ಈ ಆನ್ಲೈನ್(Online)ನಲ್ಲಿ ನಾವು ಆರ್ಡರ್ ಮಾಡುವುದು ಒಂದು, ಡೆಲಿವರಿ ಆಗುವುದು ಮತ್ತೊಂದು. ಇದೆಲ್ಲ ಗೊತ್ತಿದ್ದರೂ ಜನ ಮಾತ್ರ ಆನ್ಲೈನ್ನಲ್ಲಿ ಆರ್ಡರ್ ಮಾಡುವುದನ್ನ ನಿಲ್ಲಿಸುವುದಿಲ್ಲ. ಹೊಸ ಫೋನ್(New Phone) ಆರ್ಡರ್ ಮಾಡಿದವನಿಗೆ, ಬಾಕ್ಸ್ನಲ್ಲಿ ಸೋಪ್(Soap) ಕಳಿಸಿದ್ದನ್ನು ನಾವು ನೋಡಿದ್ದೇವೆ. ಪ್ರತಿಬಾರಿ ಆನ್ಲೈನ್ ಶಾಪಿಂಗ್(Online Shopping) ವೇಳೆ ಹೀಗೇ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತಲೆ ಇರುತ್ತವೆ. ಆದರೆ ಈಗ ಕೇರಳ(Kerala)ದ ವ್ಯಕ್ತಿಯೊಬ್ಬ ಅಮೇಜಾನ್(Amazon)ನಲ್ಲಿ ತನ್ನ ಪಾರ್ಸ್ಪೋರ್ಟ್(Passport) ಇಡಲು ಪೌಚ್(Pouch)ವೊಂದನ್ನು ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಆದ ಬಾಕ್ಸ್ ಕಂಡು ಅವರಿಗೆ ಶಾಕ್ ಆಗಿತ್ತು. ಯಾಕೆಂದರೆ ಬಾಕ್ಸ್ ಓಪನ್ ಮಾಡಿದರೆ ಪೌಚ್ ಬದಲು ಮತ್ತೊಬ್ಬರ ಪಾಸ್ಪೋರ್ಟ್ ಡೆಲಿವರಿ ಆಗಿತ್ತು. ಇದನ್ನು ಕಂಡು ಗ್ರಾಹಕ ಕಕ್ಕಾಬಿಕ್ಕಿಯಾಗಿದ್ದ. ಆನ್ಲೈನ್ ದೈತ್ಯ ಸಂಸ್ಥೆ ಅಮೇಜಾನ್ನಿಂದ ಈ ರೀತಿಯ ಯಡವಟ್ಟು ಮಾಡಿದೆ.
ಪೌಚ್ ಬದಲು ಮತ್ತೊಬ್ಬರ ಪಾಸ್ಪೋರ್ಟ್ ಡೆಲಿವರಿ!
ಅಕ್ಟೋಬರ್ 30ರಂದು ಕೇರಳದ ವಯನಾಡಿನ ಕನಿಯಾಂಬೆಟ್ಟ ಹಳ್ಳಿಯ ನಿವಾಸಿ ಮಿಥುನ್ ಬಾಬಾ ಎಂಬುವವರು ಅಮೇಜಾನ್ನಲ್ಲಿ ಪಾಸ್ಪೋರ್ಟ್ ಪೌಚ್ಗಾಗಿ ಆರ್ಡರ್ ಮಾಡಿದ್ದರು. ಎರಡು ದಿನಗಳ ಬಳಿಕ ಆ ಪ್ರಾಡೆಕ್ಟ್ ಕೈಸೇರುವುದಾಗಿ ಅಮೇಜಾನ್ ತಿಳಿಸಿತ್ತು. ನವೆಂಬರ್ 1ರಂದು ಅಮೇಜಾನ್ನಿಂದ ಡೆಲಿವರಿ ಕೂಡ ಆಯ್ತು. ಆದರೆ ಆ ಪಾರ್ಸೆಲ್ ಓಪನ್ ಮಾಡಿ ನೋಡಿದರೆ, ಅದರಲ್ಲಿ ಮತ್ತೊಬ್ಬರ ಪಾಸ್ಪೋರ್ಟ್ ಇತ್ತು. ಮೊದಲು ಇದನ್ನು ಕಂಡ ಮಿಥುನ್ ಬಾಬಾ, ಇದೊಂದು ಡಮ್ಮಿ ಪಾಸ್ಪೋರ್ಟ್ ಎಂದು ಸುಮ್ಮನಾದರು. ಹೊಸ ಪೌಚ್ನೊಳಗೆ ಡಮ್ಮಿ ಪಾಸ್ಪೋರ್ಟ್ ಇಟ್ಟು ಕಳಿಸಿದ್ದಾರೆ ಅಂದುಕೊಂಡಿದ್ದರು. ಆ ಪಾಸ್ಪೋರ್ಟ್ ಓಪನ್ ಮಾಡಿ ನೋಡಿದ ಬಳಿಕ ಅದು ನಿಜವಾದ ಮತ್ತೊಬ್ಬರ ಪಾಸ್ಪೋರ್ಟ್ ಎಂದು ತಿಳಿದುಬಂದಿದೆ.
ಇದನ್ನು ಓದಿ :ಎರಡು ಬಾರಿ 15 ಕೋಟಿ ಬಂಪರ್ ಪ್ರೈಜ್ ಗೆದ್ದ ವ್ಯಕ್ತಿಯಿಂದ ಲಾಟರಿ ಆಡುವ ಟಿಪ್ಸ್ ಇದು
ಪಾಸ್ಪೋರ್ಟ್ ಮಾಲೀಕನನ್ನು ಪತ್ತೆ ಮಾಡಿದ ಮಿಥುನ್
ಈ ಘಟನೆ ನಡೆಯುತ್ತಿದ್ದಂತೆ ಕೂಡಲೇ ಮಿಥುನ್ ಅಮೇಜಾನ್ ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಆದರೆ ಅವರು ಮುಂದೆ ಈ ರೀತಿಯಾಗುವುದಿಲ್ಲ ಸಾರಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಿಥುನ್ ಆ ಪಾಸ್ಪೋರ್ಟ್ ಯಾರಿಗೆ ಸೇರಬೇಕೋ, ಅವರಿಗೆ ಸೇರಿಸಬೇಕೆಂಬ ಹಠ ಹಿಡಿದರು. ಸ್ವತಃ ಮಿಥುನ್ ಪಾಸ್ಪೋರ್ಟ್ ಮಾಲೀಕನನ್ನು ಪತ್ತೆ ಹಚ್ಚಿ, ಆತನನ್ನು ನೇರವಾಗಿ ಭೇಟಿ ಮಾಡಿದ್ದರು. ತ್ರಿಶೂರ್ ಮೂಲದ ಮೊಹಮ್ಮದ್ ಸಾಲಿಹ್ ಎಂಬಾತನಿಗೆ ಆ ಪಾಸ್ಪೋರ್ಟ್ ಅನ್ನು ಸೇರಿಸಿದ್ದಾರೆ.
ಪೌಚ್ ರಿರ್ಟನ್ ಮಾಡುವ ವೇಳೆ ಯಡವಟ್ಟು
ಮೊಹಮ್ಮದ್ ಸಾಲಿಹ್ ಈ ಹಿಂದೆ ಪಾಸ್ಪೋರ್ಟ್ ಪೌಚ್ ಅನ್ನು ಅಮೇಜಾನ್ನಲ್ಲಿ ಬುಕ್ ಮಾಡಿ ತರಿಸಿಕೊಂಡಿದ್ದರು. ಅದರೊಳಗೆ ಎರಡು ದಿನ ತಮ್ಮ ಪಾಸ್ಪೋರ್ಟ್ ಇಟ್ಟಿದ್ದರು. ಆದರೆ ಅವರಿಗೆ ಆ ಪೌಚ್ ಇಷ್ಟವಾಗಿಲ್ಲ. ಹೀಗಾಗಿ ಆ ಪೌಚ್ ರಿರ್ಟನ್ ಮಾಡಿದ್ದರು. ಆದರೆ ಆ ಪಾಸ್ಪೋರ್ಟ್ ತೆಗೆಯುವುದನ್ನು ಮರೆತಿದ್ದರು. ಇದರಿಂದ ಇಷ್ಟು ಯಡವಟ್ಟು ಆಯಿತು ಎಂದು ಮಿಥುನ್ ಹೇಳಿದ್ದಾರೆ.
ಇದನ್ನು ಓದಿ : ತನ್ನ ಗೆಳೆಯನಿಗೆ ಹಿಂಸೆ ಕೊಡ್ತಿದ್ದವನ ತಿವಿದು ತಳ್ಳಿದ ಹಸು, Friendship ಅಂದ್ರೆ ಇದು!
ಐಫೋನ್ ಬದಲು ಬಂದಿತ್ತು ಸೋಪ್, 5 ರೂ ನಾಣ್ಯ!
ಇತ್ತೀಚೆಗೆ ಎರ್ನಾಕುಲಮ್ನ ನಿವಾಸಿ ಅಮಿನ್ ಎಂಬಾತ ಅಮೇಜಾನ್ನಲ್ಲಿ ಐಫೋನ್ ಆರ್ಡರ್ ಮಾಡಿದ್ದರು. ಆದರೆ ಐಫೋನ್ ಬದಲು ಅವರಿಗೆ ಸೋಪ್ ಬಾರ್ ಹಾಗೂ 5 ರೂ. ನಾಣ್ಯ ಡೆಲಿವರಿಯಾಗಿತ್ತು. ಇದನ್ನು ಕಂಡ ವ್ಯಕ್ತಿ ಕಕ್ಕಾಬಿಕ್ಕಿಯಾಗಿದ್ದ. ಕೊನೆಗೆ ಪೊಲೀಸರು ದೂರು ದಾಖಲಿಸಿಕೊಂಡು ಮಾರಾಟಗಾರನನ್ನು ಪ್ರಶ್ನೆ ಮಾಡಿದ್ದರು. ತಮ್ಮಿಂದ ತಿಳಿಯದೇ ತಪ್ಪಾಗಿದೆ ಎಂದು ಅಮಿನ್ ಫೋನ್ಗಾಗಿ ನೀಡಿದ್ದ 70,900 ರೂಪಾಯಿಗಳನ್ನು ವಾಪಸ್ ನೀಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ