ಪಕ್ಷ ಪುನಾರಚಿಸಲು ರಾಹುಲ್​ ಗಾಂಧಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಸಿಡಬ್ಲೂಸಿ

ಕಾಂಗ್ರೆಸ್​​ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯವ ಬಗ್ಗೆ ಕಾಂಗ್ರೆಸ್​​ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ. ಸವಾಲಿನ ಸಂದರ್ಭದಲ್ಲಿ ಅವರು ಪಕ್ಷವನ್ನು ಮುನ್ನಡೆಸಿ, ಯುವಧ್ವನಿಯಾಗಿದ್ದಾರೆ.

Seema.R | news18
Updated:May 25, 2019, 5:13 PM IST
ಪಕ್ಷ ಪುನಾರಚಿಸಲು ರಾಹುಲ್​ ಗಾಂಧಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಸಿಡಬ್ಲೂಸಿ
ಸೋನಿಯಾ- ರಾಹುಲ್​ -ಮನಮೋಹನ್​
  • News18
  • Last Updated: May 25, 2019, 5:13 PM IST
  • Share this:
ನವದೆಹಲಿ (ಮೇ.25):  ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ರಾಹುಲ್ ಗಾಂಧಿ​ ಮನವಿಯನ್ನು ಪಕ್ಷದ ಪ್ರಮುಖ ನಾಯಕರು ತಿರಸ್ಕರಿಸಿದ್ದಾರೆ.

ಕಾಂಗ್ರೆಸ್​ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಪಕ್ಷದ ವಕ್ತಾರ ರಂದೀಪ್​ ಸುರ್ಜೇವಾಲ, ಜನರ ತೀರ್ಪನ್ನು  ಕಾಂಗ್ರೆಸ್​ ನಾಯಕರು ಸ್ವೀಕರಿಸಿದ್ದು, ನಮ್ಮನ್ನು ನಂಬಿದ 12 ಕೋಟೆ ಜನರಿಗೆ ಪಕ್ಷ ಗೌರವಿಸುತ್ತದೆ. ಅಲ್ಲದೇ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸಭೆಯಲ್ಲಿ ಧನ್ಯವಾದವನ್ನು ತಿಳಿಸಿದ್ದಾರೆ.

ಕಾಂಗ್ರೆಸ್​​ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯವ ಬಗ್ಗೆ ಕಾಂಗ್ರೆಸ್​​ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ. ಸವಾಲಿನ ಸಂದರ್ಭದಲ್ಲಿ ಅವರು ಪಕ್ಷವನ್ನು ಮುನ್ನಡೆಸಿ, ಯುವಧ್ವನಿಯಾಗಿದ್ದಾರೆ.  . ಮುಂದಿನ ನಿರ್ಣಯವರೆಗೂ ರಾಹುಲ್ ಮುಂದುವರಿಕೆಯಾಗಲಿದ್ದು, ಪಕ್ಷದ ಪುನಾರಚನೆ ರಾಹುಲ್​ ಗಾಂಧಿಗೆ ಮಾಡಲಿದ್ದು, ಮತ್ತೆ ಅಧಿಕಾರಕ್ಕೆ ಪಕ್ಷವನ್ನು ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಪಕ್ಷವಾಗಿ ಕಾಂಗ್ರೆಸ್​ ಧನಾತ್ಮಕವಾಗಿ ಕೆಲಸ ಮುಂದುವರೆಸಲಿದೆ, ಸಭೆಯಲ್ಲಿ ಸೋಲಿನ ಕುರಿತು ಆತ್ಮಾವಲೋಕನ ನಡೆದಿದೆ. ಸೋಲಿನ ಕುರಿತು ಸಂಪೂರ್ಣ ಚರ್ಚೆ ನಡೆದಿದ್ದು, ಮುಂದಿನ ದಿನದಲ್ಲಿ ಹೇಗೆ ಶಕ್ತಿ ಪ್ರದರ್ಶಿಸಬೇಕು ಎಂಬ ಕುರಿತು ಚಿಂತನೆ ನಡೆಸಲಾಗಿದೆ. ಚುನಾವಣೆಯಲ್ಲಿ ಸತತ ಪ್ರಚಾರ ನಡೆಸಿದ ನಾಯಕರ ಹಾಗೂ ಕಾರ್ಯಕರ್ತರ ಕೆಲಸಕ್ಕೆ ರಾಹುಲ್​ ಗಾಂಧಿ ಅಭಿನಂದಿಸಿದ್ದಾರೆ  ಎಂದು ತಿಳಿಸಿದರು.

ಇದನ್ನು ಓದಿ: ವಿರೋಧ ಪಕ್ಷ ಸ್ಥಾನ ಪಡೆಯುವಲ್ಲಿ ಮತ್ತೆ ವಿಫಲವಾದ ಕಾಂಗ್ರೆಸ್​; ಖರ್ಗೆ ಸೋಲಿನ ಬಳಿಕ ಯಾರಾಗಲಿದ್ದಾರೆ ವಿಪಕ್ಷ ನಾಯಕರು?

ಸಭೆ ಬಳಿಕ ಮಾತನಾಡಿದ ಹಿರಿಯ ನಾಯಕ ಗುಲಾಂ ನಬಿ ಆಜಾದ್​, ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಾಮಾನ್ಯ. ರಾಹುಲ್​ ನಾಯಕರಾಗಿ ಉತ್ತಮ ಪ್ರದರ್ಶನ ತೋರಿದ್ದಾರೆ. ನಮ್ಮ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ. ಅದು ಕೇವಲ ಸಂಖ್ಯಾಬಲದಲ್ಲಿಯೇ ಹೊರತು ಸಿದ್ಧಾಂತಗಳಲ್ಲಿ ಅಲ್ಲ ಎಂದರು.

ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ರಾಹುಲ್​ ನೇತೃತ್ವದಲ್ಲಿ ಕಾಂಗ್ರೆಸ್ 8 ಸ್ಥಾನಗಳ ಹೆಚ್ಚಿಸಿಕೊಂಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 44 ಸ್ಥಾನ ಪಡೆದಿದ್ದ ಕಾಂಗ್ರೆಸ್​ ಈ ಬಾರಿ ಚುನಾವಣೆಯಲ್ಲಿ 52 ಸ್ಥಾನಗಳಿಸಿದೆ. ಅಲ್ಲದೇಕೇಂದ್ರಾಡಳಿತ ಪ್ರದೇಶ ಸೇರಿದಂತೆ 18 ರಾಜ್ಯಗಳಲ್ಲಿ ಕಾಂಗ್ರೆಸ್​ ಖಾತೆ ತೆರಯುವಲ್ಲಿ ವಿಫಲವಾಗಿದೆ.ಸಭೆಯಿಂದ ದೂರ ಉಳಿದ ಕಮಲನಾಥ್​​

ಇನ್ನು ಈ ಸಭೆಯಿಂದ ಮಧ್ಯಪ್ರದೇಶ ಸಿಎಂ ಕಮಲನಾಥ್​ ದೂರ ಉಳಿದಿದ್ದಾರೆ. ಕಾರಣ ಆಪರೇಷನ್​ ಕಮಲ. 230 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 114 ಸ್ಥಾನ ಪಡೆದಿದ್ದು, 109 ಸ್ಥಾನವನ್ನು ಬಿಜೆಪಿ ಪಡೆದಿತ್ತು.   ಇಬ್ಬರು ಬಹುಜನ ಸಮಾಜವಾದಿ ಪಕ್ಷದ  ಶಾಸಕರು ಹಾಗೂ  ಸಮಾಜವಾದಿ ಪಕ್ಷದ ಒಬ್ಬರು , ನಾಲ್ಕು ಪಕ್ಷೇತರ ಅಭ್ಯರ್ಥಿ ಬೆಂಬಲದೊಂದಿಗೆ ಕಮಲನಾಥ್​ ಸರ್ಕಾರ ರಚಿಸಿದ್ದರು. ಈಗ ದೇಶದೆಲ್ಲೆಡೆ ಮೋದಿ ಅಲೆ ಮೂಡಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಆಪರೇಷನ್​ ಕಮಲಕ್ಕೆ ಮುಂದಾಗಿದ್ದಾರೆ. ತಮ್ಮ ಶಾಸಕರ ಉಳಿಸಿಕೊಳ್ಳಲು ಕಮಲನಾಥ್​ ಹರಸಾಹಸ ನಡೆಸಿದ್ದಾರೆ.

 

First published:May 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ