ಡಿಸೆಂಬರ್​ನಲ್ಲಿ ಆರ್​ಬಿಐ ವ್ಯಾಪ್ತಿ ಮಟ್ಟ ಮೀರಿ ಶೇ.7.35ಕ್ಕೆ ಏರಿದ ಚಿಲ್ಲರೆ ಹಣದುಬ್ಬರ

ಸಗಟು ಹಣದುಬ್ಬರ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ನಿಂತಿದೆ. 2018ರ ಡಿಸೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರ ಶೇ.2.11ರಷ್ಟಿದ್ದರೆ, 2019ರ ನವೆಂಬರ್​ನಲ್ಲಿ ಶೇ.5.54ರಷ್ಟಿತ್ತು.

HR Ramesh | news18-kannada
Updated:January 13, 2020, 6:23 PM IST
ಡಿಸೆಂಬರ್​ನಲ್ಲಿ ಆರ್​ಬಿಐ ವ್ಯಾಪ್ತಿ ಮಟ್ಟ ಮೀರಿ ಶೇ.7.35ಕ್ಕೆ ಏರಿದ ಚಿಲ್ಲರೆ ಹಣದುಬ್ಬರ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ: ಕಳೆದ ಡಿಸೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರವು ಶೇ.7.35ಕ್ಕೆ ಏರಿಕೆಯಾಗಿದ್ದು, ಆರ್‌ಬಿಐನ ವ್ಯಾಪ್ತಿ ಮಟ್ಟವನ್ನು ಮೀರಿದೆ. ಆಹಾರ ಬೆಲೆಗಳ ಏರಿಕೆ ಚಿಲ್ಲರೆ ಹಣದುಬ್ಬರಕ್ಕೆ ಮುಖ್ಯ ಕಾರಣ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ.

ಸಗಟು ಹಣದುಬ್ಬರ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ನಿಂತಿದೆ. 2018ರ ಡಿಸೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರ ಶೇ.2.11ರಷ್ಟಿದ್ದರೆ, 2019ರ ನವೆಂಬರ್​ನಲ್ಲಿ ಶೇ.5.54ರಷ್ಟಿತ್ತು.

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಆಹಾರ ಹಣದುಬ್ಬರ 2019ರ ಡಿಸೆಂಬರ್​ನಲ್ಲಿ ಶೇ.14.12ರಷ್ಟಿತ್ತು. ಅದರ ಹಿಂದಿನ ವರ್ಷದ ಇದೇ ತಿಂಗಳನಲ್ಲಿ ಶೇ (-)2.65ರಷ್ಟಿತ್ತು. 2019ರ ನವೆಂಬರ್​ನಲ್ಲಿ ಶೇ.10.01ನಷ್ಟಿತ್ತು. ಹಣದುಬ್ಬರವನ್ನು ಶೇ. 4 ರ ವ್ಯಾಪ್ತಿಯಲ್ಲಿ ಇರಿಸಿಕೊಳ್ಳುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್​ಗೆ  ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಇದನ್ನು ಓದಿ: ಶಬರಿಮಲೆ ಪ್ರಕರಣ; ಮೂರು ವಾರ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

Published by: HR Ramesh
First published: January 13, 2020, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading