ಜೊಮಾಟೋಗೆ ಟ್ವಿಟ್ಟರ್ನಲ್ಲಿ ಬೆಂಬಲ ನೀಡಿದ ಊಬರ್ ಈಟ್; ಅಷ್ಟಕ್ಕೂ ಆಗಿದ್ದೇನು?
ಆಹಾರಕ್ಕೆ ಯಾವುದೇ ಧರ್ಮವಿಲ್ಲ, ಆಹಾರವೇ ಒಂದು ಧರ್ಮ ಎಂದು ಜೊಮಾಟೋ ಮರುಟ್ವೀಟ್ ಮಾಡಿದೆ. ಈ ಟ್ವೀಟ್ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಊಬರ್ ಈಟ್ ಕೂಡ ಜೊಮಾಟೋಗೆ ಟ್ಯಾಗ್ ಮಾಡಿ ನಾವು ನಿಮ್ಮಂದಿಗಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ನೈತಿಕ ಬೆಂಬಲ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಂದರ್ಭಿಕ ಚಿತ್ರ
- News18
- Last Updated: August 1, 2019, 1:15 PM IST
ಜೊಮಾಟೋ ಡೆಲಿವರಿ ಬಾಯ್ ಫಯಾಜ್ ಮಂಗಳವಾರ ಜಬಾಲ್ಪುರ್ದಲ್ಲಿರುವ ಗ್ರಾಹಕನ ಮನೆಗೆ ಊಟ ತೆಗೆದುಕೊಂಡು ಹೋಗಿದ್ದ. ಆತ ಮುಸ್ಲಿಂ ಎಂಬ ಕಾರಣಕ್ಕೆ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಅಮಿತ್ ಶುಕ್ಲಾ ಜೊಮಾಟೋ ಸಿಬ್ಬಂದಿಗೆ ಕೇಳಿದ್ದ. ಹಾಗೇ, ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದ. 'ಮುಸ್ಲಿಂ ತಂದುಕೊಟ್ಟ ಊಟವನ್ನು ನಾನು ತಿನ್ನುವುದಿಲ್ಲ ಎಂದು ಹೇಳಿದರೂ ಡೆಲಿವರಿ ಬಾಯ್ನನ್ನು ಜೊಮಾಟೋ ಬದಲಾಯಿಸುತ್ತಿಲ್ಲ. ಆಯಾ ಧರ್ಮದ ಗ್ರಾಹಕರಿಗೆ ಸರಿಹೊಂದುವ ಡೆಲಿವರಿ ಬಾಯ್ನನ್ನು ಕಳುಹಿಸುವಷ್ಟು ಸಾಮಾನ್ಯ ಜ್ಞಾನವೂ ಜೊಮಾಟೋಗಿಲ್ಲ' ಎಂದು ಟ್ವೀಟ್ ಮಾಡಿದ್ದ.
ವಿಶ್ವದ ಮೊದಲ ವಿಮಾನ ಚಾಲಕ ರಾವಣ!; ಹೀಗೆ ಘೋಷಣೆ ಮಾಡಿದ್ದು ಯಾರು ಗೊತ್ತಾ?ಅದಕ್ಕೆ ಮರುಟ್ವೀಟ್ ಮಾಡಿದ್ದ ಜೊಮಾಟೋ, 'ಆಹಾರಕ್ಕೆ ಯಾವುದೇ ಧರ್ಮವಿಲ್ಲ, ಆಹಾರವೇ ಒಂದು ಧರ್ಮ' ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಊಬರ್ ಈಟ್ ಕೂಡ ಜೊಮಾಟೋಗೆ ಟ್ಯಾಗ್ ಮಾಡಿ 'ನಾವು ನಿಮ್ಮಂದಿಗಿದ್ದೇವೆ' ಎಂದು ಟ್ವೀಟ್ ಮಾಡುವ ಮೂಲಕ ನೈತಿಕ ಬೆಂಬಲ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ #ಐಡೋಂಟ್ಸ್ಟಾಂಡ್ವಿತ್ಅಮಿತ್ (ಅಮಿತ್ ಹೇಳಿಕೆಗೆ ನಮ್ಮ ಸಹಮತವಿಲ್ಲ) ಎಂಬ ಟ್ಯಾಗ್ನೊಂದಿಗೆ ಹಲವರು ಟ್ವೀಟ್ ಮಾಡುತ್ತಿದ್ದಾರೆ.
.@ZomatoIN, we stand by you. https://t.co/vzjF8RhYzi
— Uber Eats India (@UberEats_IND) July 31, 2019
ನೀವು ವೈದ್ಯರ ಬಳಿ ಹೋದಾಗ ಜೀವ ಉಳಿಯುವುದು ಮುಖ್ಯವಾಗಿರುತ್ತದೆಯೋ ಅಥವಾ ಆಪರೇಷನ್ ಮಾಡುತ್ತಿರುವವರು ಯಾವ ಧರ್ಮದವರು ಎನ್ನುವುದು ಮುಖ್ಯವಾಗಿರುತ್ತದೋ? ಮುಸ್ಲಿಂ ದೇಶಗಳಿಂದ ಬರುವ ಪೆಟ್ರೋಲ್, ಡೀಸೆಲ್ ಮೇಲೆ ಕೂಡ ನಿಷೇಧ ಹೇರುತ್ತೀರಾ? ಎಂದು ಹಲವರು ಅಮಿತ್ ಶುಕ್ಲಾ ಅವರನ್ನು ಟೀಕಿಸಿದ್ದಾರೆ. ನಮ್ಮ ದೇಶವನ್ನು ಕಾಯಲು ಅನೇಕ ಮುಸ್ಲಿಂ ಸೈನಿಕರು ಕೂಡ ಪ್ರಾಣತ್ಯಾಗ ಮಾಡಿದ್ದಾರೆ. ಸ್ವರ್ಗದಲ್ಲಿರುವ ಆ ಸೈನಿಕರು ಈಗ ಅಮಿತ್ ಶುಕ್ಲಾರಂಥವರನ್ನು ನೋಡಿ ತಮ್ಮ ತ್ಯಾಗ ವ್ಯರ್ಥವಾಯಿತಲ್ಲ ಎಂದು ಬೇಸರಿಸಿಕೊಳ್ಳುತ್ತಿರಬಹುದು ಎಂದು ಅಸಮಾಧಾನ ಹೊರಹಾಕಿದ್ದಾರೆ.
#IDontStandWithAmit do you cancel the ride just because the driver is muslim? Do u ask a doctor before checking health whether he’s muslim or not? All those who are boycotting Zomato, Let me ask you when are you going to boycott petrol&diesel since they come from Muslim countries
— Muskan Jadwani (@muskaanjadwani) August 1, 2019
Viral Video; ಹರಿದ್ವಾರ ಯಾತ್ರೆಗೆ ಹೊರಟ ಯುವಕನ ಪಾದ ಮಸಾಜ್ ಮಾಡಿದ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ
ಇನ್ನು ಕೆಲವರು ಅಮಿತ್ ಶುಕ್ಲಾಗೆ ಬೆಂಬಲ ವ್ಯಕ್ತಪಡಿಸಿದ್ದು, ಜೊಮಾಟೋ ಮೇಲೆ ನಿಷೇಧ ಹೇರಿ ಎಂಬ ಟ್ಯಾಗ್ನೊಂದಿಗೆ ಟ್ವೀಟ್ ಮಾಡುತ್ತಿದ್ದಾರೆ. ಅಮಿತ್ ಶುಕ್ಲಾ ಹಿಂದು ಎಂಬ ಕಾರಣಕ್ಕೆ ಆತನನ್ನು ಎಲ್ಲರೂ ಟೀಕಿಸುತ್ತಿದ್ದೀರಿ. ಇದೇರೀತಿ ಓರ್ವ ಮುಸ್ಲಿಂ ಮಾಡಿದ್ದರೆ ನೀವು ಆತನನ್ನು ಪ್ರಶ್ನೆ ಮಾಡುತ್ತಿದ್ದಿರಾ? ಎಂದು ಪ್ರಶ್ನಿಸಿದ್ದಾರೆ.
Because #AmitShukla is a Hindu he is criticising him, does he have guts to criticise a Muslim if #Zomato had sent a non-vegetarian dish cooked from JATKA MEAT instead HALAL MEAT and the Muslim fellow had returned the item.
— Narendra K Varma (@narendravarma49) July 31, 2019
ಅಮಿತ್ ಶುಕ್ಲಾ ಅವರ ಟ್ವೀಟ್ಗೆ ಬಾಲಿವುಡ್ ನಟರು ಸೇರಿದಂತೆ ರಾಜಕಾರಣಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಕೇಂದ್ರ ಸಚಿವ ರಾಮದಾಸ್ ಅಥಾವಳೆ ಸೇರಿದಂತೆ ಹಲವರು ಆಹಾರದ ಜೊತೆ ಧರ್ಮವನ್ನು ಬೆರೆಸುವುದು ತಪ್ಪು ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ವಿದ್ಯಾರ್ಥಿಗಳಿಗೆ ಬೆಂಗಳೂರೇ ಬೆಸ್ಟ್; 2018ರ ಜಾಗತಿಕ QS ಪಟ್ಟಿ ಬಿಡುಗಡೆ
ಇನ್ನು, ಈ ಬಗ್ಗೆ ಅಮಿತ್ ಶುಕ್ಲಾಗೆ ಊಟ ಡೆಲಿವರಿ ನೀಡಲು ಹೋಗಿದ್ದ ಫಯಾಜ್ ಪ್ರತಿಕ್ರಿಯೆ ನೀಡಿದ್ದು, ಈ ಘಟನೆಯಿಂದ ನನಗೆ ಅತೀವ ನೋವಾಗಿದೆ. ಆದರೆ, ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ. ನಾವು ಬಡಜನರು. ಇಂತಹ ಅವಮಾನಗಳನ್ನೆಲ್ಲ ಎದುರಿಸುತ್ತಲೇ ಬಂದವರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಆದರೂ ಅಮಿತ್ ಶುಕ್ಲಾ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ತಮ್ಮ ಬೇಡಿಕೆಯಲ್ಲಿ ತಪ್ಪೇನೂ ಇರಲಿಲ್ಲ. ಶ್ರಾವಣ ಮಾಸ ಶುರುವಾಗಿದೆ. ಹಾಗಾಗಿ, ನಾನು ಮುಸ್ಲಿಂ ಹುಡುಗ ತಂದ ಊಟ ಮಾಡುವುದಿಲ್ಲ ಎಂದು ಹೇಳಿದ್ದೆ. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.