HOME » NEWS » National-international » CYCLONE AMPHAN EFFECTS CENTRAL GOVERNMENT HAVE HOLD HIGH LEVEL MEETING ABOUT ON AMPHAN CYCLONE RH

Cyclone Amphan: ಭಾರತಕ್ಕೆ ಅಪ್ಪಳಿಸಲಿರುವ ಅಂಫಾನ್ ಚಂಡಮಾರುತದ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ

Cyclone Amphan Effects: ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಅಂಫಾನ್ (Amphan) ಚಂಡಮಾರುತ ತೀವ್ರ ಗತಿ ಪಡೆದುಕೊಂಡಿದೆ. ಕಳೆದ ಕೆಲ ಗಂಟೆಗಳಲ್ಲಿ ಈಶಾನ್ಯ ದಿಕ್ಕಿನತ್ತ 13 ಕಿಮೀ ವೇಗದಲ್ಲಿ ದಾಂಗುಡಿ ಇಡುತ್ತಿರುವ ಚಂಡಮಾರುತ ಬುಧವಾರದೊಳಗೆ ಇನ್ನಷ್ಟು ವೇಗ ಮತ್ತು ಅಬ್ಬರ ಪಡೆದುಕೊಂಡು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ.

news18-kannada
Updated:May 18, 2020, 8:14 PM IST
Cyclone Amphan: ಭಾರತಕ್ಕೆ ಅಪ್ಪಳಿಸಲಿರುವ ಅಂಫಾನ್ ಚಂಡಮಾರುತದ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಕಂಡುಕೇಳರಿಯದ ಕೊರೋನಾ ಬಂದು ದೇಶಕ್ಕೆ ದೇಶವೇ ನಲುಗಿಹೋಗಿರುವ ಕಡುಕಷ್ಟದ ಸಂದರ್ಭದಲ್ಲೀಗ ದೇಶಕ್ಕೆ ಅಂಫಾನ್ ಚಂಡಮಾರುತ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಇಂದು ಉನ್ನತ ಮಟ್ಟದ ಸಭೆ ನಡೆಸಿದೆ. ಅಂಫಾನ್ ಚಂಡಮಾರುತ ಬೀರಬಹುದಾದ ಪರಿಸ್ಥಿತಿಯನ್ನು ನಿಭಾಯಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ತುರ್ತು ಪರಿಸ್ಥಿತಿ ‌ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆಯಲ್ಲಿ ಅಂಫಾನ್ ಚಂಡಮಾರುತ ಅಪ್ಪಳಿಸಬಹುದಾದ ಸಂದರ್ಭದಲ್ಲಿ ಏನೇನು ಮಾಡಬೇಕು? ಚಂಡಮಾರುತ ಎಲ್ಲೆಲ್ಲಿಗೆ ಅಪ್ಪಳಿಸಬಹುದು? ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಾಲೋಚನೆ ನಡೆಸಲಾಯಿತು.

ಬಂಗಾಳಕೊಲ್ಲಿಯಲ್ಲಿ ಅಂಫಾನ್ ಚಂಡಮಾರುತ ಅಪ್ಪಳಿಸಬಹುದು. ಆದುದರಿಂದ ಬಂಗಾಳಕೊಲ್ಲಿಯಲ್ಲಿ ಯಾರೂ ಮೀನುಗಾರಿಕೆ ಮಾಡಬಾರದು. ಯಾರೂ ಸಮುದ್ರದ ಬಳಿ ಹೋಗಬಾರದು. ಸಮುದ್ರಕ್ಕೆ  ಇಳಿಯಬಾರದು ಎಂದು ಈಗಾಗಲೇ ಬಂಗಾಳ ಕೊಲ್ಲಿ ವ್ಯಾಪ್ತಿಯ ರಾಜ್ಯಗಳಿಗೆ ನಿರ್ದೇಶಿಸಲಾಗಿದ್ದು, ಆ ನಿರ್ದೇಶನವನ್ನು ಕಟ್ಡುನಿಟ್ಟಿನಿಂದ ಪಾಲಿಸಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಕಳೆದ ವರ್ಷ ಫಣಿ ಚಂಡಮಾರುತ ಅಪ್ಪಳಿಸಿ ಅನಾಹುತ ಸೃಷ್ಟಿಸಿದ್ದನ್ನು ಸಭೆಯಲ್ಲಿ ಉಲ್ಲೇಖಿಸಲಾಯಿತು.

ಇದನ್ನು ಓದಿ: Cyclone Amphan: ಅಪಾಯಕಾರಿ ಮಟ್ಟದಲ್ಲಿ ಅಂಪನ್ ಚಂಡಮಾರುತ; ಬಂಗಾಳ, ಒಡಿಶಾದಲ್ಲಿ ಕಟ್ಟೆಚ್ಚರಿಕೆ

ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಅಂಫಾನ್ (Amphan) ಚಂಡಮಾರುತ ತೀವ್ರ ಗತಿ ಪಡೆದುಕೊಂಡಿದೆ. ಕಳೆದ ಕೆಲ ಗಂಟೆಗಳಲ್ಲಿ ಈಶಾನ್ಯ ದಿಕ್ಕಿನತ್ತ 13 ಕಿಮೀ ವೇಗದಲ್ಲಿ ದಾಂಗುಡಿ ಇಡುತ್ತಿರುವ ಚಂಡಮಾರುತ ಬುಧವಾರದೊಳಗೆ ಇನ್ನಷ್ಟು ವೇಗ ಮತ್ತು ಅಬ್ಬರ ಪಡೆದುಕೊಂಡು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
First published: May 18, 2020, 7:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories