Crowdfunding: 2 ವರ್ಷದ ಗೌರಿಗೆ ಬೇಕಿದೆ ಸಹಾಯ ಹಸ್ತ : ಖಾಸಗಿ ಬಸ್‌ ಮಾಲೀಕರಿಂದಲೂ ನೆರವು

ಬೆಂಗಳೂರಿನಲ್ಲಿ ಪರಿಣಿತ ವೈದ್ಯರೊಂದಿಗೆ ಗೌರಿಯ ತಪಾಸಣೆ ನಡೆಸಿದಾಗ ಅವಳು ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವಿಷಯ ಬೆಳಕಿಗೆ ಬಂದಿತೆನ್ನಲಾಗಿದೆ

ಬೆಂಗಳೂರಿನಲ್ಲಿ ಪರಿಣಿತ ವೈದ್ಯರೊಂದಿಗೆ ಗೌರಿಯ ತಪಾಸಣೆ ನಡೆಸಿದಾಗ ಅವಳು ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವಿಷಯ ಬೆಳಕಿಗೆ ಬಂದಿತೆನ್ನಲಾಗಿದೆ

ಬೆಂಗಳೂರಿನಲ್ಲಿ ಪರಿಣಿತ ವೈದ್ಯರೊಂದಿಗೆ ಗೌರಿಯ ತಪಾಸಣೆ ನಡೆಸಿದಾಗ ಅವಳು ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವಿಷಯ ಬೆಳಕಿಗೆ ಬಂದಿತೆನ್ನಲಾಗಿದೆ

  • Share this:
ಒಮ್ಮೊಮ್ಮೆ ಕೆಲವು ಮಕ್ಕಳಿಗೆ ಬಲು ಅಪರೂಪದ ಅಥವಾ ಅತ್ಯಂತ ವೆಚ್ಚದಾಯಕವಾದ ಗಂಭೀರ ಆರೋಗ್ಯ ಸ್ಥಿತಿ ಬಂದಿರುವುದನ್ನು ನಾವು ಈ ಹಿಂದೆ ಹಲವು ಬಾರಿ ಕೇಳಿರಬಹುದು. ಕೆಲವೊಮ್ಮೆ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಇನ್ನೂ ಶಾಲೆಯ ಮೆಟ್ಟಿಲೂ ಸಹ ಹತ್ತದ ಪುಟ್ಟ ಕಂದಮ್ಮಗಳು ಕೆಲವು ವಿಶಿಷ್ಟ ಆರೋಗ್ಯ ಸ್ಥಿತಿಗೆ ನೂಕಲ್ಪಟ್ಟು ಅದರ ದುಬಾರಿ ಚಿಕಿತ್ಸೆಗಾಗಿ ಪೋಷಕರು ಇನ್ನಿಲ್ಲದಂತೆ ಪರದಾಡಬೇಕಾಗುತ್ತದೆ.

ಸದ್ಯ ಇಂತಹುದ್ದೇ ಒಂದು ದುಬಾರಿ ಚಿಕಿತ್ಸೆಯ ವೆಚ್ಚವಿರುವ ಕಾಯಿಲೆಯೊಂದರಿಂದ ಕೇರಳದ 2 ವರ್ಷದ ಗೌರಿ ಲಕ್ಷ್ಮೀ ಎಂಬ ಪುಟ್ಟ ಮಗು ಬಳಲುತ್ತಿದೆ. ಶೋರನೂರು ಪಟ್ಟಣದ ಗೌರಿಯು ಸ್ಪೈನಲ್ ಮಸ್ಕ್ಯೂಲರ್ ಅಟ್ರೋಫಿ ಎಂಬ ಕಾಯಿಲೆಯಿಂದ ಬಳಲುತ್ತಿದೆ ಎಂದು ಹೇಳಲಾಗಿದ್ದು, ಅದರ ಚಿಕಿತ್ಸೆಯ ವೆಚ್ಚ ಏನಿಲ್ಲವೆಂದರೂ 16 ಕೋಟಿ ರೂಪಾಯಿ ಆಗುತ್ತದೆ ಎಂದು ತಿಳಿದುಬಂದಿದೆ.

ಅಪರೂಪದ ಕಾಯಿಲೆಗೆ ತುತ್ತಾಗಿರುವ ಗೌರಿ

ಈ ಅಪರೂಪದ ಕಾಯಿಲೆಯಡಿ ಗೌರಿಗೆ ಕುಳಿತುಕೊಳ್ಳಲಾಗಲಿ ಅಥವಾ ನಿಲ್ಲಲಾಗಲಿ ಸಾಧ್ಯವಿಲ್ಲ. ಅವಳು ಜೀವನಪೂರ್ತಿ ಇದೇ ಸ್ಥಿತಿಯಲ್ಲಿರಬೇಕಾಗುತ್ತದೆ. ಹಾಗಾಗಿ ಗೌರಿಗೆ ಚಿಕಿತ್ಸೆ ಸಿಗಬೇಕಾಗಿರುವುದು ಅವಶ್ಯಕವಾಗಿದ್ದು, ಈ ಕಾಯಿಲೆಗೆ ಸಂಬಂಧಿಸಿದ ಔಷಧಿಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕಾಗಿದ್ದು, ಅದಕ್ಕಾಗಿ ಹಲವಾರು ಕೋಟಿ ರೂಪಾಯಿಗಳ ಅವಶ್ಯಕತೆಯಿದೆ. ಗೌರಿಯ ಪಾಲಕರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ಹೊಂದಿಸಲು ಅಸಾಧ್ಯವಾಗಿದ್ದು, ಅದಕ್ಕಾಗಿ ಆ ಹುಡುಗಿಯ ಚಿಕಿತ್ಸೆ ನಡೆಯುವಂತೆ ಅನುಕೂಲವಾಗಲು ಕ್ರೌಡ್‍ಫಂಡಿಂಗ್ ಮೂಲಕ ಹಣ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಗೌರಿ ಬದುಕಿಗೆ ಬೇಕಿದೆ ಸಹಾಯ ಹಸ್ತ

ಬೆಂಗಳೂರಿನಲ್ಲಿ ಪರಿಣಿತ ವೈದ್ಯರೊಂದಿಗೆ ಗೌರಿಯ ತಪಾಸಣೆ ನಡೆಸಿದಾಗ ಅವಳು ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವಿಷಯ ಬೆಳಕಿಗೆ ಬಂದಿತೆನ್ನಲಾಗಿದೆ. ಈಗಾಗಲೇ ಕೇರಳದಾದ್ಯಂತ ಗೌರಿ ಲಕ್ಷ್ಮೀಯನ್ನು ಬದುಕಿಸಲು ಜನರು ಸಹಾಯಕ್ಕಾಗಿ ಮುಂದೆ ಬರುತ್ತಿದ್ದಾರೆ. ಹಲವು ರಾಜಕೀಯ ಧುರೀಣರೂ ಸಹ ಸಹಾಯದ ಅಭಿಯಾನಕ್ಕೆ ಪ್ರೋತ್ಸಾಹ ನೀಡುವಂತೆ ಜನರಲ್ಲಿ ಕೇಳುತ್ತಿದ್ದಾರೆ.

ಸಹಾಯಕ್ಕೆ ಮುಂದೆ ಬಂದ ಖಾಸಗಿ ಬಸ್​ ಆಪರೇಟರ್​ಗಳು

ಈ ಸಂದರ್ಭದಲ್ಲಿ ಕೇರಳದ ಮಂಜೇರಿ ಮತ್ತು ಕೋಯಿಕೋಡ್ ಮಾರ್ಗದ ಮಧ್ಯೆ ಸಂಚರಿಸುವ ಖಾಸಗಿ ಬಸ್ ಆಪರೇಟರ್‌ಗಳು ಸಹಾಯ ಮಾಡಲು ಮುಂದೆ ಬಂದಿದ್ದು ಅದಕ್ಕಾಗಿ ಒಂದು ವಿಶಿಷ್ಟ ಅಭಿಯಾನಕ್ಕೆ ಚಾಲನೆ ನೀಡಿದರು. ಸೋಮವಾರದಂದು ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್ಸು ಪ್ರಯಾಣಗಳಿಂದ ಬರುವ ಲಾಭವನ್ನು ಪಕ್ಕಕ್ಕಿಟ್ಟು ಅದನ್ನು ಗೌರಿಯ ಚಿಕಿತ್ಸೆಗಾಗಿ ನೀಡಲು ನಿರ್ಧರಿಸಿದರು. ಇದಕ್ಕಾಗಿ ಅಂದು ಎಲ್ಲ ಬಸ್ಸುಗಳ ಮಾಲೀಕರು ತಮ್ಮ ಬಸ್ಸಿನ ಮೇಲೆ ಗೌರಿಯ ಸಹಾಯಾರ್ಥದ ಉದ್ದೇಶದ ಬಗ್ಗೆ ಪೋಸ್ಟರ್ ಅಂಟಿಸಿ ಅಭಿಯಾನ ನಡೆಸಿದ್ದಾರೆ.

ಕಾರುಣ್ಯ ಯಾತ್ರಾ

ಈ ಅಭಿಯಾನಕ್ಕೆ 'ಕಾರುಣ್ಯ ಯಾತ್ರಾ' ಎಂದು ಹೆಸರಿಸಿದ್ದರು. ಇದಕ್ಕೆ ಮಂಜೇರಿ ಬಸ್ಸು ನಿಲ್ದಾಣದಿಂದ ಮಲಪ್ಪುರಂ ಶಾಸಕರಾದ ಅಬೈದುಲ್ಲಾ ಅವರು ಚಾಲನೆ ನೀಡಿದರೆನ್ನಲಾಗಿದೆ. ಈ ಅಭಿಯಾನದಡಿಯಲ್ಲಿ ಅಂದು ಕನಿಷ್ಠ 52 ಬಸ್ಸುಗಳು ಪ್ರಯಾಣಿಸಿವೆ ಎಂದು ವರದಿಯಾಗಿದೆ.

ಇದನ್ನು ಓದಿ: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

ಈ ಸಂದರ್ಭದಲ್ಲಿ ಬಸ್ಸುಗಳ ಮಾಲಿಕರು ಕೇವಲ ಬಸ್ಸುಗಳ ಇಂಧನ ವೆಚ್ಚವನ್ನು ತೆಗೆದುಕೊಳ್ಳಲಾಗಿದ್ದು ಮಿಕ್ಕೆಲ್ಲ ಲಾಭ ಹಾಗೂ ಉದ್ಯೋಗಿಗಳು ತಮ್ಮ ಒಂದು ದಿನದ ಸಂಬಳವನ್ನು ಈ ದಾನದ ಕಾರ್ಯಕ್ಕೆ ನೀಡಿರುವುದಾಗಿ ಹೇಳಿದ್ದಾರೆ. ಈವರೆಗಿನ ಕ್ರೌಡ್‍ಫಂಡಿಂಗ್ ಮೂಲಕ ಏಳು ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಇದಕ್ಕಾಗಿ 9 ಕೋಟಿ ರೂಪಾಯಿಗಳ ಅವಶ್ಯಕತೆಯಿದ್ದು ಗೌರಿಯ ಪಾಲಕರು ಎಲ್ಲ ಕಡೆಗಳಿಂದಲೂ ಸಹಾಯಕ್ಕೆ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಇದಕ್ಕಾಗಿ ಈಗ ಗೌರಿ ಲಕ್ಷ್ಮೀ ಚಿಕಿತ್ಸಾ ಸಹಾಯ ಸಮಿತಿಯು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಮಗಳ ಉಳಿವಿಗೆ ಪೋಷಕರ ಮನವಿ

ಈ ಮಧ್ಯೆ, ಗೌರಿ ಲಕ್ಷ್ಮೀ ಯ ತಂದೆ ತಾಯಿಯರಾದ ಲಿಜು ಕೆ‍.ಎಲ್. ಹಾಗೂ ನೀತಾ ಸಿ.ಎಸ್. ಅವರು ಭಾನುವಾರದಂದು ಕೊಡಪ್ಪನಕ್ಕಲ್ ಹೌಸಿನ ಪನಕ್ಕಾಡ್ ಕುಟುಂಬದ ಪನಕ್ಕಾಡ್ ಸೈಯದ್ ಮುನ್ನವ್ವರಲಿ ಶಿಹಾಬ್ ತಂಗಲ್ ಅವರನ್ನು ಭೇಟಿ ಮಾಡಿ ತಮ್ಮ ಮಗಳ ಚಿಕಿತ್ಸೆಯ ವೆಚ್ಚಕ್ಕಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆನ್ನಲಾಗಿದೆ.

ಇದನ್ನು ಓದಿ: Newyorkನ Brooklyn ಸಬ್​ವೇನಲ್ಲಿ ಗುಂಡಿನ ದಾಳಿ; 13 ಮಂದಿಗೆ ಗಾಯ

ಈ ಸಂದರ್ಭದಲ್ಲಿ ಮುನ್ನವ್ವರಲಿ ತಂಗಲ್ ಅವರು ಈ ಹಿಂದೆಯೂ ಮಕ್ಕಳ ಚಿಕಿತ್ಸೆಗಾಗಿ ಸಹಾಯ ಹಸ್ತ ಚಾಚಿರುವ ಕೇರಳದ ಎಲ್ಲ ಜನರು ಈ ಬಾರಿಯೂ ಸಹಾಯ ಹಸ್ತ ಚಾಚಲಿದ್ದಾರೆ ಎಂಬ ವಿಶ್ವಾಸದ ನುಡಿಗಳನ್ನಾಡಿದ್ದಾರೆ. ತಮ್ಮ ಮೂಲಕ ಎಲ್ಲ ಕ್ಷೇತ್ರದಲ್ಲಿರುವ ಕೇರಳದ ಜನರು ಈ ವಿಚಾರಕ್ಕಾಗಿ ಮುಂದೆ ಬಂದು ಆ ಮಗುವಿನ ಜೀವ ಉಳಿಸಲು ಸಾಧ್ಯವಾಗಬಹುದಾದ ಚಿಕಿತ್ಸೆ ಸಿಗುವಂತೆ ತಮ್ಮ ಕೈಲಾದ ಹಣದ ಸಹಾಯ ಮಾಡಿ ಎಂಬ ಪ್ರಾರ್ಥನೆಯನ್ನೂ ಮಾಡಿದ್ದಾರೆ.

ಒಟ್ಟಿನಲ್ಲಿ ಗೌರಿ ಲಕ್ಷ್ಮೀ ಯ ಚಿಕಿತ್ಸೆಗಾಗಿ ನಡೆಯುತ್ತಿರುವ ಈ ಕ್ರೌಡ್‍ಫಂಡಿಂಗ್ ಈಗ ಎಲ್ಲೆಡೆ ನಿಧಾನವಾಗಿ ಗಮನ ಸೆಳೆಯುತ್ತಿದ್ದು ಮುಂದಿನ ಕೆಲ ಸಮಯದಲ್ಲಿ ಇನ್ನಷ್ಟು ಹೃದಯವಂತ ದಾನಿಗಳು ತಮ್ಮ ಕೊಡುಗೆ ನೀಡುತ್ತಾರೆ ಎಂಬ ಅಪೇಕ್ಷೆ ಗೌರಿಯ ಪಾಲಕರ ಮನದಲ್ಲಿ ಮೂಡುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ನಿಮಗೇನಾದರೂ ಸಹಾಯ ಮಾಡುವ ಇಚ್ಛೆ ಇದ್ದಲ್ಲಿ ಈ ಕೆಳಗಿನ ಮಾಹಿತಿ ಬಳಸಿ ಸಹಾಯ ಮಾಡಬಹುದು.

K. L. LIJU

ACCOUNT NUMBER: 4302001700011823

IFSC CODE: PUNB0430200
Published by:Seema R
First published: