news18-kannada Updated:February 17, 2021, 11:07 AM IST
ಮುದ್ದಾದ ಕರು
ಮುದ್ದಾದ ಪ್ರಾಣಿಯ ವಿಡಿಯೋಗಳನ್ನು ಯಾರು ಇಷ್ಟಪಡುವುದಿಲ್ಲ? ನಾಯಿಮರಿಗಳು ಆಟವಾಡುವ ಕ್ಯೂಟ್ ವಿಡಿಯೋಗಳು, ಬೆಕ್ಕು ಮಾಡುವ ಅವಿವೇಕದ ಕೆಲಸಗಳು ಮತ್ತು ಮರಿ ಆನೆಗಳ ವಿಡಿಯೋ.. ನಿಮ್ಮ ಹೃದಯವನ್ನು ಮೆಲ್ಟ್ ಮಾಡಿ ನಿಮ್ಮನ್ನು ನಗುವಂತೆ ಮಾಡುತ್ತದೆ. ನಿಮ್ಮ ಕೆಲಸದ ಒತ್ತಡಕ್ಕೆ ರಿಲೀಫ್ ನೀಡಲು ಬಯಸುತ್ತಿದ್ದರೆ, ಆ ರೀತಿಯ ವಿಡಿಯೋವನ್ನು ಹುಡುಕುತ್ತಿದ್ದರೆ, ನಿಮಗಾಗಿ ಸರಿಯಾದ ವಿಡಿಯೋ ನಮ್ಮ ಬಳಿ ಇದೆ. ಇತ್ತೀಚೆಗೆ, ಕರು ಅದರ ಮಾಲೀಕರೊಂದಿಗೆ ಆಟವಾಡುವ ವಿಡಿಯೋ ವೈರಲ್ ಆಗುತ್ತಿದೆ. 50 ಸೆಕೆಂಡುಗಳ ಈ ವಿಡಿಯೋ ನಾಚಿಕೆ ಹಾಗೂ ಇಷ್ಟವಾಗುವಂತಿದ್ದು, ಮಾಲೀಕರು ಕರುವನ್ನು ಮುದ್ದು ಮಾಡುತ್ತಿದ್ದರೆ, ಅದು ಅವರನ್ನು ಸುತ್ತುವರೆಯುತ್ತಿತ್ತು. ಕರುವಿನ ಕತ್ತಿಗೆ ಗಂಟೆ ಕಟ್ಟಿದ್ದು, ಆದ್ದರಿಂದ ಅದು ಚಲಿಸುವಾಗಲೆಲ್ಲಾ ಗಂಟೆಗಳು ಶಬ್ದ ಮಾಡುತ್ತವೆ.
ಈ ಕರು ಅಳಿವಿನಂಚಿನಲ್ಲಿರುವ ಪುಂಗನೂರು ಜಾತಿಗೆ ಸೇರಿದ್ದು. ಈ ಹಸುಗಳು 3-4 ಅಡಿ ಎತ್ತರಕ್ಕೆ ಬೆಳೆಯುತ್ತವೆ ಮತ್ತು 150-200 ಕೆ.ಜಿ ತೂಕವಿರುತ್ತವೆ. ಅವರು ದಿನಕ್ಕೆ 4-5 ಲೀಟರ್ನಷ್ಟು ಅಧಿಕ ಕೊಬ್ಬು ಹೊಂದಿರುವ ಹಾಲನ್ನು ಸಹ ನೀಡುತ್ತದೆ.
ವೈದ್ಯಲೋಕಕ್ಕೆ ಸಲಾಂ: ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸಿ ಕಸಿ ಮಾಡಿದ್ದ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ!ವೈರಲ್ ಆಗಿದ್ದ ಪಾಂಡಾ ವಿಡಿಯೋ..!
ಇತ್ತೀಚೆಗೆ, ಅಮೆರಿಕದ ವಾಷಿಂಗ್ಟನ್ ಡಿಸಿ ಮೂಲದ ಸ್ಮಿತ್ಸೋನಿಯನ್ನ ರಾಷ್ಟ್ರೀಯ ಮೃಗಾಲಯ ಮತ್ತು ಸಂರಕ್ಷಣಾ ಜೀವಶಾಸ್ತ್ರ ಸಂಸ್ಥೆ ಮತ್ತೊಂದು ಕಿರು ವಿಡಿಯೋ ಕ್ಲಿಪ್ ವೈರಲ್ ಆಗಿತ್ತು. ಇದು ಎರಡು ಪಾಂಡಾಗಳನ್ನು ಒಂದೊಂದಾಗಿ ತೋರಿಸುತ್ತದೆ. ಇವುಗಳು ಸ್ಲೈಡಿಂಗ್, ರೋಲಿಂಗ್ ಮತ್ತು ಹರ್ಷಚಿತ್ತರಾಗಿ ಚಲನೆಗಳನ್ನು ಮಾಡುತ್ತಿದೆ. ಒಂದು ಪಾಂಡಾ ಮೃಗಾಲಯದ ಹಿಮಭರಿತ ಹಾದಿಯಲ್ಲಿ ಸ್ಲೈಡ್ ಮಾಡುತ್ತದೆ. ಹಾಗೂ ಮತ್ತೆ ಮೇಲಕ್ಕೆ ಹೋಗಲು ಪ್ರಯತ್ನಿಸುತ್ತದೆ. ಅದು ಮತ್ತೆ ಚಲಿಸದಾಗಲೆಲ್ಲ, ಅವನು ಮತ್ತೆ ಸವಾರಿಯನ್ನು ಪ್ರಯತ್ನಿಸಲಿದ್ದಾನೆ ಎಂದು ನಾವು ಭಾವಿಸುತ್ತೇವೆ.
ಈ ಪ್ರಾಣಿಗಳ ವಿಡಿಯೋಗಳು ನಮಗೆ ಖುಷಿ ಉಂಟುಮಾಡುವುದಲ್ಲದೆ, ಈ ವಿಷಯದ ಬಗ್ಗೆ ನಡೆಸಿದ ಅನೇಕ ಅಧ್ಯಯನಗಳ ಪ್ರಕಾರ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.
Published by:
Latha CG
First published:
February 17, 2021, 11:06 AM IST