ್ಲೀಗ ಬುಲ್​​ಬುಲ್​​ ಚಂಡಮಾರುತ: ಕೊಲ್ಕತ್ತಾದಲ್ಲಿ ಭೂಕುಸಿತ, ಇಬ್ಬರು ಬಲಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ನ.10): ಕ್ಯಾರ್​​ ಮತ್ತು ಮಹಾ ಬೆನ್ನಲ್ಲೀಗ ಬುಲ್​​ಬುಲ್​​​ ಚಂಡಮಾರುತ ಪ್ರವೇಶಿಸಿದೆ. ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಬುಲ್‌ಬುಲ್ ಚಂಡಮಾರುತ ತೀವ್ರಗೊಂಡಿದ್ದು, ಭೂಕುಸಿತ ಉಂಟಾಗಿದೆ. ಬುಲ್​​ಬುಲ್​​ ಚಂಡಮಾರುತದ ಪರಿಣಾಮ ಕೊಲ್ಕತ್ತಾದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಬ್ಬರು ಮೃತರಾಗಿದ್ದಾರೆ. ಇಲ್ಲಿನ ಕೊಲ್ಕತ್ತಾ ಕ್ರಿಕೆಟ್ ಮತ್ತು ಪುಟ್​ಬಾಲ್​​​ ಕ್ಲಬ್​​ವೊಂದರಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಮರ ಬಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ.

ಕೊಲ್ಕತ್ತಾದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ 104 ಮಿಲಿಮೀಟರ್ ಮಳೆಯಾಗಿದ್ದು, 50-70 ಕಿಲೋ ಮೀಟರ್​​​ ಶರ ವೇಗದಲ್ಲಿ  ಗಾಳಿ ಬೀಸುತ್ತಿದೆ. ಭಾರೀ ಪ್ರಮಾಣದ ಮಳೆಯಿಂದಾಗಿ ಪಶ್ಚಿಮ ಬಂಗಾಳದ ಜಗತ್‌ಸಿಂಗ್‌ಪುರ, ಕೇಂದ್ರಪಾರ, ಭದ್ರಕ್ ಮತ್ತು ಬಲಸೋರ್ ಜಿಲ್ಲೆಗಳಲ್ಲಿ ಸಾರ್ವಜನಿಕರ ಆಸ್ತಿ ಮತ್ತು ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ ಮರಗಳು ಧರೆಗೆ ಉರುಳಿದ್ದು, ಬಹುತೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ದಕ್ಷಿಣ ಕೊಲ್ಕತ್ತಾದಿಂದ 750 ಕಿ.ಮೀ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ಶನಿವಾರ ರಾತ್ರಿ ಸೈಕ್ಲೋನ್​ ತೀವ್ರತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಗ್ರಾಹಕರಿಗೆ ಸಿಹಿಸುದ್ದಿ: ಗಗನಕ್ಕೇರಿದ ಈರುಳ್ಳಿ ದರ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಪ್ರವಾಹ ಸಾಧ್ಯತೆ ಇದ್ದು, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್​ ಘೋಷಣೆ ಮಾಡಿವೆ. ಇನ್ನೂ 3 ದಿನಗಳ ಕಾಲ ಚಂಡಮಾರುತದ ಅಬ್ಬರ ಇರುತ್ತದೆ ಎನ್ನಲಾಗಿದ್ದು, ಅಧಿಕ ಮಳೆಯಾಗಲಿದೆ. ಚಂಡಮಾರುತದಿಂದ ಹಾನಿ ಸಂಭವಿಸಬಹುದೆಂದು ರಾಜ್ಯ ಸರ್ಕಾರಗಳು ಈಗಾಗಲೇ ಮುನ್ನೆಚ್ಚರಿಕೆ ವಹಿಸಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪುರಿ, ಜಗತ್​​ಸಿಂಗ್​ಪುರ, ಕೇಂದ್ರಪರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬುಲ್​ಬುಲ್​ ಚಂಡಮಾರುತ ಒರಿಸ್ಸಾಗೆ ಅಪ್ಪಳಿಸದೆ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಒಂದು ವೇಳೆ ಹೀಗಾದರೆ ಒರಿಸ್ಸಾ ಜನರು ನಿಟ್ಟುಸಿರು ಬಿಡುತ್ತಾರೆ. ಏಕೆಂದರೆ, ಮೇ ತಿಂಗಳಿನಲ್ಲಿ ಫನಿ ಚಂಡಮಾರುತದ ಭೀಕರತೆಗೆ ಒರಿಸ್ಸಾ ಜನರು ಬೆಚ್ಚಿಬಿದ್ದಿದ್ದರು. ಸುಮಾರು 64ಕ್ಕೂ ಹೆಚ್ಚು ಮಂದಿ ಫನಿ ಚಂಡಮಾರುತಕ್ಕೆ ಬಲಿಯಾಗಿದ್ದರು. ಸಮಾರು 5 ಲಕ್ಷಕ್ಕೂ ಅಧಿಕ ಮನೆಗಳು ನಾಶವಾಗಿದ್ದವು.
---------
First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading