ಇಂದಿನಿಂದ SBI, Axis, IDBI ಮತ್ತು Syndicate ಬ್ಯಾಂಕ್​ಗಳಲ್ಲಿ ನಿಯಮ ಬದಲಾವಣೆ; ಅಗತ್ಯ ಮಾಹಿತಿ ಇಲ್ಲಿದೆ

ಜುಲೈ 1ರಿಂದ ಆಕ್ಸಿಸ್​ ಬ್ಯಾಂಕ್​​ನ ಗ್ರಾಹಕರು SMS alerts ಸ್ವೀಕರಿಸಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಭಾರತದ ಅತೀ ದೊಡ್ಡ ಬ್ಯಾಂಕ್​ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಹಾಗೂ ಇನ್ನಿತರೆ ಖಾಸಗಿ ಬ್ಯಾಂಕುಗಳು ಜುಲೈ 1ರಿಂದ ತಮ್ಮ ನಿಯಮಗಳನ್ನು ಬದಲಾಯಿಸುತ್ತಿದ್ದು, ಇದು ಖಾತೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ. ಎಸ್​ಬಿಐ, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಮತ್ತು ಕ್ಯಾನೆರಾ ಬ್ಯಾಂಕ್​​ಗಳು ಗುರುವಾರದಿಂದ ತಮ್ಮ ನಿಯಮಗಳನ್ನು ಬದಲಾಯಿಸುತ್ತಿವೆ.

  SBI ಹೊಸ ನಿಯಮಗಳೇನು?

  ಹೊಸ ನಿಯಮಗಳ ಅನುಷ್ಠಾನದ ನಂತರ ಎಟಿಎಂನಿಂದ ನಗದು ಪಡೆಯುವಿಕೆ ಮತ್ತು ಚೆಕ್​ಬುಕ್​ನ್ನು ಬಳಸುವುದು ದುಬಾರಿಯಾಗಿದೆ. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ, ತನ್ನ ಎಟಿಎಂ ಮತ್ತು ಬ್ಯಾಂಕ್ ಶಾಖೆಗಳಿಂದ ಹಣವನ್ನು ಹಿಂಪಡೆಯಲು ಸೇವಾ ಶುಲ್ಕವನ್ನು ಬದಲಾಯಿಸಿದೆ. ಎಸ್​ಬಿಐನ ಅಧಿಕೃತ ವೆಬ್​ಸೈಟ್​​​ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಹೊಸ ಶುಲ್ಕಗಳು ಚೆಕ್​ಬುಕ್, ವರ್ಗಾವಣೆ ಮತ್ತು ಇತರೆ ಹಣಕಾಸು ವ್ಯವಹಾರಗಳಿಗೆ ಅನ್ವಯವಾಗುತ್ತವೆ. ಹೊಸ ಸೇವಾ ಶುಲ್ಕಗಳು ಖಾತೆದಾರರಿಗೆ ಜುಲೈ 1ರಿಂದ ಅನ್ವಯವಾಗಲಿವೆ.

  ಎಸ್​ಬಿಐ ಖಾತೆದಾರರಿಗೆ ಎಟಿಎಂನಲ್ಲಿ ತಿಂಗಳಿಗೆ 4 ಬಾರಿ ಹಣ ವಿತ್​ಡ್ರಾ ಮಾಡುವ ಅವಕಾಶವಿದೆ. ನಾಲ್ಕು ಬಾರಿಯ ಉಚಿತ ಮಿತಿ ಮುಗಿದ ಬಳಿಕ ಬ್ಯಾಂಕ್ ಪ್ರತಿ ವಹಿವಾಟಿಗೆ​ 15 ರೂಪಾಯಿ ಶುಲ್ಕದ ಜೊತೆಗೆ ಜಿಎಸ್​ಟಿ ವಿಧಿಸುತ್ತದೆ. ಕೊರೋನಾ ಬಿಕ್ಕಟ್ಟಿನಿಂದಾಗಿ, ಸ್ಟೇಟ್ ಬ್ಯಾಕ್ ಇಂಡಿಯಾ ನಗದು ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಿದೆ. ಈಗ ಗ್ರಾಹಕರು ತಮ್ಮ ಉಳಿತಾಯ ಖಾತೆಯಿಂದ 25 ಸಾವಿರ ರೂ.ಗಳನ್ನು ಪಡೆಯಬಹುದು.

  ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದವರು ಯಾರಂತ ಗೊತ್ತಿಲ್ಲ, ಅವರನ್ನೇ ಕೇಳಿ ಎಂದ ಭೈರತಿ ಬಸವರಾಜ್..!

  ಇನ್ನು, ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ಪ್ರತಿ ಹಣಕಾಸು ವರ್ಷದಲ್ಲಿ 10 ಚೆಕ್​ಗಳ ಪ್ರತಿ ನೀಡುತ್ತದೆ. ಈಗ ಗ್ರಾಹಕರು 10 ಚೆಕ್​ಗಳನ್ನು ಹೊಂದಿರುವ ಚೆಕ್​ ಪುಸ್ತಕಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈಗ ಬಿಎಸ್​​ಬಿಡಿ ಬ್ಯಾಂಕ್ ಖಾತೆದಾರರು 10 ಚೆಕ್​ಬುಕ್​ಗಳಿಗೆ 40 ರೂ. ಜೊತೆಗೆ ಜಿಎಸ್​ಟಿ ಶುಲ್ಕ, 25 ಚೆಕ್​​ ಬುಕ್​​ಗಳಿಗೆ 75 ರೂ. ಮತ್ತು ಜಿಎಸ್​ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ತುರ್ತು ಚೆಕ್​ಬುಕ್​​ನ 10 ಚೆಕ್​​​ ಪ್ರತಿಗೆ 50 ರೂ.ಜೊತೆಗೆ ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಆದರೆ ಹಿರಿಯ ನಾಗರಿಕರಿಗೆ ಚೆಕ್​ಬುಕ್​ಗಳಲ್ಲಿನ ಹೊಸ ಸೇವಾ ಶುಲ್ಕವನ್ನು ಬ್ಯಾಂಕ್ ಮನ್ನಾ ಮಾಡಿದೆ.

  ಸಿಂಡಿಕೇಟ್​ ಬ್ಯಾಂಕ್​ 

  ಸಿಂಡಿಕೇಟ್​ ಬ್ಯಾಂಕ್​ನಲ್ಲಿ ಕೆಲ ನಿಯಮಗಳು ಬದಲಾವಣೆ ಆಗಿವೆ. ಸಿಂಡಿಕೇಟ್​ ಬ್ಯಾಂಕ್​​ನ IFSC ಕೋಡ್​ ಜುಲೈ 1ರಿಂದ ಬದಲಾಗುತ್ತದೆ. ಬ್ಯಾಂಕ್​ ಗ್ರಾಹಕರು ಇಂದಿನಿಂದ ಹೊಸ ಐಎಫ್​ಎಸ್​ಸಿ(IFSC) ಕೋಡ್​ ಪಡೆಯುತ್ತಾರೆ. ಕ್ಯಾನೆರಾ ಬ್ಯಾಂಕ್​ನೊಂದಿಗೆ ವಿಲೀನಗೊಂಡ ಬಳಿಕ ಈ ಬದಲಾವಣೆ ಆಗಿದೆ.

  ಆಂಧ್ರ ಬ್ಯಾಂಕ್​ ಮತ್ತು ಕಾರ್ಪೋರೇಷನ್​ ಬ್ಯಾಂಕ್​

  ಆಂಧ್ರ ಬ್ಯಾಂಕ್ ಮತ್ತು ಕಾರ್ಪೋರೇಷನ್​ ಬ್ಯಾಂಕ್​ಗಳನ್ನು 2020ರ ಏಪ್ರಿಲ್​ 1ರಂದು ಯೂನಿಯನ್​ ಬ್ಯಾಂಕ್​ನೊಂದಿಗೆ ವಿಲೀನ ಮಾಡಲಾಯಿತು. ಹೀಗಾಗಿ ಆಂಧ್ರ ಬ್ಯಾಂಕ್​ ಮತ್ತು ಕಾರ್ಪೋರೇಷನ್​ ಬ್ಯಾಂಕ್ ಗ್ರಾಹಕರು ಜುಲೈ 1ರಿಂದ ಯೂನಿಯನ್​ ಬ್ಯಾಂಕ್​​ ನೀಡುವ ಹೊಸ ಚೆಕ್​​ ಬುಕ್​ಗಳನ್ನು ಬಳಸಬೇಕಾಗುತ್ತದೆ.

  ಇದನ್ನೂ ಓದಿ:National Doctors Day 2021: ಜುಲೈ 1ರಂದೇ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುವುದೇಕೆ?

  ಆಕ್ಸಿಸ್​ ಬ್ಯಾಂಕ್​​

  ಖಾಸಗಿ ಬ್ಯಾಂಕ್​ ಆದ ಆಕ್ಸಿಸ್​ ಬ್ಯಾಂಕ್ ಉಚಿತ ಮಿತಿಯನ್ನು ಮೀರಿ​ ಎಟಿಎಂಗಳಿಂದ ಹಣ ವಿತ್​ ಡ್ರಾ ಮಾಡುವ ಶುಲ್ಕವನ್ನು ಹೆಚ್ಚಿಸಿದೆ. ಇದು ವಿವಿಧ ರೀತಿಯ ಉಳಿತಾಯ ಖಾತೆಗಳಿಗೆ ಕನಿಷ್ಠ ಬಾಕಿ ಅವಶ್ಯಕತೆಗಳನ್ನು ಹೆಚ್ಚಿಸಿದೆ. ಜುಲೈ 1ರಿಂದ ಆಕ್ಸಿಸ್​ ಬ್ಯಾಂಕ್​​ನ ಗ್ರಾಹಕರು SMS alerts ಸ್ವೀಕರಿಸಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಬ್ಯಾಂಕಿನ ವೆಬ್​ಸೈಟ್​ ಪ್ರಕಾರ, ಗ್ರಾಹಕರು ಪ್ರತಿ SMS ಎಚ್ಚರಿಕೆಗೆ ತಿಂಗಳಿಗೆ ಗರಿಷ್ಠ 25 ರೂಪಾಯಿ ಪಾವತಿಸಬೇಕಾಗುತ್ತದೆ. ಆದಾಗ್ಯೂ ಈ ಶುಲ್ಕಗಳು OTP ಮೆಸೇಜ್​ಗಳಿಗೆ ಅನ್ವಯವಾಗುವುದಿಲ್ಲ.

  ಐಡಿಬಿಐ ಬ್ಯಾಂಕ್

  ಜುಲೈ 1ರಿಂದ ಐಡಿಬಿಐ ಬ್ಯಾಂಕ್​​ ತನ್ನ ಚೆಕ್​ಬುಕ್​​ ಶುಲ್ಕವನ್ನು ಪರಿಷ್ಕರಿಸಿದೆ. ಈಗ, ಐಡಿಬಿಐ ಬ್ಯಾಂಕ್ ಗ್ರಾಹಕರು ವರ್ಷಕ್ಕೆ 20 ಉಚಿತ ಚೆಕ್​​ ಬುಕ್​ಗಳನ್ನು ಪಡೆಯಬಹುದಾಗಿದೆ. ಉಚಿತ ಮಿತಿ ಮೀರಿ ಪಡೆದರೆ ಪ್ರತಿ ಚೆಕ್​ಬುಕ್​ಗೆ 5 ರೂ.ಪಾವತಿಸಬೇಕಾಗುತ್ತದೆ. ‘ಸಬ್ಕಾ ಉಳಿತಾಯ ಖಾತೆ‘ ಹೊಂದಿರುವ ಗ್ರಾಹಕರಿಗೆ ಈ ನಿಯಮ ಬದಲಾವಣೆಯಿಂದ ವಿನಾಯತಿ ನೀಡಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Latha CG
  First published: