ತಾಯಿ, ಮಗು ಪ್ರಾಣ ಉಳಿಸಿದ ಸಿಆರ್​ಪಿಎಫ್​ ಸೈನಿಕನ ರಕ್ತ; ಟ್ವಿಟರ್​ನಲ್ಲಿ ಭಾರೀ ಪ್ರಶಂಸೆ!

ರಕ್ತ ನೀಡಿದ ಬಳಿಕ ಸಿಅರ್​ಪಿಎಫ್​ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಕ್ತದಾನ ಮಾಡಿದ್ದ ಸಿಬ್ಬಂದಿ ಮತ್ತು ಆಗಷ್ಟೇ ಜನಿಸಿದ ಮಗುವಿನ ಫೋಟೋವನ್ನು ಪ್ರಕಟಿಸಿ, 'ರಕ್ತ ಸಂಬಂಧ' ಎಂಬ ಶೀರ್ಷಿಕೆಯಡಿ, ಇವರ ರಕ್ತ ತಾಯಿ ಮತ್ತು ಮಗುವನ್ನು ಮಗುವನ್ನು ರಕ್ಷಿಸಿದೆ ಎಂದು ಬರೆಯಲಾಗಿದೆ.

ರಕ್ತದಾನ ಮಾಡಿದ್ದ ಸಿಆರ್​ಪಿಎಫ್​ ಯೋಧ ಮತ್ತು ನವಜಾತ ಶಿಶು

ರಕ್ತದಾನ ಮಾಡಿದ್ದ ಸಿಆರ್​ಪಿಎಫ್​ ಯೋಧ ಮತ್ತು ನವಜಾತ ಶಿಶು

  • News18
  • Last Updated :
  • Share this:
ಜಮ್ಮು-ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪಡೆಯ ಸೈನಿಕರೊಬ್ಬರು ಇಲ್ಲಿನ ಸ್ಥಳೀಯ ಮಹಿಳೆಯೊಬ್ಬರಿಗೆ ರಕ್ತ ದಾನ ಮಾಡಿ ಪ್ರಾಣ ಉಳಿಸಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

25 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದ ಬಳಿಕ ಹಲವು ಸಮಸ್ಯೆಯಿಂದ ಬಳಲುತ್ತಿದ್ದರು. ಮತ್ತು ರಕ್ತದ ಕೊರತೆ ತೀವ್ರವಾಗಿ ಕಾಡುತ್ತಿತ್ತು. ಆದಾಗ್ಯೂ, 53ನೇ ಬೆಟಾಲಿಯನ್​ನ ಗೋಯಿಲ್ ಶೈಲೇಶ್​ ಎಂಬುವವರು ರಕ್ತ ನೀಡಿ, ತಾಯಿ ಮತ್ತು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

ಗುಲ್​ಶಾನ್​ ನಿವಾಸಿಯಾದ ಮಹಿಳೆಯ ಕುಟುಂಬದವರು ರಕ್ತದ ಸಮಸ್ಯೆ ತೀವ್ರವಾಗಿ ಕಾಡಲು ಆರಂಭಿಸಿದಾಗ ರಕ್ತಾಕ್ಕಾಗಿ ಮದಾದ್ಗರ್​ ಸಿಆರ್​ಪಿಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ಮದಾದ್ಗರ್ ಕಾಶ್ಮೀರದ ಜನತೆಗೆ ವೈದ್ಯಕೀಯ ತುರ್ತು ಸೇವೆ ಒದಗಿಸುವ ಸಹಾಯವಾಣಿಯಾಗಿದೆ. ಇದನ್ನು ಸಿಆರ್​ಪಿಎಫ್​ ನಿರ್ವಹಿಸುತ್ತಿದೆ.​

ಇದನ್ನು ಓದಿ: ರಾಯಚೂರಿನ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಯೋಗರಾಜ್​ ಭಟ್ಟರ ಮನಮುಟ್ಟುವ ಪತ್ರ

ರಕ್ತ ನೀಡಿದ ಬಳಿಕ ಸಿಅರ್​ಪಿಎಫ್​ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಕ್ತದಾನ ಮಾಡಿದ್ದ ಸಿಬ್ಬಂದಿ ಮತ್ತು ಆಗಷ್ಟೇ ಜನಿಸಿದ ಮಗುವಿನ ಫೋಟೋವನ್ನು ಪ್ರಕಟಿಸಿ, 'ರಕ್ತ ಸಂಬಂಧ' ಎಂಬ ಶೀರ್ಷಿಕೆಯಡಿ, ಇವರ ರಕ್ತ ತಾಯಿ ಮತ್ತು ಮಗುವನ್ನು ಮಗುವನ್ನು ರಕ್ಷಿಸಿದೆ ಎಂದು ಬರೆಯಲಾಗಿದೆ.

ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಿಆರ್​ಪಿಎಫ್​ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
First published: