State BJP Crisis: ವಿಜಯೇಂದ್ರಗೆ ಪರಿಷತ್ ಟಿಕೆಟ್ ಮಿಸ್ ಆದ ಬಗ್ಗೆ ಸಿ.ಟಿ. ರವಿ ಏನು ಹೇಳಿದ್ದಾರೆ ಗೊತ್ತಾ?

'ಯಡಿಯೂರಪ್ಪ ಅಧಿಕಾರದ ಅವಧಿಯಲ್ಲಿ ಭಾವನಾತ್ಮಕ ವಿಚಾರಗಳ ರಾಜಕೀಯ ಮಾಡಿರಲಿಲ್ಲ. ಕೋಮುಸೌಹಾರ್ದತೆಗೆ ಭಂಗ ಆಗಿರಲಿಲ್ಲ' ಎಂಬ ವಿಜಯೇಂದ್ರ‌‌ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿ.ಟಿ. ರವಿ ನಿರಾಕರಿಸಿದರು.

ಸಿ.ಟಿ.ರವಿ

ಸಿ.ಟಿ.ರವಿ

  • Share this:
ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Former Chief Minister BS Yadiyurappa) ಪುತ್ರ ಬಿ‌.ವೈ. ವಿಜಯೇಂದ್ರಗೆ (BY Vijayendra) ವಿಧಾನ ಪರಿಷತ್ ಟಿಕೆಟ್ (MLC Polls) ಮಿಸ್ ಆಗಿರುವ ವಿಷಯ ರಾಜ್ಯದಲ್ಲಿ ಈಗ ಭಾರೀ ಚರ್ಚೆ ಆಗುತ್ತಿದೆ. ಈ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (BJP National General Secretary CT Ravi), 'ವಿಜಯೇಂದ್ರ ನಮ್ಮ ಪಕ್ಷದ ಯುವ ನಾಯಕ, ಎರಡು ಮೂರು ಕ್ಷೇತ್ರಗಳಲ್ಲಿ ನಿಂತು ಗೆಲ್ಲುವ ಸಾಮರ್ಥ್ಯ ಇರುವ ನಾಯಕ. ವಿಜಯೇಂದ್ರ ಜೊತೆಗೆ ನಿನ್ನೆ ಮಾತನಾಡಿದ್ದೇನೆ. ಹೆಚ್ಚೇನೂ ಮಾತನಾಡುವುದಿಲ್ಲ' ಎಂದಿದ್ದಾರೆ. ಇತ್ತ ವಿಜಯೇಂದ್ರ ಅವರಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಹಲವು ಚರ್ಚೆಗಳು ನಡೆದಿವೆ.

ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಲು ಸಿಟಿ ರವಿ ನಕಾರ

'ಯಡಿಯೂರಪ್ಪ ಅಧಿಕಾರದ ಅವಧಿಯಲ್ಲಿ ಭಾವನಾತ್ಮಕ ವಿಚಾರಗಳ ರಾಜಕೀಯ ಮಾಡಿರಲಿಲ್ಲ. ಕೋಮುಸೌಹಾರ್ದತೆಗೆ ಭಂಗ ಆಗಿರಲಿಲ್ಲ' ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಟಿ ರವಿ, 'ಯಡಿಯೂರಪ್ಪ, ಬೊಮ್ಮಾಯಿ ಶೆಟ್ಟರ್ ಎಲ್ಲರದ್ದೂ ಬಿಜೆಪಿ ಸರ್ಕಾರ.‌ ಎಲ್ಲರ ವೇಳೆ ನಾನು ಶಾಸಕನಾಗಿ ಆಡಳಿತ ನೋಡಿದ್ದೇನೆ.‌ ವಿಜಯೇಂದ್ರ ಯಾವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ' ಎಂದರು.

ಇದನ್ನೂ ಓದಿ:   MLC Poll: ವಿಜಯೇಂದ್ರಗೆ ಟಿಕೆಟ್ ಮಿಸ್; ಸರ್ಕಾರದ ಮೇಲೆ ಗಂಭೀರ ಪರಿಣಾಮ ಅಂದ್ರು ಹೆಚ್.ಡಿ.ಕುಮಾರಸ್ವಾಮಿ

ದೇವನೂರು ಮಹಾದೇವ ಪಠ್ಯ ಕೈಬಿಡಲಿ

ಪಠ್ಯದಿಂದ ಸಾಹಿತಿಗಳ ಬರಹ ಹಿಂಪಡೆಯುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ದೇವನೂರು ಮಹಾದೇವ ಪಠ್ಯದಲ್ಲಿ ಬೇಕೆ ಬೇಕು ಎಂಬ ಒತ್ತಾಯವಿಲ್ಲ. ಬೇಡ ಎನ್ನುವ ಅವರ ಅಭಿಪ್ರಾಯವನ್ನು ಸಮಿತಿ ಗೌರವಿಸಬೇಕು.‌ ಪೂರ್ವಾಗ್ರಹ ಪೀಡಿತ ಮನಸ್ಸುಗಳು ಹೀಗೆ ಮಾಡುತ್ತಿವೆ. ಕಂಟೆಂಟ್ ಮೇಲೆ ಕಾಮೆಂಟ್ ಮಾಡಬೇಕು. ಪಠ್ಯ ಬರುವುದಕ್ಕೆ ಮುಂಚೆ ಜನಿವಾರೋ, ಉಡುದಾರವೋ, ಶಿವದಾರವೋ ಎಂದು ನೋಡುವುದು ತಪ್ಪು. ಜಾತಿಗಳನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬದಲಾಗಿದೆ

ಹಿಂದಿನ ಪಠ್ಯದಲ್ಲಿ ಮೊಘಲರನ್ನು ವೈಭವಿಕರಣ ಮಾಡುವ ಕೆಲಸ ಮಾಡಿದ್ದರು. ಛತ್ರಪತಿ ಶಿವಾಜಿ ಅವರ ವಿಷಯನ್ನು ಹೆಚ್ಚು ಹೇಳಿರಲಿಲ್ಲ. ಭಾರತೀಯತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿರಲಿಲ್ಲ. 70 ವರ್ಷದ ಆಡಳಿತಕ್ಕೆ ಪೆಟ್ಟು ಬಿದಿದ್ದೆ, ಹೀಗಾಗಿ ವಿಲ ವಿಲ ಎಂದು ಒದ್ದಾಡುತ್ತಿದ್ದಾರೆ.

ಕೆಲವರು ಈಗಲೂ ಮೊಘಲ್ ಆಸ್ಥಾನದಲ್ಲಿದ್ದೇವೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ ಎಂದರು.

ಶ್ರೀರಂಗಪಟ್ಟಣ ಮಸೀದಿ ಬಗ್ಗೆ ಅಧ್ಯಯನ ನಡೆಯಲಿ

ಮಳಲಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ ಸತ್ಯ. ನಾನು ಈಗಲೂ ಸವಾಲು ಹಾಕುತ್ತೇನೆ, ಶ್ರೀರಂಗಪಟ್ಟಣ ಜಾಮೀಯ ಮಸೀದಿಯ (Srirangapattana Jamia Mosque) ಬಗ್ಗೆ ಪುರಾತತ್ವ ಇಲಾಖೆಯಿಂದ ಅಧ್ಯಯನ ಮಾಡಿಸಲಿ.‌

ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ.‌ ಈ‌ ನೆಲದ ಕಾನೂನು ಅಂತಿಮ. ಕಾನೂನು ಅಡಿಯಲ್ಲಿ ವಿವಾದ ಇತ್ಯರ್ಥವಾಗಲಿದೆ ಎಂದರು.

ಇದನ್ನೂ ಓದಿ:  Text Book Row: ಸಮಿತಿ ನೇಮಕ ಮಾಡುವಾಗಲೇ ಸರ್ಕಾರ ಎಡವಿದೆ: ಕರವೇ ನಾರಾಯಣಗೌಡರು

ಸತ್ಯ ಗೊತ್ತಿದ್ರೂ ರಾಜಕೀಯ ಮಾಡ್ತಾರೆ

ಕೆಲವರು ಹಿಡಿಯಾಗಿ ಸಿಗುವ ವೋಟಿಗಾಗಿ ಕೆಲವರು ಜೊಲ್ಲು ಸುರಿಸಿಕೊಂಡು ಹೋಗುತ್ತಾರೆ. ಸತ್ಯ ಗೊತ್ತಿದ್ದರೂ ವೋಟಿಗಾಗಿ ರಾಜಕೀಯ ಮಾಡುತ್ತಾರೆ.‌ ನಾವು ವೋಟಿಗಾಗಿ ರಾಜಕೀಯ ಮಾಡಿಲ್ಲ.‌ ನಾಲ್ಕು ತಲೆಮಾರು ಇದೇ ವಿಚಾರಗಳ ಮೇಲೆ ಹೋರಾಟ ಮಾಡಿದ್ದೇವೆ.‌ ನಂಬಿಕೆ ಇರುವವರ ದೇವರ ಮೊರೆ ಹೋಗುತ್ತಾರೆ. ಅಧಿಕಾರಕ್ಕಾಗಿ ಹೋಮ ಮಾಡುತ್ತಾರೆ ಅವರ ನಂಬಿಕೆಯನ್ನು ಪ್ರಶ್ನೆ ಮಾಡೋಕೆ ನಾವು ಯಾರು‌‌? ಎಂದು ಪ್ರಶ್ನಿಸಿದರು.
Published by:Mahmadrafik K
First published: