• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Oil Price Drop: ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗುತ್ತಾ? ಬೈಡನ್ ಚರ್ಚೆ ಬೆನ್ನಲ್ಲೇ ಗುಡ್​​ನ್ಯೂಸ್!

Oil Price Drop: ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗುತ್ತಾ? ಬೈಡನ್ ಚರ್ಚೆ ಬೆನ್ನಲ್ಲೇ ಗುಡ್​​ನ್ಯೂಸ್!

ಅಮೆರಿಕದ ಅಧ್ಯಕ್ಷ ಜೋ ಬಿಡೇನ್

ಅಮೆರಿಕದ ಅಧ್ಯಕ್ಷ ಜೋ ಬಿಡೇನ್

ಇರಾನಿನ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಜೋ ಬಿಡೇನ್ ಯುರೋಪ್ ನಾಯಕರೊಂದಿಗೆ ಚರ್ಚಿಸುತ್ತಿದ್ದಂತೆ ಕಚ್ಚಾ ತೈಲದ ಬೆಲೆಯಲ್ಲಿ ಶೇ. 2 ರಷ್ಟು ಕುಸಿತ ಕಂಡುಬಂದಿರುವುದಾಗಿ ತಿಳಿದುಬಂದಿದೆ. ಬ್ರೆಂಟ್ ಕಚ್ಚಾ ತೈಲ ಜಾಗತಿಕ ಬೆಂಚ್ ಮಾರ್ಕ್ ಮಟ್ಟದಲ್ಲಿ 1.56% ರಷ್ಟು ಇಳಿದಿದ್ದು ಪ್ರತಿ ಬ್ಯಾರೆಲ್ ಬೆಲೆ ಸೋಮವಾರ ನಸುಕಿನ 4:45 ಗಂಟೆಯವರೆಗೆ 95.21 ಡಾಲರ್ ಗಳಿಗೆ ಇಳಿಕೆ ಕಂಡಿದೆ.

ಮುಂದೆ ಓದಿ ...
 • Share this:

ಇದೀಗ ಕಚ್ಚಾ ತೈಲದ (Crude oil) ಬೆಲೆಗೆ ಸಂಬಂಧಿಸಿದಂತೆ ಸುದ್ದಿಯೊಂದು ಬೆಳಕಿಗೆ ಬಂದಿದ್ದು ಜಾಗತಿಕ ಮಟ್ಟದ ಕಚ್ಚಾ ತೈಲದ ಬೆಲೆಗೆ ಸಂಬಂಧಿಸಿದಂತೆ ತಲ್ಲಣಗೊಂಡಿರುವ ಪರಿಸ್ಥಿತಿಯು ಕೊನೆಗೂ ಮತ್ತೆ ಚೇತರಿಸಿಕೊಳ್ಳಬಹುದೇನೋ ಎಂಬ ಲಕ್ಷಣಗಳು ಗೋಚರವಾದಂತಾಗಿವೆ. ಇರಾನಿನ ಪರಮಾಣು ಒಪ್ಪಂದಕ್ಕೆ (Iranian nuclear deal) ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಜೋ ಬಿಡೇನ್ (Joe Biden) ಯುರೋಪ್ ನಾಯಕರೊಂದಿಗೆ ಚರ್ಚಿಸುತ್ತಿದ್ದಂತೆ ಕಚ್ಚಾ ತೈಲದ ಬೆಲೆಯಲ್ಲಿ ಶೇ. 2 ರಷ್ಟು ಕುಸಿತ ಕಂಡುಬಂದಿರುವುದಾಗಿ ತಿಳಿದುಬಂದಿದೆ. ಬ್ರೆಂಟ್ ಕಚ್ಚಾ ತೈಲ ಜಾಗತಿಕ ಬೆಂಚ್ ಮಾರ್ಕ್ (Global Benchmark) ಮಟ್ಟದಲ್ಲಿ 1.56% ರಷ್ಟು ಇಳಿದಿದ್ದು ಪ್ರತಿ ಬ್ಯಾರೆಲ್ (Barrel) ಬೆಲೆ ಸೋಮವಾರ ನಸುಕಿನ 4:45 ಗಂಟೆಯವರೆಗೆ 95.21 ಡಾಲರ್ ಗಳಿಗೆ ಇಳಿಕೆ ಕಂಡಿದೆ.


ಅಮರಿಕದ ಬೆಂಚ್ ಮಾರ್ಕ್ ಮಟ್ಟದಲ್ಲಿ WTI ಕಚ್ಚಾ ತೈಲದ 1.43% ರಷ್ಟು ಇಳಿದಿದ್ದು ಪ್ರತಿ ಬ್ಯಾರೆಲ್ ಬೆಲೆ 89.47 ಡಾಲರ್ ಗಳಿಗೆ ಇಳಿದಿದೆ.


ಇರಾನ್ ತೈಲ ಉತ್ಪಾದನೆ ಹಾಗೂ ರಫ್ತುಗಳನ್ನು ಪುನರಾರಂಭ
ಕಳೆದ ವಾರಾಂತ್ಯದಲ್ಲಿ ಅಮೆರಿಕದ ಅಧ್ಯಕ್ಷ ಬಿಡೆನ್ ಅವರು ಯುರೋಪ್ ನಾಯಕರೊಂದಿಗೆ ಇರಾನ್ ಪರಮಾಣು ಒಪ್ಪಂದದ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಅಮೆರಿಕದ ವೈಟ್ ಹೌಸ್ ಮೂಲಗಳಿಂದ ತಿಳಿದುಬಂದಿದೆ. ಈ ಚರ್ಚೆ ಸಾಕಷ್ಟು ಚೇತೋಹರಕಾರಿಯಾಗಿತ್ತೆನ್ನಲಾಗಿದ್ದು ಚರ್ಚೆಗೆ ಸಂಬಂಧಿಸಿದಂತೆ ಎಲ್ಲವೂ ಸರಿ ಹೋಗಿ ಇರಾನ್ ಒಪ್ಪಂದಕ್ಕೆ ಹಸ್ತಾಕ್ಷರ ಮಾಡಿದ್ದೇ ಆಗಿದ್ದಲ್ಲಿ ಮುಂದೆ ಜಾಗತಿಕ ವಲಯದಲ್ಲಿ ಸದ್ಯ ಈಗ ಉಂಟಾಗಿರುವ ಕಚ್ಚಾ ತೈಲದ ಕೊರತೆಯನ್ನು ನೀಗಿಸಲು ಇರಾನ್ ತೈಲ ಉತ್ಪಾದನೆ ಹಾಗೂ ರಫ್ತುಗಳನ್ನು ಪುನರಾರಂಭಿಸಲಿದೆ ಎಂದು ತಿಳಿದುಬಂದಿದೆ.


ವಿವಿಧ ದೇಶದ ಜೊತೆ ಪರಮಾಣು ಒಪ್ಪಂದದ ಚರ್ಚೆ 
ಏತನ್ಮಧ್ಯೆ ಬಿಡೆನ್ ಅವರು ಫ್ರಾನ್ಸ್, ಜರ್ಮನಿ ಹಾಗೂ ಯುಕೆ ದೇಶಗಳೊಂದಿಗೆ ಇರಾನ್ ಪರಮಾಣು ಒಪ್ಪಂದದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಈ ಮೂಲ ಚರ್ಚೆಯ ಹಿಂದೆ ಸದ್ಯ ಇರಾನಿನ ದುರ್ಬಲವಾಗುತ್ತಿರುವ ಚಟುವಟಿಕೆಗಳಿಗೆ ಬೆಂಬಲ ಸೇರಿದಂತೆ ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಇನ್ನಷ್ಟು ಗಟ್ಟಿತನದ ಸಂಬಂಧ ಹೊಂದುವಿಕೆಯ ಉದ್ದೇಶ ಅಡಗಿದೆ ಎಂದಿರುವ ವೈಟ್ ಹೌಸ್ ಮೂಲಗಳನ್ನು ಉದ್ದೇಶಿಸಿ ಜಾಗತಿಕವಲಯದಲ್ಲಿ ಇದನ್ನು ವಿಶ್ಲೇಷಿಸಲಾಗುತ್ತಿದೆ.


ಇದನ್ನೂ ಓದಿ: Cooking Oil: ಜನಸಾಮಾನ್ಯರಿಗೆ ಕೊನೆಗೂ ಸಿಹಿ ಸುದ್ದಿ, ಒಂದೇ ಸಲ ಅಡುಗೆ ಎಣ್ಣೆ 12 ರೂಪಾಯಿ ಕಡಿಮೆ ಆಗುತ್ತಂತೆ!


ಈ ಹಿಂದೆ ಇರಾನ್ ಪರಮಾಣು ಶಕ್ತಿ ಹೊಂದುವಿಕೆಯ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಅದನ್ನು ನಿಯಂತ್ರಿಸಲೆಂದೇ ಅದರ ಮೇಲೆ ದಿಗ್ಬಂಧನಗಳನ್ನು ವಿಧಿಸಲಾಗಿತ್ತು. ಇದರ ನಂತರ ಈ ಬಗ್ಗೆ ಚರ್ಚೆಗಳು ನಡೆದು ಒಪ್ಪಂದವೊಂದರ ಪ್ರಕಾರ, ಇರಾನ್ ತನ್ನ ಪರಮಾಣು ಕನಸನ್ನು ಕೈಬಿಡುವುದಾಗಿ ಹೇಳಿತ್ತು. ಆದರೆ ತನ್ನ ಮೇಲಿರುವ ದಿಗ್ಬಂಧನಗಳನ್ನು ತೆರವುಗೊಳಿಸಬೇಕೆಂದು ಕೇಳಿತ್ತು.


ಈ ಒಪ್ಪಂದವು ಸಾಕಷ್ಟು ಧನಾತ್ಮಕತೆಯನ್ನು ಸೂಚಿಸಿದ್ದರೂ ಅಮೆರಿಕದ ಹಿಂದಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಇದನ್ನು ತಳ್ಳಿ ಹಾಕಿದ್ದರು. ಹಾಗಾಗಿ ಈ ಒಪ್ಪಂದ ಮತ್ತೆ ಬರಬೇಕೆಂಬ ಮಹದಾಸೆಯನ್ನು ಐರೋಪ್ಯ ಒಕ್ಕೂಟ ಹೊಂದಿತ್ತು ಹಾಗೂ ಈ ಬಗ್ಗೆ ಅದು ಒತ್ತಡ ಹಾಕುತ್ತಲೇ ಇತ್ತು. ಕಳೆದ ವಾರ ಇರಾನ್ ತಾನು ಐರೋಪ್ಯ ಒಕ್ಕೂಟದ ಪ್ರಸ್ತಾವನೆಯಿಂದ ಸಂತಸಗೊಂಡಿರುವುದಾಗಿಯೂ ಹಾಗೂ ಆ ಬಗ್ಗೆ ಸಕಾರಾತ್ಮಕ ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ಹೇಳಿತ್ತು.


ಪ್ರಥಮ ಬಾರಿಗೆ ಕಚ್ಚಾ ತೈಲದ ಬೆಲೆಯಲ್ಲಿ ಬೆಲೆ ಇಳಿಕೆ
ಈಗ ಇದೇ ಪ್ರಥಮ ಬಾರಿಗೆ ಅಂದರೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವುದಕ್ಕಿಂತ ಮುಂಚಿನ ಸಮಯಕ್ಕೆ ಹೋಲಿಸಿದರೆ ಕಚ್ಚಾ ತೈಲದ ಬೆಲೆಯಲ್ಲಿ ಕಡಿತವಾಗಿದೆ. ಈ ಒಟ್ಟಾರೆ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿ ಏರಿತ್ತು ಹಾಗೂ ಗರಿಷ್ಠ ಬೆಲೆ 139 ಡಾಲರ್ ಪ್ರತಿ ಬ್ಯಾರೆಲ್ ಗೆ ತಲುಪಿತ್ತು.


ಇದನ್ನೂ ಓದಿ: India-Russia ವ್ಯಾಪಾರ ಅಭಿವೃದ್ಧಿಗೆ INSTC ಕೊಡುಗೆ ಏನು? ಈ ಬಗ್ಗೆ ಕಂಪ್ಲೀಟ್​ ಡೀಟೆಲ್ಸ್ ಇಲ್ಲಿದೆ

top videos


  ಸದ್ಯ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 96 ಡಾಲರ್ ಪ್ರತಿ ಬ್ಯಾರೆಲ್ ಗೆ ಇದ್ದು ಕಳೆದ ವಾರದಿಂದ ತಗ್ಗುವಿಕೆಯು ಕಂಡುಬರುತ್ತಿದೆ. ಇದೀಗ ನಡೆದಿರುವ ಈ ಮಹತ್ವದ ವಿದ್ಯಮಾನದಿಂದಾಗಿ ಇರಾನ್ ಸಹ ತೈಲ ಮಾರುಕಟ್ಟೆಯಲ್ಲಿ ಪ್ರವೇಶಿಸಲಿರುವುದರಿಂದ ತೈಲೋದ್ಯಮಿಗಳು ಬಕ ಪಕ್ಷಿಗಳಂತೆ ಕಾಯುತ್ತಿದ್ದಾಂತಲೇ ಹೇಳಬಹುದು.

  First published: