ಪುಲ್ವಾಮದಲ್ಲಿ ಅನೇಕರ ಪ್ರಾಣ ಉಳಿಸಿದ್ದೂ ಇವರೇ; ಹಸಿದಿದ್ದ ಬಾಲಕನಿಗೆ ತನ್ನ ಊಟ ಕೊಟ್ಟಿದ್ದೂ ಇವರೇ: ಇಕ್ಬಾಲ್ ಸಿಂಗ್​ಗೆ ಪ್ರಶಸ್ತಿ, ಸನ್ಮಾನ

Pulwama: ಕಾಶ್ಮೀರದಲ್ಲಿ ಸ್ಥಳೀಯರ ಮೇಲೆ ಭಾರತೀಯ ಸೈನಿಕರು ದೌರ್ಜನ್ಯ ಎಸಗುತ್ತಾರೆಂಬ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಇಂಥ ಮಾನವೀಯ ಘಟನೆಗಳು ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಹಾಗೂ ಸೈನಿಕರ ಬಗ್ಗೆ ಕಾಶ್ಮೀರಿಗಳಿಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬಹುದು.

ಸಿಆರ್​ಪಿಎಫ್​ ಯೋಧ ಇಕ್ಭಾಲ್​ ಸಿಂಗ್​​

ಸಿಆರ್​ಪಿಎಫ್​ ಯೋಧ ಇಕ್ಭಾಲ್​ ಸಿಂಗ್​​

  • News18
  • Last Updated :
  • Share this:
ನವದೆಹಲಿ(ಮೇ 14): ಫೆಬ್ರವರಿ 14 ಭಾರತೀಯರ ಪಾಲಿಗೆ ಕರಾಳ ದಿನ. ಅಂದು ನಡೆದ ಪುಲ್ವಾಮಾ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಉಗ್ರರ ದಾಳಿಯಲ್ಲಿ 40 ಸಿಆರ್​​ಪಿಎಫ್​ ಸೈನಿಕರು ಹುತಾತ್ಮರಾಗಿದ್ದರು. ಈ ದುರಂತ ಘಟನೆಯಲ್ಲಿ ತನ್ನ ಜೀವವನ್ನು ಲೆಕ್ಕಿಸದೇ ಹಲವರ ಜೀವ ಉಳಿಸಿದ್ದ ಸಿಆರ್​​ಪಿಎಫ್​ ಯೋಧನಿಗೆ ಪ್ರಶಸ್ತಿ ನೀಡಲಾಗಿದೆ.

ಸಿಆರ್​ಪಿಎಫ್​ ಸೈನಿಕ ಇಕ್ಬಾಲ್​ ಸಿಂಗ್ 49 ಬೆಟಾಲಿಯನ್​​ಗೆ ಸೇರಿದವರು. ಪುಲ್ವಾಮಾ ದಾಳಿ ವೇಳೆ​​ ಹಲವರ ಜೀವ ಉಳಿಸಿದ್ದ ರಕ್ಷಕ. ಸಿಆರ್​ಪಿಎಫ್ ಮಹಾನಿರ್ದೇಶಕರು ಇಕ್ಬಾಲ್ ಸಿಂಗ್ ಅವರಿಗೆ ಪ್ರಶಂಸೆ ಪ್ರಮಾಣಪತ್ರ (ಡಿಸ್ಕ್ ಅಂಡ್ ಕಮೆಂಡಬಲ್ ಸರ್ಟಿಫಿಕೇಟ್) ನೀಡಿ ಗೌರವಿಸಿದ್ದಾರೆ.

ಪುಲ್ವಾಮಾ ದಾಳಿ ವೇಳೆ ತೋರಿದ ಶೌರ್ಯಕ್ಕೆ ಮಾತ್ರ ಇಕ್ಬಾಲ್​ಗೆ ಪ್ರಶಸ್ತಿ ಲಭಿಸಿಲ್ಲ. ಸಿಂಗ್ ಅವರ ಶೌರ್ಯ ಮತ್ತು ನಿಸ್ವಾರ್ಥ ಸೇವೆ ಎರಡನ್ನೂ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಇಕ್ಬಾಲ್ ಸಿಂಗ್ ಅವರನ್ನು ಶ್ರೀನಗರದ ನವಕಡಲ್ ಎಂಬಲ್ಲಿ ನಿಯೋಜನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇಕ್ಬಾಲ್ ಸಿಂಗ್ ತೋರಿದ ಒಂದು ಮಾನವೀಯತೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ಸೇವೆಯಲ್ಲಿದ್ದಾಗ ರಸ್ತೆಬದಿಯಲ್ಲಿ ಹಸಿವೆಯಿಂದ ಒದ್ದಾಡುತ್ತಿದ್ದ ಮಗು ಕಣ್ಣಿಗೆ ಬೀಳುತ್ತದೆ. ಆಗ ಅವರು ತಾವೇ ಖುದ್ದಾಗಿ ಮಗುವಿನ ಬಳಿ ಹೋಗಿ ತಮ್ಮ ಬಳಿ ಇದ್ದ ಆಹಾರ ತಿನಿಸುತ್ತಾರೆ. ಅದು ಪಾರ್ಶ್ವವಾಯು ಆಘಾತಕ್ಕೊಳಗಾಗಿರುವ ಮಗುವಾಗಿರುತ್ತದೆ. ಊಟ ಮಾಡಿಸಿ ನಂತರ ನೀರನ್ನೂ ಕುಡಿಸುತ್ತಾರೆ.

ಈ ಘಟನೆಯು ಭಾರತೀಯ ಸೇನೆಯ ಮಾನವೀಯ ಮುಖವನ್ನು ಬಿಂಬಿಸಿದೆ. ಕಾಶ್ಮೀರದಲ್ಲಿ ಸ್ಥಳೀಯರ ಮೇಲೆ ಭಾರತೀಯ ಸೈನಿಕರು ದೌರ್ಜನ್ಯ ಎಸಗುತ್ತಾರೆಂಬ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಇಂಥ ಮಾನವೀಯ ಘಟನೆಗಳು ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಹಾಗೂ ಸೈನಿಕರ ಬಗ್ಗೆ ಕಾಶ್ಮೀರಿಗಳಿಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬಹುದು.

ಇನ್ನು, ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿದ್ದ ವಾಹನವನ್ನುಇಕ್ಬಾಲ್ ಅವರೇ ಚಲಾಯಿಸುತ್ತಿದ್ದರು. ಈ ವೇಳೆ ಸಿಂಗ್​​ಗೆ ಇಕ್ಕಟ್ಟಿನ ಪರಿಸ್ಥಿತಿ ಬಂದೊದಗಿತು. ಘಟನೆಯಲ್ಲಿ ಗಾಯಗೊಂಡ ಅನೇಕ ಸಿಆರ್​ಪಿಎಫ್​ ಯೋಧರ ಪ್ರಾಣ ಉಳಿಸುವಲ್ಲಿ ಇಕ್ಭಾಲ್​​ ನಿರ್ಣಾಯಕ ಪಾತ್ರ ವಹಿಸಿದ್ದರು.

ಇಕ್ಬಾಲ್​ ಅವರ ಮಾನವೀಯ ಹಾಗೂ ನಿಸ್ವಾರ್ಥ ಸೇವೆಯನ್ನು ಗಮನಿಸಿದ ಸಿಆರ್​​ಪಿಎಫ್​ನ ಮಹಾನಿರ್ದೇಶಕ ರಾಜೀವ್​ ರೈ ಭಾತ್ನಾಗರ್​ ಸಿಂಗ್​ಗೆ ಪ್ರಶಸ್ತಿ ನೀಡಲು ನಿರ್ಧರಿಸಿದರು. ಪ್ರಶಸ್ತಿಯ ಜೊತೆಗೆ ಪ್ರಶಂಸೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
First published: