ಇನ್ನುಮುಂದೆ ನಿಮ್ಮ ಫೇವರಿಟ್​ ಚಾನೆಲ್​ಗೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು!

ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಗ್ರಾಹಕರಿಗೆ ಇಷ್ಟವಾದ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ನೀಡಿದ್ದು, ಇದಕ್ಕಾಗಿ ವೆಬ್​ ಅಪ್ಲಿಕೇಷನ್​ ಕೂಡ ಆರಂಭಿಸಿದೆ.

sushma chakre | news18
Updated:February 4, 2019, 4:41 PM IST
ಇನ್ನುಮುಂದೆ ನಿಮ್ಮ ಫೇವರಿಟ್​ ಚಾನೆಲ್​ಗೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು!
ಸಾಂದರ್ಭಿಕ ಚಿತ್ರ
sushma chakre | news18
Updated: February 4, 2019, 4:41 PM IST
ನವದೆಹಲಿ (ಫೆ. 4): ಇನ್ನು ಮೇಲೆ ನಿಮ್ಮ ಅಚ್ಚುಮೆಚ್ಚಿನ ಚಾನೆಲ್​ ಯಾವುದೋ ಆ ಚಾನೆಲ್​ಗೆ ಮಾತ್ರ ನೀವು ಹಣ ಪಾವತಿಸಿ ನಿಮ್ಮಷ್ಟದ ಚಾನೆಲ್ ವೀಕ್ಷಿಸಬಹುದು.
ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟಿಆರ್​ಎಐ) ನಮ್ಮ ದೇಶದ ಟಿವಿ ವೀಕ್ಷಣಾ ನಿಯಮಗಳಲ್ಲಿ ಫೆ. 1ರಿಂದ ಬದಲಾವಣೆಗಳನ್ನು ತಂದಿದೆ. ಇದೀಗ ಗ್ರಾಹಕರು ಅವರಿಗೆ ಇಷ್ಟವಾದ ಟಿವಿ ಚಾನೆಲ್​ಗಳನ್ನು ವೀಕ್ಷಿಸಬಹುದು. ಹಾಗೇ, ಅವರಿಗೆ ಫೇವರಿಟ್​ ಎನಿಸಿದ ಚಾನೆಲ್​ಗಳಿಗೆ ಮಾತ್ರ ಅವರು ಹಣ ಪಾವತಿ ಮಾಡಿದರೆ ಸಾಕು.

ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಗ್ರಾಹಕರಿಗೆ ಇಷ್ಟವಾದ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ನೀಡಿದ್ದು, ಇದಕ್ಕಾಗಿ ವೆಬ್​ ಅಪ್ಲಿಕೇಷನ್​ ಕೂಡ ಆರಂಭಿಸಿದೆ. ಆ ವೆಬ್​ ಆ್ಯಪ್​ ಅನ್ನು ಯಾವ ರೀತಿ ಬಳಕೆ ಮಾಡುವುದು ಎಂಬುದನ್ನು ತಿಳಿಸಲು ಒಂದು ವಿಡಿಯೋವನ್ನು ಕೂಡ ಲಗತ್ತಿಸಿದ್ದು, ಈ ಮೂಲಕ ಗ್ರಾಹಕರು ತಮಗೆ ಯಾವ ಪ್ಲಾನ್​ ಬೆಸ್ಟ್​ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೂ ನಿಮ್ಮಿಷ್ಟದ ಪ್ಲಾನ್​ಗೆ ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಈ ವಿಡಿಯೋ ತಿಳಿಸುತ್ತದೆ.

ಇನ್ನು ಆನ್​ಲೈನ್​ ಶಾಪಿಂಗ್​ನಲ್ಲಿ ಕ್ವಿಕ್​ ಡೆಲಿವರಿ ಸಿಗಲ್ಲ!

ನಿಮ್ಮ ಇಷ್ಟದ ಪ್ಲಾನ್​ ಯಾವುದು ಮತ್ತು ಟಿಆರ್​ಎಐನ ವೆಬ್​ ಆ್ಯಪ್​ ಯಾವುದೆಂದು ತಿಳಿಯಲು ಈ ವೆಬ್​ಸೈಟ್​ಗೆ ಭೇಟಿ ನೀಡಿ. https://channel.trai.gov.in/ ಈ ವೆಬ್​ಸೈಟ್​ ಅನ್ನು ಕ್ಲಿಕ್ ಮಾಡಿದ ನಂತರ ಸ್ಟಾರ್ಟ್​ ಎಂಬ ಬಟನ್​ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಹೆಸರು, ರಾಜ್ಯ, ಭಾಷೆಯಂತಹ ಕೆಲವು ಮಾಹಿತಿಗಳನ್ನು ನೀವು ನಮೂದಿಸಬೇಕಾಗುತ್ತದೆ. ನಂತರ ಚಾನೆಲ್​ಗಳ ಪಟ್ಟಿ ವೆಬ್​ಸೈಟ್​ನಲ್ಲಿ ಕಾಣಿಸಿಕೊಳ್ಳುತ್ತದೆ. ಆ ಚಾನೆಲ್​ಗಳ ಪೈಕಿ ನಿಮ್ಮ ಫೇವರಿಟ್​ ಚಾನೆಲ್​ ಅನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು.

ಒನ್​ಪ್ಲಸ್​ 7 ಸ್ಮಾರ್ಟ್​ ಫೋನ್​ ಬಿಡುಗಡೆಗೆ ತಯಾರಿ; 5G ಸಪೋರ್ಟ್​ ಜೊತೆಗೆ ಹೊಸ ಫೀಚರ್​ ಅಳವಡಿಕೆ

ನೀವು ಆಯ್ಕೆ ಮಾಡಿಕೊಳ್ಳುವ ಚಾನೆಲ್​ಗಳಿಗೆ ಅನುಗುಣವಾಗಿ ತಿಂಗಳ ಬಿಲ್ ಎಷ್ಟು ಎಂಬುದು ನಿಗದಿಯಾಗುತ್ತದೆ. ಜನವರಿ 31ರೊಳಗೆ ಈ ರೀತಿಯ ವಿಶೇಷ ಪ್ಯಾಕ್​ಗಳನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಆ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದ್ದು, ವೆಬ್​ಸೈಟ್​ಗೆ ಭೇಟಿ ನೀಡಿ ನಿಮ್ಮಿಷ್ಟದ ಪ್ಯಾಕ್​ಗಳನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ತಿಂಗಳಿಗೆ 130 ರೂ.ಗಳ ಬೇಸಿಕ್​ ಪ್ಯಾಕ್​ಗಳು ಆ್ಯಕ್ಟಿವೇಟ್​ ಆಗುತ್ತದೆ. ಇದಕ್ಕೆ ಜಿಎಸ್​ಟಿ ಸೇರಿ 15 ರೂ.ಗಳನ್ನು ಗ್ರಾಹಕರು ಪಾವತಿ ಮಾಡಬೇಕಾಗುತ್ತದೆ. ಈ ಪ್ಯಾಕ್​ನಲ್ಲಿ ಉಚಿತವಾಗಿ 100 ಚಾನೆಲ್​ಗಳನ್ನು ವೀಕ್ಷಿಸಬಹುದು.
Loading...

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ