Arrest: ಜೈಲು ಪಾಲಾದ ಬಾಡಿಗೆ ತಾಯಿ: 2 ದಿನದ ಶಿಶುವನ್ನು ಹಸ್ತಾಂತರಿಸುವಂತೆ ನ್ಯಾಯಾಲಯದ ಮೊರೆ ಹೋದ ದಂಪತಿ

ಬಾಡಿಗೆ ತಾಯ್ತನದ ಮೂಲಕ ಜನಿಸಿದ 2 ದಿನದ ನವಜಾತ ಹೆಣ್ಣು ಮಗುವನ್ನು ತಮಗೆ ನೀಡುವಂತೆ ಜೈವಿಕ ಪೋಷಕರು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬಾಡಿಗೆ ತಾಯ್ತನದ (Surrogate motherhood) ಮೂಲಕ ಜನಿಸಿದ 2 ದಿನದ ನವಜಾತ ಹೆಣ್ಣು ಮಗುವನ್ನು ತಮಗೆ ನೀಡುವಂತೆ ಜೈವಿಕ ಪೋಷಕರು ಗುಜರಾತ್ ಹೈಕೋರ್ಟ್‌ಗೆ (High Court) ಅರ್ಜಿ ಸಲ್ಲಿಸಿದ್ದಾರೆ. ಬಾಡಿಗೆ ತಾಯ್ತನದ ಮುಖಾಂತರ ಜನಿಸುವ ಮಕ್ಕಳನ್ನು ಮೊದಲೇ ಮಾಡಿಕೊಂಡ ಒಪ್ಪಂದಗಳ ಪ್ರಕಾರ ಜೈವಿಕ ಪೋಷಕರಿಗೆ ಮಗುವಿನ ಪಾಲನೆ ಮಾಡಲು ಹಸ್ತಾಂತರಿಸುವುದು ರೂಢಿಯಲ್ಲಿರುವಂತದ್ದು. ಆದರೆ ಈ ಪ್ರಕರಣದಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ತಮ್ಮ ಮಗುವಿನ ಪಾಲನೆಗಾಗಿ ದಂಪತಿಗಳು ಕೋರ್ಟ್ ಮೆಟ್ಟಿಲೇರುವಂತಾಗಿದೆ. ಅರ್ಜಿದಾರರು, ರಾಜಸ್ಥಾನ ಮೂಲದ ವಿವಾಹಿತ ದಂಪತಿಗಳು. ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ನಿರ್ಧರಿಸಿ ವರ್ಷದ ಹಿಂದೆ ಅಹಮದಾಬಾದ್‌ಗೆ (Ahmedabad)  ಬಂದಿದ್ದರು. ನಂತರ ವೈದ್ಯರ ಮಾರ್ಗದರ್ಶನದಲ್ಲಿ ಬಾಡಿಗೆ ತಾಯ್ತನದ ವಿಧಾನವನ್ನು 31 ವರ್ಷದ ವಿಚ್ಛೇದಿತ ಮಹಿಳೆಯೊಂದಿಗೆ (divorced woman) ನಡೆಸಲಾಯಿತು.

ಹೆಣ್ಣು ಮಗುವಿನ ಅಪಹರಣದ ಪ್ರಕರಣದಲ್ಲಿ ತಾಯಿಯ ಬಂಧನ
ಇದಾದ ಬಳಿಕ ಈ ವರ್ಷದ ಫೆಬ್ರವರಿಯಲ್ಲಿ ಹೆಣ್ಣು ಮಗುವಿನ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ದಂಪತಿಗಳು ಆಯ್ಕೆಮಾಡಿಕೊಂಡಿದ್ದ ಬಾಡಿಗೆ ತಾಯಿಯನ್ನು ಪೊಲೀಸರು ಹೆಣ್ಣು ಮಗುವಿನ ಅಪಹರಣದ ಪ್ರಕರಣದಲ್ಲಿ ಬಂಧಿಸಿದ್ದರು. ಬಾಡಿಗೆ ತಾಯಿಯನ್ನು ಸೆಕ್ಷನ್ 363, 370 ಅಡಿಯಲ್ಲಿ ಕೇಸ್ ಹಾಕಿ ಬಂಧಿಸಿ ಸಬರಮತಿ ಜೈಲಿಗೆ ಕಳುಹಿಸಿದ್ದರು. ಏಪ್ರಿಲ್ 6ರಂದು, ನಗರದ ಸೆಷನ್ಸ್ ನ್ಯಾಯಾಲಯವು ಸಹ ಆಕೆಗೆ ಜಾಮೀನನ್ನು ನೀಡಲು ನಿರಾಕರಿಸಿತು. ಹೀಗಾಗಿ ಈ ಎಲ್ಲಾ ಘಟನೆಗಳಿಂದಾಗಿ ಜೈವಿಕ ಪೋಷಕರಿಗೆ ತಮ್ಮ ಮಗುವನ್ನು ಪಡೆದುಕೊಳ್ಳುವ ಪರಿಸ್ಥಿತಿ ಜಟಿಲವಾಗಿಬಿಟ್ಟಿದೆ.

ಬಳಿಕ ಜೈಲಿನಲ್ಲಿದ್ದ ಬಾಡಿಗೆ ತಾಯಿಗೆ ಜೂನ್ 20ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಬಾಡಿಗೆ ತಾಯಿಯನ್ನು ಸಾಬರಮತಿ ಜೈಲಿಗೆ ಕಳುಹಿಸಲಾಯಿತು. ನಂತರ ಜೂನ್ 2ರಂದು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯ ಸಿಬ್ಬಂದಿ ಜೈವಿಕ ಪೋಷಕರಿಗೆ ಮಗುವನ್ನು ಹಸ್ತಾಂತರಿಸಿದರು. ಆದರೆ ಜೈಲು ಅಧಿಕಾರಿಗಳು ಬಾಡಿಗೆ ತಾಯಿ ಮೇಲಿರುವ ಕೇಸ್ ನಿಂದಾಗಿ ಜೈವಿಕ ಪೋಷಕರಿಗೆ ಮಗುವನ್ನು ಹಸ್ತಾಂತರಿಸಲು ನಿರಾಕರಿಸಿದರು. ಅಧಿಕಾರಿಗಳಿಗೆ ಮನವರಿಕೆ ಮಾಡುವ ವಿಫಲ ಪ್ರಯತ್ನದ ನಂತರ ದಂಪತಿಗಳು ಹೈಕೋರ್ಟ್‌ಗೆ ಮೊರೆ ಹೋಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು.

ಇದನ್ನೂ ಓದಿ: Uttarakhand Gangrape: ಲಿಫ್ಟ್ ನೀಡುವುದಾಗಿ ತಾಯಿ, 6 ವರ್ಷದ ಮಗಳ ಮೇಲೆ ಚಲಿಸುವ ಕಾರಲ್ಲಿ ಗ್ಯಾಂಗ್​ರೇಪ್​​

"ನವಜಾತ ಶಿಶು ತನ್ನ ಯಾವುದೇ ತಪ್ಪಿಗೆ ಶಿಕ್ಷೆಯನ್ನು ಪಡೆಯುತ್ತಿರುವುದು ಸಂಪೂರ್ಣವಾಗಿ ದುರದೃಷ್ಟಕರ ಮತ್ತು ಅವಳು ಅರ್ಜಿದಾರರ ಮಗುವಾಗಿದ್ದರೂ ಸಹ, ಪ್ರತಿವಾದಿ ಅಧಿಕಾರಿಗಳು ಯಾವುದೇ ಮಾನ್ಯ ಕಾರಣಗಳಿಲ್ಲದೆ ಅವರ ಕಾನೂನು ಪಾಲನೆಯಿಂದ ವಂಚಿತರಾಗುತ್ತಿದ್ದಾರೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮಗುವನ್ನು ಹೆತ್ತ ತಾಯಿಯೊಂದಿಗೆ ಸಾಬರಮತಿ ಜೈಲಿಗೆ ಕರೆದೊಯ್ದರೆ ಮತ್ತು ಅಧಿಕಾರಿಗಳು ವಿಶೇಷ ವಾರ್ಡ್‌ನಲ್ಲಿ ಸೂಕ್ತ ಆರೈಕೆ ಮಾಡುವ ಸ್ಥಿತಿಯಲ್ಲಿದ್ದರೂ ಅದು “ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ದಂಪತಿಗೆ ನವಜಾತ ಶಿಶುವಿನ ಪಾಲನೆಯನ್ನು ಹಸ್ತಾಂತರಿಸಲು ಸೂಚನೆ
ಬಾಡಿಗೆ ತಾಯಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ದಂಪತಿಗೆ ನವಜಾತ ಶಿಶುವಿನ ಪಾಲನೆಯನ್ನು ಹಸ್ತಾಂತರಿಸಲು ಗೋಮತಿಪುರ ಪೊಲೀಸರು ಮತ್ತು ಸಾಬರಮತಿ ಜೈಲು ಅಧಿಕಾರಿಗಳು ನಿರಾಕರಿಸಿದ್ದರಿಂದ ದಂಪತಿಗಳು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ದಂಪತಿಗಳು ನೆರೆಯ ರಾಜ್ಯದವರಾಗಿದ್ದು, ವಕೀಲೆ ಪೂನಂ ಮೆಹ್ತಾ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Artist: ಈ ಕಲಾವಿದನಿಗೆ ದುರಸ್ಥಿಗೊಂಡ ರಸ್ತೆಗಳೇ ಕ್ಯಾನ್ವಾಸ್ ಅಂತೆ! ಎಷ್ಟು ಚೆನ್ನಾಗಿದೆ ಅಲ್ವಾ ಈ ಕಲಾಕೃತಿಗಳು

ಗುರುವಾರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಲಾಯಿತು, ಅವರು ತುರ್ತು ಪರಿಚಲನೆಗೆ ಅವಕಾಶ ಮಾಡಿಕೊಟ್ಟರು. ಈ ವಿಷಯವನ್ನು ಆಲಿಸಿದ ಪೀಠವು ಅದನ್ನು ಹೇಬಿಯಸ್ ಕಾರ್ಪಸ್ ವಿಷಯವೆಂದು ಪರಿಗಣಿಸಿತು ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಾಂಚೋಲಿ ನೇತೃತ್ವದ ಮತ್ತೊಂದು ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿತು. ಈ ಸಂಬಂಧ ವಿಚಾರಣೆ ನಡೆಸಿದ ಪೀಠವು ಗುಜರಾತ್ ಹೈಕೋರ್ಟ್ ಅಹಮದಾಬಾದ್ ಕೇಂದ್ರ ಕಾರಾಗೃಹದ ಆಡಳಿತಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ. ಮಗುವಿನ ಪಾಲನೆಯನ್ನು ಹಸ್ತಾಂತರಿಸಲು ಸಿದ್ಧ ಎಂದು ಅಫಿಡವಿಟ್ ಸಲ್ಲಿಸುವಂತೆ ತಾಯಿಗೆ ಸೂಚಿಸಲಾಗಿದೆ. ಅಫಿಡವಿಟ್ ಸಲ್ಲಿಸುವ ಮೂಲಕ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ಗೋಮ್ತಿಪುರ ಪೊಲೀಸರನ್ನು ಸಹ ಕೇಳಿದೆ.
Published by:Ashwini Prabhu
First published: