• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Cyber Crime: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು

Cyber Crime: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಕೇವಲ ಒಂದು ಮಿಸ್ಡ್​​ ಕಾಲ್​, ಮೆಸೇಜ್​ ಕಳುಹಿಸುವ ಮೂಲಕ ಬ್ಯಾಂಕ್​ನಲ್ಲಿದ್ದ ಹಣವನ್ನು ದೋಚುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಜಯ್​ ಮಿಶ್ರಾ ಆಗಸ್ಟ್​ 2019 ರಿಂದ ಡಿಸೆಂಬರ್​ 12, 2022 ರವರೆಗೆ ದೇಶದಲ್ಲಿ ಸೈಬರ್​ ವಂಚನೆಯು 6 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ಇತ್ತೀಚಿನ ದಿನಗಳಲ್ಲಿ ಸೈಬರ್​ ಕ್ರೈಮ್ (Cyber Crime)​ ಹಗರಣಗಳು ಹೆಚ್ಚುತ್ತಲೇ ಇದೆ. ಟೆಕ್ನಾಲಜಿಗಳು ಅಭಿವೃದ್ಧಿಯಾಗುತ್ತಾ ಹೋದಂತೆ ಅದರಿಂದಾಗುವಂತಹ ವಂಚನರಗಳ ಸಂಖ್ಯೆ ಕೂಡಾ ಜಾಸ್ತಿಯಾಗ್ತಾಇದೆ. ಈ ಹಿಂದೆ ಓಟಿಪಿ (OTP), ವಿದ್ಯುತ್​ ಬಿಲ್​ ಮೂಲಕ ವಂಚನೆ ಮಾಡಿ ಬ್ಯಾಂಕ್​ನಲ್ಲಿದ್ದ (Bank) ಹಣವನ್ನು ದೋಚುತ್ತಿದ್ದರು. ಆದರೆ ಇತ್ತೀಚೆಗೆ ಮೊಬೈಲ್ (Mobile) ಬಳಕೆ ಹೆಚ್ಚಾಗಿದೆ ಇದರನ್ನು ಅರಿತ ಹ್ಯಾಕರ್ಸ್​ ಮೊಬೈಲ್​ಗಳನ್ನು ಹೇಗಾದರು ಮಾಡಿ ಹ್ಯಾಕ್​ (Hack) ಮಾಡುತ್ತಾರೆ. ಕಣ್ಣುಮುಚ್ಚಿ ತೆರೆಯುವುದರ ಒಳಗೆ ಬ್ಯಾಂಕ್​ನಲ್ಲಿದ್ದ ಹಣ ಮಾಯವಾಗುತ್ತದೆ. ಇದು ಒಂದು ರೀತಿಯ ಹಗರಣವಾಗಿರಬಹುದು. ಆದರೆ ವಂಚಕರು ಬೇರೆ ಬೇರೆ ರೀತಿಗಳಲ್ಲಿ ಯಾವರೀತಿ ಹಣ ದೋಚುವುದು ಎಂಬುದನ್ನು ಯೋಚನೆ ಮಾಡುತ್ತಲೇ ಇರುತ್ತಾರೆ. 2019 ರಿಂದ 2022 ರವರೆಗೆ ಎಚ್ಟು ಸೈಬರ್​​ ಕ್ರೈಮ್​ ಹಗರಣಗಳು ನಡೆದಿವೆ ಎಂಬುದರ ಮಾಹಿತಿ ಇಲ್ಲಿದೆ. 


  ಇತ್ತೀಚೆಗೆ ಕೇವಲ ಒಂದು ಮಿಸ್ಡ್​​ ಕಾಲ್​, ಮೆಸೇಜ್​ ಕಳುಹಿಸುವ ಮೂಲಕ ಬ್ಯಾಂಕ್​ನಲ್ಲಿದ್ದ ಹಣವನ್ನು ದೋಚುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಜಯ್​ ಮಿಶ್ರಾ ಆಗಸ್ಟ್​ 2019 ರಿಂದ ಡಿಸೆಂಬರ್​ 12, 2022 ರವರೆಗೆ ದೇಶದಲ್ಲಿ ಸೈಬರ್​ ವಂಚನೆಯು 6 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಹೇಳಿದ್ದಾರೆ.


  ಸೈಬರ್​  ಕ್ರೈಮ್​ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ಕ್ರಮ


  ಈ ಸೈಬರ್​ ವಂಚನೆಯನ್ನು ಗಮನಿಸಿದ ಸರ್ಕಾರ ಸಾರ್ವಜನಿಕರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಗ್ರಹ ವ್ಯವಹಾರಗಳ ಸಚಿವಾಲಯ ಎಸ್​ಎಮ್​ಎಸ್​ ಮೂಲಕ, ಕಾಲ್​ ಮೂಲಕ ಈ ಬಗ್ಗೆ ಎಚ್ಚರಿಕೆವಹಿಸಬೇಕೆಂದು ಹೇಳಿದೆ. ಇದಲ್ಲದೆ ಸೋಶಿಯಲ್​ ಮೀಡಿಯಾಗಳಲ್ಲಿ ಜನರಿಗೆ ಜಾಗೃತವಿಸುವ ಸಂದೇಶಗಳನ್ನು ರವಾನಿಸಿದೆ. ಆದರೂ ಇತ್ತೀಚೆಗೆ ಸೈಬರ್​ ಕ್ರೈಮ್​ ಹಗರಣಗಳು ಹೆಚ್ಚುತ್ತಲೇ ಇದೆ.


  ಇದನ್ನೂ ಓದಿ: ಜಿಯೋದಿಂದ ಗ್ರಾಹಕರಿಗೆ ಹೊಸವರ್ಷದ ಪ್ರಯುಕ್ತ ಬಂಪರ್ ಗಿಫ್ಟ್​! ಎಷ್ಟೊಂದು ಆಫರ್ಸ್​ಗಳು


  ಕೇಂದ್ರ ಸಚಿವರಿಂದ ಮಾಹಿತಿ


  ಈ ಸೈಬರ್​ ಕ್ರೈಮ್​ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರು 2019 ಆಗಸ್ಟ್​​ನಿಂದ 2022 ಡಿಸೆಂಬರ್​ 22 ರವರೆಗೆ ಸಯಬರ್ ವಂಚನೆಯು 6 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ನಡೆದಿದೆ ಎಂದು ದೂರು ದಾಖಲಾಗಿದೆ. ಇಲ್ಲಿ 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿಯಷ್ಟು ಈ ವಂಚನೆಯಿಂದ ಉಳಿಸಲಾಗಿದೆ ಎಂದು ಹೇಳಿದ್ದಾರೆ.


  ಜಾಗ್ರತ ಕ್ರಮಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನ


  2021-22- ರಲ್ಲಿ ಸೈಬರ್ ಕ್ರೈಂ, ಫೋರೆನ್ಸಿಕ್ ಉಪಕರಣಗಳು, ಪೊಲೀಸ್ ಆಧುನೀಕರಣ ಮತ್ತು ಸೈಬರ್ ಪೊಲೀಸರಿಗೆ ಉಪಕರಣಗಳನ್ನು ಖರೀದಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸುಮಾರು 621 ಕೋಟಿ ರೂಪಾಯಿಗಳನ್ನು ನೀಡಿದೆ. ಅಲ್ಲದೆ ಜನರಿಗೆ ಮಾಹಿತಿ ನೀಡುವ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ಅಪರಾಧವನ್ನು ಎದುರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸುಮಾರು 4 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.


  ಸೈಬರ್​ ವಂಚನೆಯಾದಾಗ ಮೊದಲು ಏನು ಮಾಡ್ಬೇಕು?


  ಇತ್ತೀಚೆಗೆ ಈ ಸೈಬರ್ ವಂಚನೆಯನ್ನು ಗಮನಿಸಿದ ಬೆಂಗಳೂರು ಪೊಲೀಸರು ಜನರಿಗಾಗಿ "ಗೋಲ್ಡನ್ ಅವರ್" ಎಂಬ ಸೌಲಭ್ಯವನ್ನು ಪರಿಚಯಿಸಿತ್ತು. ಒಂದು ವೇಳೆ ಜನರು ಸೈಬರ್ ವಂಚನೆಯಿಂದ ಹಣ ಕಳೆದುಕೊಂಡಾಗ ಈ ಸೌಲಭ್ಯವನ್ನು ಬಳಸಿ ಹಣವನ್ನು ಮರಳಿ ಪಡೆಯಬಹುದಾಗಿದೆ. ಈ ಸೌಲಭ್ಯ  ಕೊರೋನಾ ಲಾಕ್​​ಡೌನ್​ ಸಂದರ್ಭದಲ್ಲಿ ವಂಚನೆಯ ಸಂಖ್ಯೆಗಳು ಹೆಚ್ಚಾಗುತ್ತಿರುವಾಗ ಪರಿಚಯಿಸಲಾಯಿತು.


  "ಗೋಲ್ಡನ್ ಅವರ್" ಎಂದರೇನು?


  ಹೆಚ್ಚಿನ ಸೈಬರ್ ವಂಚನೆಗಳನ್ನು ಮೆಸೇಜ್​ ಕಳುಹಿಸುವ ಮೂಲಕ, ಗಿಫ್ಟ್​ ಆಫರ್ ಮೂಲಕ, ಕ್ರೆಡಿಟ್​ ಕಾರ್ಡ್​ ನಂಬರ್​ ಕೇಳುವ ಮೂಲಕ, ಕಾಲ್​ ಮಾಡುವ ಮೂಲಕ ಹಣ ದೋಚುವ ಪ್ರಯತ್ನ ಮಾಡುತ್ತಾರೆ. ಆಗ ಮೊಬೈಲ್ ಬಳಕೆದಾರರು ಅವರು ಹೇಳಿದ ಮಾತನ್ನು ನಂಬಿ ಸೈಬರ್ ಜಾಲಕ್ಕೆ ಒಳಗಾಗುತ್ತಾರೆ ಜೊತೆಗೆ ಬ್ಯಾಂಕ್​ನಲ್ಲಿದ್ದ ಹಣವೂ ಖಾಲಿಯಾಗುತ್ತದೆ. ಆ ಸಂದರ್ಭದಲ್ಲಿ ಒಂದು ಗಂಟೆಯ ಒಳಗೆ ಪೊಲೀಸ್​ ಕಂಟ್ರೋಲ್​ ರೂಮ್​ 1930 ಗೆ ಕಾಲ್​ ಮಾಡ್ಬೇಕು. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವಂತಹ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಇದನ್ನೇ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ.


  ಈ ಬಗ್ಗೆ ಪೊಲೀಸ್​ ನಿಯಂತ್ರಣಕ್ಕೆ ಕಾಲ್​ ಮಾಡಿದ್ರೆ ನೀವೂ ಅವರಿಗೆ ಆದಂತಹ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಬೇಕು. ಆಗ ಅವರು ಕೆಲವೇ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ಯಾವುದೇ ರೀತಿಯಲ್ಲೂ ಯಾರಿಗೂ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ www.cybercrime.govt.in ವೆಬ್​ಸೈಟ್​ಗೆ ಹೋಗಿ ದೂರನ್ನು ದಾಖಲಿಸಬಹುದಾಗಿದೆ.

  Published by:Prajwal B
  First published: