HOME » NEWS » National-international » CYCLONE AMPHAN UPDATES PM MODI TO UNDERTAKE AERIAL SURVEY IN BENGAL AND ODISHA AFTER CYCLONE AMPHAN LEAVES 72 DEAD SNVS

ಇಂದು ಪಶ್ಚಿಮ ಬಂಗಾಳ, ಒರಿಸ್ಸಾಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ

Cyclone Amphan Updates: ಎರಡೂ ರಾಜ್ಯಗಳ ಅಂಫಾನ್ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಬಳಿಕ‌ ಕೇಂದ್ರ ಸರ್ಕಾರದಿಂದ ಯಾವ ರೀತಿಯ ನೇರವು‌ ಸಿಗಲಿದೆ ಎಂದು‌ ಘೋಷಿಸುವ ಸಾಧ್ಯತೆ ಇದೆ.

news18
Updated:May 22, 2020, 8:37 AM IST
ಇಂದು ಪಶ್ಚಿಮ ಬಂಗಾಳ, ಒರಿಸ್ಸಾಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ
ಪ್ರಧಾನಿ ನರೇಂದ್ರ ಮೋದಿ.
  • News18
  • Last Updated: May 22, 2020, 8:37 AM IST
  • Share this:
ನವದೆಹಲಿ(ಮೇ 22): ಅಂಪನ್ ಚಂಡಮಾರುತದ ದಾಳಿಗೆ ಸಿಲುಕಿ ನಲುಗಿಹೋಗಿರುವ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಅಂಪನ್ ಚಂಡಮಾರುತ ಅಪ್ಪಳಿಸಿರುವ ಜಾಗಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಬೆಳಿಗ್ಗೆ 1.30ಕ್ಕೆ ಕೊಲ್ಕತ್ತಾಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಪಶ್ಚಿಮ ಬಂಗಾಳ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ‌ ಕೋಲ್ಕತ್ತಾಕ್ಕೆ ಆಗಮಿಸಿ ಮಮತಾ ಬ್ಯಾನರ್ಜಿ ಮತ್ತು‌ ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಬಳಿಕ ಒರಿಸ್ಸಾಗೆ ತೆರಳಲಿರುವ ಪ್ರಧಾನಿ ಮೋದಿ, ಅಲ್ಲಿ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಆ ರಾಜ್ಯದ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ‌ ನವೀನ್ ಪಟ್ನಾಯಕ್ ಹಾಗೂ ಒರಿಸ್ಸಾ ರಾಜ್ಯದ ಹಿರಿಯ ಅಧಿಕಾರಿಗಳ ಜೊತೆ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ದಿಲ್ಲಿ ಪೋಸ್ಟ್ | ಕೊರೋನಾ ಕಷ್ಟದ ನಡುವೆಯೂ ಬಿಜೆಪಿ ರಾಜಕೀಯ, ಮತ್ತೆ ಫಾರ್ಮ್​ಗೆ ಬಂದ ಮಮತಾ

ಎರಡೂ ರಾಜ್ಯಗಳ ಅಂಫಾನ್ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಬಳಿಕ‌ ಕೇಂದ್ರ ಸರ್ಕಾರದಿಂದ ಯಾವ ರೀತಿಯ ನೇರವು‌ ಸಿಗಲಿದೆ ಎಂದು‌ ಘೋಷಿಸುವ ಸಾಧ್ಯತೆ ಇದೆ.

ವರದಿ: ಧರಣೀಶ್ ಬೂಕನಕೆರೆ
First published: May 22, 2020, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories