CWC Meeting: ರಾಹುಲ್ ಗಾಂಧಿ ಬೇಗ ಎಐಸಿಸಿ ಅಧ್ಯಕ್ಷರಾಗಬೇಕೆಂದು ಕೂಗು: ಕಾಂಗ್ರೆಸ್ ‘ಆತ್ಮಾವಲೋಕನ’ ಹೇಗಿತ್ತು?

ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಷ್ಟೊತ್ತಿಗಾಗಲೇ ರಾಹುಲ್ ಗಾಂಧಿ ತಮ್ಮ ಹೊಸ ತಂಡದೊಂದಿಗೆ ಕಾರ್ಯಪ್ರವೃತ್ತರಾಗುವಂತೆ, ಬೇಗ ಅಧ್ಯಕ್ಷರ ಆಯ್ಕೆಯಾಗಬೇಕು ಎಂದು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಯ ಹಲವು ಸದಸ್ಯರು ಹೇಳಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್​​ ಸಭೆ

ಕಾಂಗ್ರೆಸ್​​ ಸಭೆ

  • Share this:
ನವದೆಹಲಿ, ಮಾ.‌ 13: ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಪಂಜಾಬ್ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ (Assembly Elections) ದಯನೀಯವಾಗಿ ಸೋಲಿನ ಬಗ್ಗೆ ಆತ್ಮಾವಲೋಕೋನ ಮಾಡಿಕೊಳ್ಳಲು ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ (Congress Working Committee) ಸಭೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರೂ ಆದ ಸಂಸದ ರಾಹುಲ್ ಗಾಂಧಿ (AICC Former President And Member of Parliment Rahul Gandhi) ಮತ್ತೊಮ್ಮೆ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಹಲವು ನಾಯಕರು ಆಗ್ರಹಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿ ಅವರ ನಾಯಕತ್ವ ಅತ್ಯಗತ್ಯ ಎಂದು ನಾಯಕರು ಪ್ರತಿಪಾದಿಸಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮದ್ಯದ ಬೆಲೆ ಕೇಳಿ ರೊಚ್ಚಿಗೆದ್ದು ಬಾರ್ ಮೇಲೆ ಕಲ್ಲು ತೂರಿದ Uma Bharti..!

ರಾಹುಲ್ ಗಾಂಧಿ ಪರ CWC ಸದಸ್ಯರ ಬ್ಯಾಟಿಂಗ್
ಎಐಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಗು ಮುನ್ನವೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಆದಷ್ಟು ಬೇಗ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಬೇಕು. ಕಳೆದ 30 ವರ್ಷಗಳಿಂದ ಗಾಂಧಿ ಕುಟುಂಬದ ಯಾರೊಬ್ಬರು, ಮಂತ್ರಿ, ಪ್ರಧಾನ ಮಂತ್ರಿ ಮತ್ತಿತರ ಹುದ್ದೆ ಅಲಂಕರಿಸಿಲ್ಲ. ಹೀಗೆ ನಿಸ್ವಾರ್ಥವಾಗಿ ಸೇವೆ ಮಾಡುವ ಕುಟುಂಬದ ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕು. ಅದೂ ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣವನ್ನು ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸುವ ಮೂಲಕ ಆರಂಭಿಸುತ್ತಾರೆ ಎಂಬುದರಿಂದಲೇ ರಾಹುಲ್ ಗಾಂಧಿ ಮಹತ್ವ ಏನೆಂದು ಗೊತ್ತಾಗುತ್ತದೆ' ಎಂದು ಹೇಳಿದ್ದರು. ಬಳಿಕ ಕಾರ್ಯಕಾರಣಿ ಸಮಿತಿ ಸಭೆಯಲ್ಲೂ ಅವರು ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕೆಂದು ಪ್ರಸ್ತಾಪಿಸಿದ್ದಾರೆ. ಇತರರು ಅನುಮೋದಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ಮಾತ್ರ ಕಾಂಗ್ರೆಸ್ ಮುನ್ನಡೆಸಲು ಸಾಧ್ಯ
ಸದ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಹುಲ್ ಗಾಂಧಿ ಅವರು ಮಾತ್ರ ಮುನ್ನಡೆಸಲು ಸಾಧ್ಯ. ಪ್ರಧಾನಿ ಮೋದಿಯನ್ನು ಸಮರ್ಥವಾಗಿ ಎದುರಿಸಲು ರಾಹುಲ್ ಗಾಂಧಿ ಅವರಿಂದ ಮಾತ್ರ ಸಾಧ್ಯ. ಆದುದರಿಂದ ರಾಹುಲ್ ಗಾಂಧಿ ಅವರನ್ನು ಆದಷ್ಟು ಬೇಗ ಅಧ್ಯಕ್ಷರಾಗಬೇಕು. ಆದಷ್ಟು ಬೇಗ ಅಧ್ಯಕ್ಷೀಯ ಚುನಾವಣೆಯನ್ನು ನಡೆಸಬೇಕು. ಇದೇ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಷ್ಟೊತ್ತಿಗಾಗಲೇ ರಾಹುಲ್ ಗಾಂಧಿ ತಮ್ಮ ಹೊಸ ತಂಡದೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಬೇಗ ಅಧ್ಯಕ್ಷರ ಆಯ್ಕೆಯಾಗಬೇಕು ಎಂದು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಯ ಹಲವು ಸದಸ್ಯರು ಹೇಳಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: Congress Crisis: ಇಂದು ಪ್ರಿಯಾಂಕಾ ಗಾಂಧಿ ರಾಜೀನಾಮೆ, ಕಾಂಗ್ರೆಸಿನಲ್ಲಿ ದೊಡ್ಡ ಬದಲಾವಣೆಯ ನಿರೀಕ್ಷೆ

ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಸಭೆ
ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹಳ ನಿರೀಕ್ಷೆ ಇಟ್ಡುಕೊಂಡಿತ್ತು. ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಪಂಜಾಬ್ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಉತ್ತರಖಂಡಾದಲ್ಲಿ ಗೆಲ್ಲಬಹುದು ಎಂದುಕೊಂಡಿತ್ತು. ಗೋವಾದಲ್ಲಿ ಸರ್ಕಾರ ರಚನೆಗೆ ಬೇಕಾದ 21 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸ ಹೊಂದಿತ್ತು. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಖುದ್ದು ಪ್ರಿಯಾಂಕಾ ಗಾಂಧಿ ಅವರೇ ಉಸ್ತುವಾರಿ ವಹಿಸಿಕೊಂಡು ನಿರಂತರವಾಗಿ ಪ್ರಚಾರ ಮಾಡಿದ ಕಾರಣಕ್ಕೆ ಈ ಬಾರಿ ಹೆಚ್ಚಿನ ಸೀಟುಗಳನ್ನು ಗಳಿಸಬಹುದು.‌ ಕಡೆಪಕ್ಷ ಮತಗಳಿಕೆಯ ಪ್ರಮಾಣವಾದರೂ ಹೆಚ್ಚಾಗಬಹುದು ಎಂದುಕೊಂಡಿತ್ತು. ಆದರೆ ಯಾವೊಂದು ಲೆಕ್ಕಾಚಾರವೂ ಕೈಗೂಡಿಲ್ಲ. ಈ ಹಿನ್ನೆಲೆಯಲ್ಲಿ ಫಲಿತಾಂಶ ಬಂದ ಮೂರೇ ದಿನದಲ್ಲಿ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಕರೆಯಲಾಗಿತ್ತು.
Published by:Kavya V
First published: