HOME » NEWS » National-international » CYBER CRIME A MAN CHEATED BY FAKE JOB OFFER AND LOST NINE LAKH MONEY STG LG

Cyber Crime: ನಕಲಿ ಜಾಬ್ ಆಫರ್‌ನಿಂದ ಈ ವ್ಯಕ್ತಿ ಕಳೆದುಕೊಂಡಿದ್ದು ಬರೋಬ್ಬರಿ 9 ಲಕ್ಷ...!

ಈತನನ್ನು ನಂಬಿಸೋಕೆ ಒಬ್ಬ ನಕಲಿ ಲಾಯರ್‌ ಕಡೆಯಿಂದಲೂ ರೋಹಿತ್‌ಗೆ ಫೋನ್‌ನಲ್ಲಿ ಮಾತನಾಡಿಸಿದ್ದಾರೆ. ತನ್ನನ್ನು ಎಡ್ವರ್ಡ್‌ ಡೆನ್ನಿಸ್ ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ, ಅಪಾಯಿಂಟ್‌ಮೆಂಟ್ ಫೀ, ಕೆನಡಾ ಪರ್ಮನೆಂಟ್ ರೆಸಿಡೆನ್ಸಿ ಫೀ, ಸೆಕ್ಯೂರಿಟಿ ಕ್ಲಿಯರನ್ಸ್, ಲೀಗಲ್‌ ಫೀ ಹೀಗೆ ನಾನಾ ತರಹದ ಫೀ ಹೆಸರಿನಲ್ಲಿ ಹಣವನ್ನು ಡಿಪಾಸಿಟ್ ಮಾಡೋಕೆ ಹೇಳಿದ್ದಾನೆ.

news18-kannada
Updated:February 20, 2021, 2:37 PM IST
Cyber Crime: ನಕಲಿ ಜಾಬ್ ಆಫರ್‌ನಿಂದ ಈ ವ್ಯಕ್ತಿ ಕಳೆದುಕೊಂಡಿದ್ದು ಬರೋಬ್ಬರಿ 9 ಲಕ್ಷ...!
ಸಾಂದದರ್ಭಿಕ ಚಿತ್ರ
  • Share this:
ಕಳೆದ ವರ್ಷ ಇಡೀ ಜಗತ್ತನ್ನೇ ಕೊರೋನಾ ಎಂಬ ಕಣ್ಣಿಗೆ ಕಾಣದ ವೈರಸ್ ಅಲ್ಲೋಲ ಕಲ್ಲೋಲ ಮಾಡಿದ ಮೇಲೆ, ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಇದರಿಂದ ಆನ್‌ಲೈನ್‌ ನಲ್ಲಿ ಉದ್ಯೋಗಕ್ಕೆ ಹುಡುಕಾಟ ಹೆಚ್ಚಾಗತೊಡಗಿತು. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವೊಂದು ವಂಚನೆಯ ಜಾಲಗಳು ಜನರಿಗೆ ಉದ್ಯೋಗ ನೀಡುವ ಹುಸಿ ಭರವಸೆ ನೀಡಿ ಅವರಿಗೆ ಪಂಗನಾಮ ಹಾಕೋಕೆ ಶುರು ಮಾಡಿವೆ. ಈಗಾಗಲೇ ಅನೇಕರು ಈ ವಂಚನೆಯ ಜಾಲಕ್ಕೆ ಬಲಿಯಾಗಿದ್ದಾರೆ. ಈಗಿನ ಸರದಿ ದೆಹಲಿಯ ರೋಹಿತ್ ಸೂದ್‌ ಅವರದ್ದು.

ರೋಹಿತ್ ಸೂದ್ ಕಳೆದುಕೊಂಡಿದ್ದು ಒಂದಲ್ಲ ಎರಡಲ್ಲ, ಬರೋಬ್ಬರಿ 9 ಲಕ್ಷ ರೂಪಾಯಿ. ಹೌದು, ಕೆನಡಾದಲ್ಲಿ ಕೆಲಸ ಮಾಡುವ ಕನಸು ಕಟ್ಟಿಕೊಂಡಿದ್ದ ಈ ವ್ಯಕ್ತಿ ಮೋಸ ಹೋಗಿದ್ದಾದರೂ ಹೇಗೆ? ಅಸಲಿಗೆ ವಂಚನೆಯ ಗ್ಯಾಂಗ್ ಈ ವ್ಯಕ್ತಿಯನ್ನು ಬಲೆಗೆ ಬೀಳಿಸಿದ್ದಾದರೂ ಹೇಗೆ? 9 ಲಕ್ಷ ಹಣ ಲಪಟಾಯಿಸಿದ್ದು ಹೇಗೆ ಎನ್ನುವುದು ಇಲ್ಲಿದೆ ನೋಡಿ.

ರೋಹಿತ್‌ ಸೂದ್ ನೋಯ್ಡಾದ ಒಬ್ಬ ಇಂಜಿನಿಯರ್. ಕಾರಣಾಂತರಗಳಿಂದ ತನ್ನ ಹಳೆಯ ಕೆಲಸವನ್ನು ಕಳೆದುಕೊಂಡಿದ್ದ. ಹೀಗಾಗಿ ಲಾಕ್‌ಡೌನ್‌ ಟೈಮ್‌ನಲ್ಲಿ ಹೊಸ ಕೆಲಸ ಹುಡುಕೋಕೆ ಆರಂಭಿಸಿದ್ದ. ಲಾಕ್‌‌ಡೌನ್‌ ಕಾರಣದಿಂದ ಕೆಲಸ ಪಡೆಯೋಕೆ ಆನ್‌ಲೈನ್‌ ಮೊರೆ ಹೋಗಿದ್ದ. ಹೀಗಾಗಿ ಅನೇಕ ವೆಬ್‌ಸೈಟ್‌ಗಳಲ್ಲಿ ತನ್ನ ರೆಸ್ಯೂಮ್‌ ಅನ್ನು ಅಪ್‌ಲೋಡ್ ಮಾಡಿದ್ದ. ಹೀಗಿರಬೇಕಾದರೆ ಒಂದಿನ, ಕೆನಡಾ ಮೂಲದ ಒಂದು ಕಂಪನಿಯವರು ರೋಹಿತ್‌ನನ್ನು ಸಂಪರ್ಕ ಮಾಡಿ, ಜಾಬ್ ಆಫರ್ ನೀಡಿದ್ದಾರೆ.

ಈ ಕುರಿತು ರೋಹಿತ್ ಏನು ಹೇಳುತ್ತಾರೆ ಎನ್ನುವುದನ್ನು ಅವರದೇ ಮಾತುಗಳಲ್ಲಿ ಕೇಳಿ, "ನಾನು ಕೆಲಸಕ್ಕಾಗಿ ಅನೇಕ ವೆಬ್‌ಸೈಟ್‌ಗಳಲ್ಲಿ ನನ್ನ ರೆಸ್ಯೂಮ್‌ ಅಪ್‌ಲೋಡ್ ಮಾಡಿದ್ದೆ. ಹೀಗಿರುವಾಗ ಅವರು (ವಂಚಕರು) ಯಾವುದೋ ಒಂದು ವೆಬ್‌ಸೈಟ್‌ನಿಂದ ರೆಸ್ಯೂಮ್ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ನಂತರ ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ತ್ರಿಶಾ ವ್ಯಾಟ್ಸನ್‌ ಎನ್ನುವ ಹೆಸರಿನ ಹುಡುಗಿಯೊಬ್ಬಳು ಕರೆ ಮಾಡಿ, ನನ್ನ ರೆಸ್ಯೂಮ್ ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆ ಆಗಿದೆ ಎಂದಳು. ಇದಾದ ಮೇಲೆ ಒಂದು ಟಿಲಿಫೋನಿಕ್ ಸಂದರ್ಶನ ಹಾಗೂ ಜೂಮ್ ಸಂದರ್ಶನ ನಡೆಯಿತು. ಈ ಎರಡೂ ಸಂದರ್ಶನಗಳಲ್ಲಿ ನಾನು ಪಾಸ್ ಆಗಿದ್ದೇನೆ ಎಂದು ಹೇಳಿ ನನಗೆ ಕೆನಡಾದಲ್ಲಿ ಕೆಲಸ ಆಫರ್ ನೀಡಿದರು," ಎಂದು ತಾವು ಈ ವಂಚನೆಯ ಖೆಡ್ಡಾಕ್ಕೆ ಬಿದ್ದ ಆರಂಭದ ಹಂತಗಳನ್ನು ರೋಹಿತ್ ತೆರೆದಿಡುತ್ತಾರೆ.

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಇದಾದ ಮೇಲೆ ರೋಹಿತ್‌ ಅವರಿಗೆ ಕೆನಡಾದಲ್ಲಿ ಉಳಿದುಕೊಳ್ಳಲು ಅಲ್ಲಿನ ಲೀಗಲ್ ಫಾರ್ಮ್ಯಾಲಿಟಿ ಪೂರ್ಣ ಮಾಡೋಕೆ ಹಣ ಡೆಪಾಸಿಟ್‌ ಮಾಡುವಂತೆ ವಂಚಕರು ಹೇಳಿದ್ದಾರೆ. ಈತನನ್ನು ನಂಬಿಸೋಕೆ ಒಬ್ಬ ನಕಲಿ ಲಾಯರ್‌ ಕಡೆಯಿಂದಲೂ ರೋಹಿತ್‌ಗೆ ಫೋನ್‌ನಲ್ಲಿ ಮಾತನಾಡಿಸಿದ್ದಾರೆ. ತನ್ನನ್ನು ಎಡ್ವರ್ಡ್‌ ಡೆನ್ನಿಸ್ ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ, ಅಪಾಯಿಂಟ್‌ಮೆಂಟ್ ಫೀ, ಕೆನಡಾ ಪರ್ಮನೆಂಟ್ ರೆಸಿಡೆನ್ಸಿ ಫೀ, ಸೆಕ್ಯೂರಿಟಿ ಕ್ಲಿಯರನ್ಸ್, ಲೀಗಲ್‌ ಫೀ ಹೀಗೆ ನಾನಾ ತರಹದ ಫೀ ಹೆಸರಿನಲ್ಲಿ ಹಣವನ್ನು ಡಿಪಾಸಿಟ್ ಮಾಡೋಕೆ ಹೇಳಿದ್ದಾನೆ.

ಈ ಎಲ್ಲವನ್ನೂ ನಿಜ ಅಂತಲೇ ನಂಬಿದ ರೋಹಿತ್, ಅವರಿಗೆ ಹಣ ಟ್ರಾನ್ಸಫರ್ ಕೂಡ ಮಾಡಿದ್ದಾನೆ. ಅದೂ ಬರೋಬ್ಬರಿ 9 ಲಕ್ಷ ರೂಪಾಯಿ. ರೋಹಿತ್‌ನಿಗೆ ಯಾವುದೇ ಸಂಶಯ ಬರದ ಹಾಗೆ ವಂಚಕರ ಜಾಲ ಆತನನ್ನು ಖೆಡ್ಡಾಕ್ಕೆ ಕೆಡವಿಕೊಂಡಿದೆ, ಇದಕ್ಕೆ ವಂಚಕರು ಬಳಸಿದ ಮತ್ತೊಂದು ಖತರ್ನಾಕ್ ಟ್ರಿಕ್ ಏನೆಂದರೆ, ಈ ಎಲ್ಲ ಫೀ ಕೂಡ ರೋಹಿತ್ ಕೆನಡಾಕ್ಕೆ ಹೋದ ಮೇಲೆ ರಿಫಂಡ್ ಆಗುತ್ತದೆ ಎಂದು ಹೇಳಿದ್ದರು. ಇದನ್ನು ಅಕ್ಷರಶಃ ನಂಬಿದ್ದ ರೋಹಿತ್.ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಇದಾದ ಮೇಲೆ ಕೆಲವು ದಿನಗಳ ನಂತರ, ಕಳೆದ ಜನವರಿ 11ರಂದು ದೆಹಲಿಯಲ್ಲಿನ ಕೆನಡಾದ ಹೈ ಕಮೀಷನ್ ಕಚೇರಿಗೆ ಬರೋಕೆ ತಿಳಿಸಿದ್ದರು. ಆದರೆ ಅದಕ್ಕೂ ಮುಂಚೆ ಜನವರಿ 5ರಂದು ಕರೆ ಮಾಡಿ, ಕೋವಿಡ್ ಕಾರಣದಿಂದ ಯಾವುದೇ ಯಾವುದೇ ಹೊಸ ಕೇಸ್‌ಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಲಾಯಿತು. ಅಷ್ಟೇ ಅಲ್ಲದೇ, ರೋಹಿತ್‌ ಅವರ ಮಗನಿಗೆ ಕಾಲೇಜನ್ನು ನೋಡಿರುವುದಾಗಿ ವಂಚಕರ ಜಾಲ ಹೇಳಿತ್ತು. ಆತನ ಕಾಲೇಜು ಅಡ್ಮಿಷನ್‌ಗಾಗಿ ಸುಮಾರು 3 ಲಕ್ಷ ಹಣ ಟ್ರಾನ್ಸಫರ್ ಮಾಡಬೇಕೆಂದು ಮತ್ತೆ ಹಣದ ಬೇಡಿಕೆ ಇಡಲಾಯಿತು..

ಈ ಎಲ್ಲ ಬೆಳವಣಿಗೆಗಳಿಂದ ರೋಹಿತ್‌ನಿಗೆ ಕೆಲವು ಸಂದೇಹಗಳು ಬರುವುದಕ್ಕೆ ಶುರುವಾದವು. ಅಷ್ಟೇ ಅಲ್ಲದೇ ಯಾವ ವೆಬ್‌ಸೈಟ್‌ನಿಂದ ಈತನನನ್ನು ವಂಚಕರು ನಂಬಿಸಿದ್ದರೋ ಆ ವೆಬ್‌ಸೈಟ್‌ಗಳು ಸ್ಥಗಿತವಾಗಿದ್ದವು. ಈ ಕುರಿತು ರೋಹಿತ್ ವಿಚಾರಿಸಿದಾಗ, ವೆಬ್‌ಸೈಟ್‌ಗಳಲ್ಲಿ ಕೆಲವು ತಾಂತ್ರಿಕೆ ದೋಷಗಳಿವೆ. ಆದಷ್ಟು ಬೇಗ ಸರಿಮಾಡುತ್ತೇವೆ ಎಂದು ಹೇಳಿದ್ದರು. ಅಲ್ಲದೇ ಲಾಯರ್‌ ಫೋನ್‌ ನಂಬರ್ ಕೂಡ ಸಂಪರ್ಕಕ್ಕೆ ಸಿಗದಂತಾಗಿತ್ತು.

ಇದನ್ನೆಲ್ಲ ಗಮನಿಸಿದ ರೋಹಿತ್, ಬಹಳ ತಡವಾಗಿ ಎಚ್ಚೆತ್ತುಕೊಡು ಕೊನೆಗೆ ಇದೆಲ್ಲ ಮೋಸ ಎಂದು ಕಂಡುಕೊಂಡಿದ್ದಾನೆ. ಹೀಗೆ ಮೋಸಕ್ಕೊಳಗಾದ ನಂತರ ಆನ್‌ಲೈನ್‌ಲ್ಲಿಯೇ ಸೈಬರ್‌ ದೂರು ಕೊಟ್ಟಿದ್ದಾನೆ. ಇದಾದ 18 ದಿನಗಳ ನಂತರ ಅಂದರೆ ಕಳೆದ ಗುರುವಾಗ ನೋಯ್ಡಾದ ಸೆಕ್ಟರ್ 53 ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಐಟಿ ಕಾಯ್ದೆಯ ಐಪಿಸಿ ಸೆಕ್ಷನ್ 420, ಸೆಕ್ಷನ್ 66 ಅಡಿಯಲ್ಲಿ ದೂರು ದಾಖಲಾಗಿದೆ. ಇಷ್ಟೇ ಅಲ್ಲದೇ ರೋಹಿತ್ ಅಮೇರಿಕದ ನ್ಯಾಶನಲ್ ಸೆಕ್ಯೂರಿಟಿ ಏಜೆನ್ಸಿ ಹಾಗೂ ಕೆನಡಾದ ಆಂಟಿ ಫ್ರಾಡ್ ಸೆಂಟರ್‌ಗೂ ದೂರು ನೀಡಿದ್ದಾನೆ. 9 ಲಕ್ಷ ಹಣ ಕಳೆದುಕೊಂಡು ರೋಹಿತ್ ಈಗ ಪರದಾಡುತ್ತಿದ್ದಾನೆ. ಅಷ್ಟಕ್ಕೂ ಆತನ ಹಣ ವಾಪಸ್ ಬರುತ್ತಾ? ಗೊತ್ತಿಲ್ಲ.
Youtube Video

ಆದರೆ ಹೀಗೆ ಜಾಬ್ ಆಫರ್‌ ಹೆಸರಿನಲ್ಲಿ ನಡೆಯುತ್ತಿರುವ ಮೋಸವನ್ನು ಪೊಲೀಸರು ಪತ್ತೆ ಹಚ್ಚುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಆನ್‌ಲೈನ್‌ ಜಾಬ್‌ ಆಫರ್‌ ಪಡೆದು ಹಣ ಕಟ್ಟಿ ಮೋಸ ಹೋಗುವವರು ಎಚ್ಚರಗೊಳ್ಳಬೇಕಾದ ಕಾಲವಿದು.
Published by: Latha CG
First published: February 20, 2021, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories