CT Ravi: ಡಿ.ಕೆ. ಶಿವಕುಮಾರ್ ಅವರದು ಡೇಂಜರ್ ಬ್ಲಡ್: ಸಿ.ಟಿ. ರವಿ

ಸಂಸದ ಡಿ.ಕೆ. ಸುರೇಶ್ ತಾವು ಮಾಡಿರುವ ಅಭಿವೃದ್ಧಿ ಬಗ್ಗೆ ಹೇಳುವುದಕ್ಕೆ ಅವಕಾಶ ಇತ್ತು. ಅದನ್ನು ಬಿಟ್ಟು ಗೂಂಡಾಗಿರಿ ಮತ್ತು ದೌರ್ಜನ್ಯದ ಮೂಲಕ ಹೇಳುವುದಕ್ಕೆ ಹೊಗಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಸಿಟಿ ರವಿ

ಸಿಟಿ ರವಿ

  • Share this:
ನವದೆಹಲಿ, (ಜ. 4): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ (Chief Minister Basavaraja Bommai) ಅವರ ಎದುರೇ ಸಚಿವ ಡಾ. ಸಿ. ಎನ್. ಅಶ್ವಥನಾರಾಯಣ (Dr. CN Ashwathnarayan) ಅವರ ಮೇಲೆ ವೇದಿಕೆಯಲ್ಲಿಯೇ  ಸಂಸದ ಡಿ. ಕೆ. ಸುರೇಶ್ (D.K. Suresh) ಹಲ್ಲೆಗೆ ಮುಂದಾಗಿದ್ದಾರೆ. ಗೂಂಡಾಗಿರಿ ಮೂಲಕ ಅಭಿಪ್ರಾಯ ಭೇದ ಹತ್ತಿಕ್ಕಲು ಸಾಧ್ಯವಿಲ್ಲ. ಸಂಸದ ಡಿ. ಕೆ. ಸುರೇಶ್ ತಾವು ಮಾಡಿರುವ ಅಭಿವೃದ್ಧಿ ಬಗ್ಗೆ ಹೇಳುವುದಕ್ಕೆ ಅವಕಾಶ ಇತ್ತು. ಅದನ್ನು ಬಿಟ್ಟು ಗೂಂಡಾಗಿರಿ ಮತ್ತು ದೌರ್ಜನ್ಯ ಮೂಲಕ ಹೇಳುವುದಕ್ಕೆ ಹೊಗಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (BJP National General Secretary CT Ravi) ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ‌. ರವಿ, ತಮ್ಮ ಸಹೋದರ ಡಿ.ಕೆ. ಸುರೇಶ್ ನಡೆಯನ್ನು ಸಮರ್ಥಿಸುವ ಭರದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು 'ನಮ್ಮ ರಕ್ತವೇ ಬೇರೆ' ಎಂದಿದ್ದಾರೆ. ಈ ರೀತಿಯ ರಕ್ತದ 'ಕನಕಪುರ ಮಾಡೆಲ್' ರಾಜ್ಯಕ್ಕೆ ವಿಸ್ತರಿಸಿದರೆ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ. ಡಿ.ಕೆ.‌ ಶಿವಕುಮಾರ್ ಅವರ ಬ್ಲಡ್ 'ಡೇಂಜರ್ ಬ್ಲಡ್' ಎಂದು ತೋರಿಸಿದ್ದಾರೆ. ಇದರ ಸಣ್ಣ ಸ್ಯಾಂಪಲ್ ಅನ್ನು ಡಿ.ಕೆ. ಸುರೇಶ್ ತೋರಿಸಿದ್ದಾರೆ ಎಂದು ಕಿಡಿಕಾರಿದರು.

ಮಹಿಳಾ ವಿರೋಧಿತನ ಸಮರ್ಥಿಸಿದ ಸಿ.ಟಿ. ರವಿ
'ಗಂಡಸ್ಥನ' ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ  ಸಹಜ. ಆದರೆ ಅದನ್ನೇ ನೆಪವಾಗಿ ಇಟ್ಟುಕೊಂಡು ತೋಳು ಏರಿಸಿಕೊಂಡು ಹೋಗುವುದು ತಪ್ಪು. ಮಾತಿಗೆ ಮಾತಿನಲ್ಲಿ ಉತ್ತರಕೊಡುವುದು ಪ್ರಜಾಪ್ರಭುತ್ವದ ಸೊಗಸು. ಸಚಿವ ಅಶ್ವಥನಾರಾಯಣ್ ಅವರು ನಿರ್ವೀರ್ಯರು ಅಂತಾ ಏನು ಹೇಳಿಲ್ಲವಲ್ಲ?. ಗಂಡಸ್ತನ ಎನ್ನುವುದು ಅಸಂಸದೀಯ ಪದ ಅಲ್ಲ ಎಂದು ಸಿ. ಟಿ. ರವಿ ಹೇಳಿದರು. ಈ ಮೂಲಕ ಅಶ್ವಥನಾರಾಯಣ್ ಅವರ ಮಹಿಳಾ ವಿರೋಧಿ 'ಗಂಡಸ್ತನ' ಎಂಬ ಮಾತನ್ನು ಸಿ.ಟಿ. ರವಿ ಸಮರ್ಥಿಸಿಕೊಂಡಿದ್ದಾರೆ.

ಇದನ್ನು ಓದಿ: ವೇದಿಕೆ ಮೇಲೆಯೇ ಸಂಸದ-ಸಚಿವರ ‘ಗಂಡಸ್ತನ’ದ ಗಲಾಟೆ.. ಹೈಡ್ರಾಮಾ ಕಂಡು ಪೆಚ್ಚಾದ CM Bommai

ಗಂಡಸ್ತನ ಬಿಜೆಪಿ ಸಂಸ್ಕೃತಿಯೇ?
ರಾಮನಗರದಲ್ಲಿ ಸಚಿವ ಅಶ್ವತ್ಥ ಮತ್ತು ಸಂಸದ ಡಿ.ಕೆ.ಸುರೇಶ್ ನಡುವಿನ ವಾಕ್ಸಮರ ಇಂದು ಸಹ ಮುಂದುವರಿದಿದೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ. ಸುರೇಶ್ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿಯ  ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳ ಮುಂದೆ ಸಚಿವರ ನಡವಳಿಕೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ತಿದ್ದಾರೆ. ಮುಖ್ಯಮಂತ್ರಿಗಳೇ ಸಚಿವರಿಗೆ ಭಾಷಣ ಮಾಡಿದ್ದು ಸಾಕು ಎಂದು ಸೂಚನೆ ಮಾಡಿದ್ರು. ಆದರೂ ಅವರು ನಿಲ್ಲಿಸಲಿಲ್ಲ.

ಇದನ್ನು ಓದಿ: ‘ಕನಕಪುರದ ರೌಡಿ’ಯಿಂದ ಅಟ್ಟಹಾಸ.. ವೇದಿಕೆ ಮೇಲಿನ ಕಿತ್ತಾಟ Tweet War ಮೂಲಕ ಮುಂದುವರಿಕೆ..

ಇದು ರಾಜ್ಯದ ಜನಕ್ಕೆ ಅವಮಾನ ಬರುವ ರೀತಿಯ ವರ್ತನೆ. ಒಬ್ಬ  ಮಂತ್ರಿ ಅನವಶ್ಯಕವಾಗಿ ಸಭೆಯನ್ನು ಹೊರತು ಪಡಿಸಿ ಮಾತಾಡಿದ್ರು. ನಾವು ಬಿಜೆಪಿಯವರು, ನಾವು ಆಡೋದೇ ಹಿಂಗೆ, ಗಂಡಸಿದ್ರೆ ಬನ್ನಿ ಅಂತಾ ಮಾತಾಡ್ತಾರೆ. ಇದು ನನಗೆ ಮಾಡಿದ ಅಪಮಾನ ಅಲ್ಲ. ರಾಮನಗರ ಜನಕ್ಕೆ ಮಾಡಿದ ಅಪಮಾನ, ನಾಡಪ್ರಭು ಕೆಂಪೇಗೌಡರಿಗೆ ಮಾಡಿದ ಅವಮಾನ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿಕೆಯನ್ನು ಸಂಸದ ಡಿ. ಕೆ. ಸುರೇಶ್ ಖಂಡಿಸಿದ್ದಾರೆ.

ಸರ್ಕಾರದ ಕಾರ್ಯಕ್ರಮದಲ್ಲಿ ಇಂಥಾ ಮಾತುಗಳು ಸರಿಯೇ ಎಂದು ಬಿಜೆಪಿ ಅವರ ರಾಜ್ಯದ ಅಧ್ಯಕ್ಷರಿಗೆ ನಾನು ಕೇಳಲು ಬಯಸುತ್ತೇನೆ. ಒಬ್ಬ ಸಿಎಂ ಮುಂದೆ, ಆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಮುಂದೆ ಅವರು ಮಾಡಿದ್ದು ಸರಿಯೇ ಎಂದು ಡಿ. ಕೆ. ಸುರೇಶ್ ಪ್ರಶ್ನೆ ಮಾಡಿದ್ದಾರೆ.
Published by:Seema R
First published: