Cyclone Amphan – ಕೊರೋನಾ ದಾಳಿಗಿಂತಲೂ ಮಾರಕ ಅಂಪನ್ ಚಂಡಮಾರುತ; ಬಂಗಾಳದಲ್ಲಿ 12 ಸಾವು?

ಕೊರೋನಾ ವೈರಸ್​ನಿಂದ ಆದ ಹಾನಿಗಿಂತಲೂ ಚಂಡಮಾರುತ ಹೆಚ್ಚು ಘಾಸಿ ಮಾಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

news18
Updated:May 21, 2020, 7:48 AM IST
Cyclone Amphan – ಕೊರೋನಾ ದಾಳಿಗಿಂತಲೂ ಮಾರಕ ಅಂಪನ್ ಚಂಡಮಾರುತ; ಬಂಗಾಳದಲ್ಲಿ 12 ಸಾವು?
ಅಂಪನ್ ಚಂಡಮಾರುತ ಸೃಷ್ಟಿಸಿದ ಸ್ಥಿತಿ
  • News18
  • Last Updated: May 21, 2020, 7:48 AM IST
  • Share this:
ಕೋಲ್ಕತಾ(ಮೇ 21): ನಿನ್ನೆ ಮಧ್ಯಾಹ್ನ ಅಪ್ಪಳಿಸಿದ ಅಂಪನ್ ಚಂಡಮಾರುತ ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ನಡುಗಿಸಿ ಹೋಗಿದೆ. ಗಂಟೆಗೆ 190 ಕಿಮೀ ವೇಗದಲ್ಲಿ ದಾಂಗುಡಿ ಇಟ್ಟ ಅತ್ಯಂತ ತೀವ್ರಮಟ್ಟದ ಚಂಡಮಾರುತದ ದಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಅಧಿಕೃತ ಮಾಹಿತಿ ಪ್ರಕಾರ ಬಂಗಾಳದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದಲ್ಲಿ 4ಕ್ಕೂ ಹೆಚ್ಚು ಜನರು ಚಂಡಮಾರುತಕ್ಕೆ ಬಲಿಯಾಗಿರುವ ಮಾಹಿತಿ ಇದೆ. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುವ ಪ್ರಕಾರ 10ಕ್ಕೂ ಹೆಚ್ಚು ಜನರು ಅವರ ರಾಜ್ಯದಲ್ಲಿ ಸತ್ತಿದ್ದಾರಂತೆ.

“ಒಂದಾದ ಮೇಲೆ ಒಂದು ಪ್ರದೇಶಗಳು ಹಾನಿಗೊಂಡಿವೆ. ಯುದ್ಧದಂಥ ಸನ್ನಿವೇಶವನ್ನು ನಾನು ಅನುಭವಿಸಿದೆ. 10-12 ಜನರಾದರೂ ಸಾವನ್ನಪ್ಪಿದ್ದಾರೆ. ನಂದಿಗ್ರಾಮ್, ರಾಮನಗರ, ಉತ್ತರ ಮತ್ತು ದಕ್ಷಿಣ ಪರಗಣ ಜಿಲ್ಲೆಗಳು ನಾಶವಾಗಿವೆ” ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ಧಾರೆ.

 ಇದನ್ನೂ ಓದಿ: ಕೇಂದ್ರ ಕಾರ್ಮಿಕ ಕಾಯ್ದೆಗೆ ವಿರೋಧ; ಸುಪ್ರೀಂ ಕೋರ್ಟ್‌‌ನಲ್ಲಿ ದಾಖಲಾಯ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಕೊರೋನಾ ವೈರಸ್​ನಿಂದ ಆದ ಹಾನಿಗಿಂತಲೂ ಚಂಡಮಾರುತ ಹೆಚ್ಚು ಘಾಸಿ ಮಾಡಿದೆ ಎಂದು ಅವರು ಹೇಳಿದ್ದಾರೆ. ಅಷ್ಟಕ್ಕೂ ಸಾವಿನ ಸಂಖ್ಯೆಯಿಂದ ಕೊರೋನಾ ಮತ್ತು ಚಂಡಮಾರುತದ ಮಧ್ಯೆ ಹೋಲಿಕೆ ಸಾಧ್ಯವಿಲ್ಲ. ಚಂಡಮಾರುತ ಸಾಕಷ್ಟು ಆಸ್ತಿಪಾಸ್ತಿ ನಾಶ ಮಾಡಿದೆ. ಜನಜೀವನವನ್ನು ಅಕ್ಷರಶಃ ಚೆಲ್ಲಾಪಿಲ್ಲಿಯಾಗಿಸಿದೆ. ಬದುಕು ಕಟ್ಟಿಕೊಳ್ಳಲು ಹಲವು ಕಾಲವೇ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಕೊರೋನಾದಿಂದ ಪಶ್ಚಿಮ ಬಂಗಾಳದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೂ ಚಂಡಮಾರುತದಿಂದ ಆದ ಘಾಸಿಯೇ ಹೆಚ್ಚು ಮಾರಕ ಎಂಬ ಅಭಿಪ್ರಾಯ ಇದೆ.

ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಇದ್ದದ್ದರಿಂದ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಮುಂಚಿತವಾಗಿಯೇ ಸುಮಾರು 6.58 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿತ್ತು. ಅತ್ತ ಬಂಗಾಳದಲ್ಲಂತೂ ಬರೋಬ್ಬರಿ 24 ಲಕ್ಷ ಮಂದಿಯನ್ನು 15,000 ಪ್ರವಾಹ ಕೇಂದ್ರಗಳಿಗೆ ಸೇರಿಸಲಾಗಿತ್ತು. ಮಯನ್ಮಾರ್​ನಿಂದ ವಲಸೆ ಬಂದು ಪ್ರವಾಹಪೀಡಿತ ಪ್ರದೇಶಗಳಲ್ಲಿದ್ದ ರೋಹಿಂಗ್ಯ ಮುಸ್ಲಿಮ್ ಸಮುದಾಯದ ಸಂತ್ರಸ್ತರನ್ನೂ ಪ್ರವಾಹ ಕೇಂದ್ರಗಳಿಗೆ ಸಾಗಿಸಿ ಪ್ರಾಣ ರಕ್ಷಣೆ ಮಾಡಲಾಗಿತ್ತು. ಬಾಂಗ್ಲಾ ಸರ್ಕಾರ ಈ ಕ್ರಮ ಕೈಗೊಳ್ಳದೇ ಹೋಗಿದ್ದರೆ ಜೀವಹಾನಿ ಸಾಕಷ್ಟು ಆಗಿರುತ್ತಿತ್ತು.

First published: May 21, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading