Cyber Crime: ಒಂದೇ ಒಂದು ಮಿಸ್ಡ್​​​ ಕಾಲ್​ನಿಂದ 46 ಲಕ್ಷ ರೂ ಕಳೆದುಕೊಂಡ; ಇರಲಿ ಎಚ್ಚರ...

ಮಿಸ್ಡ್​ ಕಾಲ್​ ಬಂದ ಬಳಿಕ ಅವರ ಸಿಮ್​ ಡಿ ಆಕ್ಟಿವೇಟ್​ ಆಗಿದೆ. ಈ ಬಗ್ಗೆ ಉದ್ಯಮಿ ಮೊದಲಿಗೆ ಏನೋ ಸಮಸ್ಯೆ ಎಂದು ಸುಮ್ಮನಾಗಿದ್ದಾರೆ. ಆದರೆ, ಅಸಲಿ ವಿಷಯ ತಿಳಿದು ಬಂದಿದ್ದು, ಅವರ ಬ್ಯಾಂಕಿನ ವಿವರ ಪಡೆದಾಗ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನೇಕ ಬಾರಿ ಮಿಸ್ಡ್​ ಕಾಲ್​ಗಳನ್ನು (Missed Call) ನಾವು ನಿರ್ಲಕ್ಷ್ಯ ಮಾಡುತ್ತೇವೆ. ಯಾವುದೊ ಅಪರಿಚಿತ ಕರೆಯಿಂದ ಏನು ಆಗುವುದಿಲ್ಲ ಎಂದುಕೊಳ್ಳುತ್ತೇವೆ. ಆದರೆ, ಈ ಡಿಜಿಟಲ್​ ಯುಗದಲ್ಲಿ (Digital Era) ಈ ಮಿಸ್ಡ್​ ಕಾಲ್​ಗಳು ಕೆಲವೊಮ್ಮೆ ಮೋಸದ ಜಾಲವಾಗಿರುತ್ತವೆ. ಇದೇ ರೀತಿ ಮೋಸದ ಜಾಲಕ್ಕೆ ಸಿಲುಕಿದ ಉದ್ಯಮಿಯೊಬ್ಬರು ಬರೋಬ್ಬರಿ 46 ಲಕ್ಷ ಕಳೆದುಕೊಂಡು ಕಂಗಲಾಗಿದ್ದಾರೆ. ಅದು ಹೇಗೆ ಒಂದು ಮಿಸ್ಡ್​ ಕಾಲ್​ ನಿಂದಾಗಿ ಈ ರೀತಿ ವಂಚನೆ ನಡೆಯಲು ಸಾಧ್ಯ ಎಂಬುದಕ್ಕೆ ಇಲ್ಲಿದೆ ನೋಡಿ ವಿವರ

    ಗುಜರಾತ್​ ಮೂಲದ ಉದ್ಯಮಿಯೊಬ್ಬರಿಗೆ ಮಿಸ್ಡ್​ ಕಾಲ್​ ಬಂದಿದೆ. ಈ ಮಿಸ್ಡ್​ ಕಾಲ್​ ಬಂದ ಬಳಿಕ ಅವರ ಸಿಮ್​ ಡಿ ಆಕ್ಟಿವೇಟ್​ ಆಗಿದೆ. ಈ ಬಗ್ಗೆ ಉದ್ಯಮಿ ಮೊದಲಿಗೆ ಏನೋ ಸಮಸ್ಯೆ ಎಂದು ಸುಮ್ಮನಾಗಿದ್ದಾರೆ. ಆದರೆ, ಅಸಲಿ ವಿಷಯ ತಿಳಿದು ಬಂದಿದ್ದು, ಅವರ ಬ್ಯಾಂಕಿನ ವಿವರ ಪಡೆದಾಗ. ಸಿಮ್​ ಡಿ ಆಕ್ಟಿವೇಟ್​ ಬಳಿಕ ಬ್ಯಾಂಕ್​ಗೆ ಹೋದಾಗ ಅವರ ಖಾತೆಯಲ್ಲಿದ್ದ 46 ಲಕ್ಷ ರೂ ಕಳ್ಳತನವಾಗಿದೆ. ಸಿಮ್​ ಚಾಲನೆಯಲ್ಲಿಲ್ಲದ ಕಾರಣ ಅವರಿಗೆ ತಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಬಗ್ಗೆ ತಿಳಿದು ಬಂದಿಲ್ಲ

    ಡಿಜಿಟಲ್​ ವಂಚನೆ

    ಇದೊಂದು ಮೋಸ ಜಾಲವಾಗಿದ್ದು, ಡಿಜಿಟಲ್​ ದರೋಡೆಕೋರರು ಈ ರೀತಿ ಸಂಚು ರೂಪಿಸಿರುವುದು ಬಳಿಕ ತಿಳಿದು ಬಂದಿದೆ. ಅಹಮದಾಬಾದ್‌ನ ಸ್ಯಾಟಲೈಟ್ ಎಕ್ಸ್‌ಟೆನ್ಶನ್‌ನ ನಿವಾಸಿ ಮತ್ತು ರಾಸಾಯನಿಕ ಉದ್ಯಮಿ ಯುವಕ ರಾಕೇಶ್​ ಶಾ ಈ ಬಾರಿ ಮೊತ್ತದ ಹಣ ಕಳೆದುಕೊಂಡವರು. ಇವರ ಮೊಬೈಲ್‌ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಬ್ಯಾಂಕ್ ಖಾತೆಯ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಬಳಿಕ ಅವರ ಬ್ಯಾಂಕ್ ಖಾತೆಯಿಂದ 46.38 ಲಕ್ಷ ರೂ ಅನ್ನು ಎಗರಿಸಲಾಗಿದೆ.

    ಇದನ್ನು ಓದಿ: ಹೆಚ್ಚಾದ ಕೊರೋನಾ ಭೀತಿ, ವರ್ಚುಯಲ್ ರ್‍ಯಾಲಿಗೆ ಮನ್ನಣೆ ಕೊಡಿ ಎಂದ ಉತ್ತರಾಖಂಡ್ ಹೈಕೋರ್ಟ್

    ಸಿಮ್​ ಡಿ ಆಕ್ಟಿವೇಟ್

    ಈ ಘಟನೆ ಕುರಿತು ರಾಕೇಶ್​ ಶಾ ಸೈಬರ್​ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾ ಮನೆಯಲ್ಲಿದ್ದ ಸಂದರ್ಭದಲ್ಲಿ ಅಪರಿಚಿತ ಸಂಖ್ಯೆಯಿಂದ ಅವರ ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಬಂದಿದೆ. ಆ ನಂತರ ಅವರ ಮೊಬೈಲ್‌ನ ಟವರ್ ಮತ್ತು ಸಿಮ್ ನಾಟ್​​ ರೀಚಬಲ್ ಆಗಿದ್ದು, ನಂತರ ನಿಷ್ಕ್ರಿಯವಾಗಿದೆ. ಯಾವಾಗ ಅವರ ಎರಡೂ ಸಿಮ್ ಕಾರ್ಡ್‌ಗಳು ಡಿ ಆಕ್ಟಿವೇಟ್​ ಆಯಿತೋ ಆ ತಕ್ಷಣಕ್ಕೆ ಅವರು, ಅವರು ವೊಡಾಫೋನ್-ಐಡಿಯಾ ಶೋರೂಮ್‌ಗೆ ಹೋಗಿ ಪೋಸ್ಟ್‌ಪೇಯ್ಡ್ ಸಂಖ್ಯೆಯನ್ನು ತಕ್ಷಣವೇ ಸಕ್ರಿಯಗೊಳಿಸಿದರು. ಶೋರೂಂನಲ್ಲಿ ಪ್ರಿಪೇಯ್ಡ್ ಸಂಪರ್ಕವನ್ನು ನಾಲ್ಕು ಗಂಟೆಗಳಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ತಿಳಿಸಲಾಯಿತು ಎಂದು ದೂರಿನಲ್ಲಿ ದಾಖಲಿಸಿದ್ದಾರೆ

    ರಾತ್ರಿ ಇಮೇಲ್ ಕಳುಹಿಸಿದ ನಂತರ ರಾತ್ರಿ 10 ಗಂಟೆ ಸುಮಾರಿಗೆ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಬೆಳಿಗ್ಗೆ ಸಿಮ್ ಅನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯಲ್ಲಿ ಎರಡೂ ಸಿಮ್ ಕಾರ್ಡ್‌ಗಳನ್ನು ಮತ್ತೆ ನಿರ್ಬಂಧಿಸಲಾಗಿದೆ.

    ಇದನ್ನು ಓದಿ: ಆಫ್‌ಲೈನ್‌ ಪಾವತಿಗೆ ಮಿತಿ ವಿಧಿಸಿದ ಆರ್‌ಬಿಐ

    ವೊಡಾಫೋನ್ ಸ್ಟೋರ್‌ಗೆ ಭೇಟಿ ನೀಡಿದ ನಂತರ, ಕೋಲ್ಕತ್ತಾದ ವೊಡಾಫೋನ್ ಸ್ಟೋರ್‌ನಲ್ಲಿ ಎರಡೂ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ, ಪೋಸ್ಟ್ ಪೇಯ್ಡ್ ನಂಬರ್ ಆ್ಯಕ್ಟಿವೇಟ್ ಮಾಡಿ ಪ್ರಿಪೇಯ್ಡ್ ನಂಬರ್ ಡಿಆಕ್ಟಿವೇಟ್ ಆಗಿರುವುದು ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಶಾ ತಕ್ಷಣಕ್ಕೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿಗೆ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ಖಾತೆಯಲ್ಲಿ 46 ಲಕ್ಷ ರೂ ಕಡಿತವಾಗಿರುವುದು ತಿಳಿದು ಶಾಕ್​ ಆಗಿದ್ದಾರೆ.

    RTGS ಮತ್ತು IAPS ಮೂಲಕ ಹಣವನ್ನು ಹಿಂಪಡೆಯಲಾಗಿದ್ದು, ಈ ಹಣ ಸೋನಾಯ್ ದಾಸ್, ರೋಹಿತ್ ರಾಯ್ ಮತ್ತು ರಾಕೇಶ್ ವಿಶ್ವಕರ್ಮ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. 11 ವಹಿವಾಟುಗಳ ಮೂಲಕ 46.36 ಲಕ್ಷ ರೂಪಾಯಿಯನ್ನು ರಾಕೇಶ್​ ಜಾ ಖಾತೆಯಿಂದ ಹಿಂಪಡೆಯಲಾಗಿದೆ. ಜೊತೆಗೆ ಬ್ಯಾಂಕಿಂಗ್ ವಹಿವಾಟಿನ ಒಟಿಪಿಗಳನ್ನು ಸ್ವೀಕರಿಸಿ ಅದನ್ನು ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ
    Published by:Seema R
    First published: