HOME » NEWS » National-international » CYCLONE AMPHAN EFFECT YELLOW ALERT ISSUED BY METEOROLOGICAL DEPARTMENT TO BENGAL AND ODISHA AS AMPHAN CYCLONE INTENSIFIES SNVS

Cyclone Amphan: ಅಪಾಯಕಾರಿ ಮಟ್ಟದಲ್ಲಿ ಅಂಪನ್ ಚಂಡಮಾರುತ; ಬಂಗಾಳ, ಒಡಿಶಾದಲ್ಲಿ ಕಟ್ಟೆಚ್ಚರಿಕೆ

Cyclone Amphan Effects: ಒಡಿಶಾದ ಕರಾವಳಿ ತೀರದಲ್ಲಿರುವ 12 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಂಜಾಮ್, ಗಜಪತಿ, ಪುರಿ, ಜಗತ್​ಸಿಂಗ್​ಪುರ್, ಕೇಂದ್ರಾಪಾರಾ, ಭದ್ರಕ್, ಬಲಾಸೋರ್, ಮಯೂರ್​ಬಂಜ್, ಜಾಜ್​ಪುರ್, ಕಟಕ್, ಖುರ್ಡಾ ಮತ್ತು ನಯಾಗಡ್​ನಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಯೋಜಿಸಲಾಗಿದೆ.

news18-kannada
Updated:May 18, 2020, 10:20 AM IST
Cyclone Amphan: ಅಪಾಯಕಾರಿ ಮಟ್ಟದಲ್ಲಿ ಅಂಪನ್ ಚಂಡಮಾರುತ; ಬಂಗಾಳ, ಒಡಿಶಾದಲ್ಲಿ ಕಟ್ಟೆಚ್ಚರಿಕೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮೇ 18): ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಅಂಪನ್ (Amphan) ಚಂಡಮಾರುತ ತೀವ್ರ ಗತಿ ಪಡೆದುಕೊಂಡಿದೆ. ಕಳೆದ ಕೆಲ ಗಂಟೆಗಳಲ್ಲಿ ಈಶಾನ್ಯ ದಿಕ್ಕಿನತ್ತ 13 ಕಿಮೀ ವೇಗದಲ್ಲಿ ದಾಂಗುಡಿ ಇಡುತ್ತಿರುವ ಚಂಡಮಾರುತ ಬುಧವಾರದೊಳಗೆ ಇನ್ನಷ್ಟು ವೇಗ ಮತ್ತು ಅಬ್ಬರ ಪಡೆದುಕೊಂಡು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಇಲಾಖೆಯು ಬುಧವಾರ ತೀವ್ರ ಮಟ್ಟದಲ್ಲಿ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಯೆಲ್ಲೋ ಅಲರ್ಟ್ ನೀಡಿದೆ. ಕಳೆದ ವರ್ಷ ಫನಿ ಚಂಡಮಾರುತದಿಂದ ತತ್ತರಿಸಿಹೋಗಿದ್ದ ಒಡಿಶಾದಲ್ಲಿ ಈಗ ಬಿಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಎನ್​ಡಿಆರ್​ಎಫ್​ನ 17 ತಂಡಗಳು ಅಲ್ಲಿ ಕಾರ್ಯನಿರತವಾಗಿವೆ. ಅಪಾಯಕಾರಿ ಪ್ರದೇಶಗಳಿಂದ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಲಿಯ ವಿಶೇಷ ಪರಿಹಾರ ಆಯುಕ್ತ (SRC) ಪಿ.ಕೆ. ಜೆನಾ ತಿಳಿಸಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ‘ಕೊರೋನಾ ಹರಡಲು​ ಚೀನಾ ಕಾರಣ‘ - ತನಿಖೆಗೆ ಆಗ್ರಹಿಸಿ ವಿಶ್ವ ಆರೋಗ್ಯ ಸಂಸ್ಥೆ ಮೊರೆ ಹೋದ 62 ದೇಶಗಳು

ಒಡಿಶಾದ ಕರಾವಳಿ ತೀರದಲ್ಲಿರುವ 12 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಂಜಾಮ್, ಗಜಪತಿ, ಪುರಿ, ಜಗತ್​ಸಿಂಗ್​ಪುರ್, ಕೇಂದ್ರಾಪಾರಾ, ಭದ್ರಕ್, ಬಲಾಸೋರ್, ಮಯೂರ್​ಬಂಜ್, ಜಾಜ್​ಪುರ್, ಕಟಕ್, ಖುರ್ಡಾ ಮತ್ತು ನಯಾಗಡ್​ನಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಯೋಜಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲೂ ವಿಕೋಪ ಪರಿಸ್ಥಿತಿಯನ್ನ ಎದುರಿಸಲು ಆಡಳಿತಯಂತ್ರ ಸಜ್ಜಾಗಿದೆ ಎಂದು ಅಲ್ಲಿಯ ಗೃಹ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ್ ಅವರು ತಿಳಿಸಿದ್ಧಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ವೈದ್ಯನ ಅವಾಂತರ; ಆಂಧ್ರ ಸಿಎಂ ವಿರುದ್ಧ ಕೊಲೆ ಯತ್ನದ ಆರೋಪ

ಚಂಡಮಾರುತ ವಿಚಾರದಲ್ಲಿ ಹವಾಮಾನ ಇಲಾಖೆ ಮೂರು ರೀತಿಯ ಎಚ್ಚರಿಕೆಗಳನ್ನ ನೀಡುತ್ತದೆ. ಯೆಲ್ಲೋ, ಆರೆಂಜ್ ಮತ್ತು ರೆಡ್ ಅಲರ್ಟ್. ಚಂಡಮಾರುತ ಅಥವಾ ವೈಪರೀತ್ಯ ಹವಾಮಾನ ಎದುರಾಗುವುದಾದರೆ 48 ಗಂಟೆ ಮುಂಚೆ ಇಲಾಖೆಯು ಯೆಲ್ಲೋ ಅಲರ್ಟ್ ನೀಡುತ್ತದೆ. 24 ಗಂಟೆ ಮುಂಚೆ ನೀಡುವ ಎಚ್ಚರಿಕೆಯು ಆರೆಂಜ್ ಅಲರ್ಟ್ ಆಗಿರುತ್ತದೆ. ಚಂಡಮಾರುತ ಬಂದೆರಗಿದ ನಂತರ ಎತ್ತೆತ್ತ ಅದು ಹಾದು ಹೋಗಲಿದೆ ಎಂಬುದನ್ನು ತಿಳಿಸಲು ರೆಡ್ ಅಲರ್ಟ್ ನೀಡಲಾಗುತ್ತದೆ. ಈಗ ಹವಾಮಾನ ಇಲಾಖೆ ಮೊದಲ ಹಂತದ ಯೆಲ್ಲೋ ಅಲರ್ಟ್ ನೀಡಿದೆ. ನಾಳೆ ಆರೆಂಜ್ ಅಲರ್ಟ್ ಬರುವ ನಿರೀಕ್ಷೆ ಇದೆ.
First published: May 18, 2020, 10:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories