• Home
  • »
  • News
  • »
  • national-international
  • »
  • Monsoon: ಮುಂಗಾರು ವ್ಯತ್ಯಯದಿಂದ ಬೆಳೆ ಹಾನಿ; ಆಹಾರ ಭದ್ರತೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ತಜ್ಞರು

Monsoon: ಮುಂಗಾರು ವ್ಯತ್ಯಯದಿಂದ ಬೆಳೆ ಹಾನಿ; ಆಹಾರ ಭದ್ರತೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ತಜ್ಞರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Monsoon: ಮಾನ್ಸೂನ್ ಋತುವಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಖಾರಿಫ್ ಬೆಳೆ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದ್ದರೂ ಆಹಾರ ಭದ್ರತೆಯ ಮೇಲೆ ಇದು ಪರಿಣಾಮ ಬೀರಿಲ್ಲ.

  • Share this:

ಮಾನ್ಸೂನ್ (Mansoon) ಋತುವಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಖಾರಿಫ್ ಬೆಳೆ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದ್ದರೂ ಆಹಾರ ಭದ್ರತೆಯ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇಲ್ಲ ಅಂತೆಯೇ ಭಾರತದಲ್ಲಿ (India) ಸಾಕಷ್ಟು ಆಹಾರ ದಾಸ್ತಾನುಗಳಿರುವುದರಿಂದ ಹಣದುಬ್ಬರದ ಮೇಲೆ ಕೂಡ ಇದು ಪರಿಣಾಮ ಬೀರುವುದಿಲ್ಲ ಎಂದು ಕೃಷಿ (Agriculture) ಮತ್ತು ಆಹಾರ ನೀತಿ ತಜ್ಞರು ತಿಳಿಸಿದ್ದಾರೆ.ಆದರೆ ಮಳೆಯಲ್ಲಿ (Rain) ಉಂಟಾದ ಏರುಪೇರು ವೈಯಕ್ತಿಕ ಮಟ್ಟದಲ್ಲಿ ರೈತರಿಗೆ ಹಾನಿಯನ್ನುಂಟು ಮಾಡಿದ್ದು ಅನೇಕ ರೈತರಿಗೆ ರಾಜ್ಯ ಸರಕಾರದ ನೆರವು ದೊರೆತಿಲ್ಲ ಎಂದು ತಿಳಿಸಿದ್ದಾರೆ.ಕೇಂದ್ರವು ಬಿಡುಗಡೆ ಮಾಡಿರುವ ಸುಧಾರಿತ ಅಂಕಿ ಅಂಶಗಳ ಪ್ರಕಾರ ಖಾರಿಫ್ ಅಕ್ಕಿಯ ಉತ್ಪಾದನೆಯು 6% ದಷ್ಟು ಕುಸಿಯುವ ಸಾಧ್ಯತೆ ಇದ್ದು ಕಳೆದ ವರ್ಷ (Year) 111 ಮಿಲಿಯನ್‌ ಟನ್‌ನಷ್ಟಿದ್ದ ಅಕ್ಕಿ ಉತ್ಪಾದನೆಯು ಈ ವರ್ಷ 104.99 ಮಿಲಿಯನ್ ಟನ್‌ಗಳಿಗೆ ಕುಸಿದಿದೆ.  ಇದಕ್ಕೆ ಕಾರಣ ಅಕ್ಕಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಬಿದ್ದಿರುವ ಅಸಮರ್ಪಕ ಮಳೆ ಎಂದಾಗಿದೆ.


ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಅಧಿಕ ಮಳೆ


ಬೇಸಿಗೆಯ ಮುಖ್ಯ ಆಹಾರವಾದ ಭತ್ತದ ವಿಸ್ತೀರ್ಣವು ಕಳೆದ ವರ್ಷ 41.7 ಮಿಲಿಯನ್ ಹೆಕ್ಟೇರ್‌ಗಳಿಂದ ಈ ವರ್ಷ 39.9 ಮಿಲಿಯನ್ ಹೆಕ್ಟೇರ್‌ಗೆ ಇಳಿದಿದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ.ಮಾನ್ಸೂನ್ ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಹೆಚ್ಚುವರಿ ಮಳೆಯನ್ನುಂಟು ಮಾಡಿದೆ ಆದರೆ ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಮಳೆಯ ಕೊರತೆಯುಂಟಾಗಿದೆ ಎಂದು ಸ್ಕೈಮೆಟ್ ಹವಾಮಾನದ ಉಪಾಧ್ಯಕ್ಷ (ಹವಾಮಾನ ಮತ್ತು ಹವಾಮಾನ ಬದಲಾವಣೆ) ಮಹೇಶ್ ಪಲಾವತ್ ತಿಳಿಸಿದ್ದಾರೆ.ಖಾರಿಫ್ ಅಕ್ಕಿ ಉತ್ಪಾದನೆಯಲ್ಲಿ ಕುಸಿತ ಕಂಡಿರುವ ರಾಜ್ಯಗಳೆಂದರೆ ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳವಾಗಿದ್ದು, ಈ ರಾಜ್ಯಗಳು ಜೂನ್‌ನಿಂದ ಆಗಸ್ಟ್‌ವರೆಗೆ ಮಳೆಯ ಅಭಾವಕ್ಕೆ ಒಳಗಾಗಿವೆ.


ಅತಿವೃಷ್ಟಿಯಿಂದ ಬೆಳೆಹಾನಿ


ಇದೇ ಸಮಯದಲ್ಲಿ ಮಧ್ಯಭಾರತದಲ್ಲಿ ಉಂಟಾದ ಅತಿವೃಷ್ಟಿಯಿಂದ ಬೆಳೆಹಾನಿ ಕೂಡ ಸಂಭವಿಸಿದೆ. ಸಪ್ಟೆಂಬರ್‌ನಲ್ಲಿ ತಡವಾಗಿ ಸುರಿದ ಮಳೆಯು ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸೋಯಾಬೀನ್, ಉದ್ದಿನಬೇಳೆ ಹಾಗೂ ಮೆಕ್ಕೆಜೋಳದ ಬೆಳೆಗಳಿಗೆ ಹಾನಿಯನ್ನುಂಟು ಮಾಡಿದ್ದು ರೈತರ ಅಳಲಿಗೆ ಕಾರಣವಾಗಿದೆ. ಈ ಪ್ರದೇಶಗಳಲ್ಲಿ ಆರ್ದ್ರ ಪರಿಸ್ಥಿತಿಗಳಿಂದಾಗಿ ಕೊಯ್ಲು ವಿಳಂಬವಾಯಿತು ಎಂದು ಮಹೇಶ್ ತಿಳಿಸಿದ್ದಾರೆ. ಆದರೆ ಪ್ರಸ್ತುತ ಸುರಿಯುತ್ತಿರುವ ಮಳೆ ಹಾಗೂ ಮುಂಗಾರು ಪ್ರವೇಶ ವಿಳಂಬವಾಗುತ್ತಿರುವುದು ಉತ್ತರ ಪ್ರದೇಶದ ಸಾಸಿವೆ ಬೆಳೆಗಾರರಿಗೆ ವರದಾನವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ 33% ದಷ್ಟು ಕಡಿಮೆ ಮಳೆಯಾಗಿದೆ.


ಇದನ್ನೂ ಓದಿ: ಮದೀನಾದಲ್ಲಿ ಬೃಹತ್‌ ಚಿನ್ನದ ನಿಕ್ಷೇಪ ಪತ್ತೆ! ಈ ಬಂಗಾರದ ಹಿಂದಿರೋ ಗುಟ್ಟೇನು?


ಮಳೆ ಕೊರತೆಯನ್ನೆದುರಿಸಿರುವ ರಾಜ್ಯಗಳು


ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಸೆಪ್ಟೆಂಬರ್ 22 ರ ವೇಳೆಗೆ ಕ್ರಮವಾಗಿ 30%, 20% ಮತ್ತು 15%ದಷ್ಟು ಮಳೆ ಕೊರತೆ ವರದಿಯಾಗಿದೆ. ಜುಲೈ 15ರವರೆಗೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 65%, 42%, 49% ಮತ್ತು 24% ದಷ್ಟು ಮಳೆ ಕೊರತೆ ವರದಿಯಾಗಿದೆ.


ಪರಿಸ್ಥಿತಿ ನಿಯಂತ್ರಣದಲ್ಲಿದೆ


ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ವಿನಯ್ ಸೆಹಗಲ್ ಹೇಳುವಂತೆ, ಋತುವಿನ ನಂತರದ ಅರ್ಧಭಾಗದಲ್ಲಿ ಮಾನ್ಸೂನ್ ಪುನಶ್ಚೇತನಗೊಂಡಿರುವುದರಿಂದ ಪರಿಸ್ಥಿತಿಯು ಅಷ್ಟೊಂದು ಆತಂಕಕಾರಿಯಾಗಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಭಾರತದ ಮೊದಲ ಪೂರ್ಣ ತೋಳಿನ ಕಸಿ ಶಸ್ತ್ರಚಿಕಿತ್ಸೆ, ಬರೋಬ್ಬರಿ 18 ಗಂಟೆಗಳ ಕಾಲ ನಡೆದ ಆಪರೇಷನ್!


ಹಣದುಬ್ಬರದ ವಿಷಯದಲ್ಲಿ ಸರಕಾರವು ಕ್ರಮಗಳನ್ನು ಕೈಗೊಂಡಿರುವುದರಿಂದ ಇದು ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲವೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದಲ್ಲಿ ಕೇವಲ 30% ರೈತರು ಮಾತ್ರ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ. ರಾಜ್ಯ ಸರಕಾರಗಳು ಅವರಿಗೆ ಪರಿಹಾರವನ್ನು ನಿರಾಕರಿಸುತ್ತಿವೆ. ಸರಕಾರ ಪರಿಹಾರವನ್ನು ಬಿಡುಗಡೆ ಮಾಡಿದರೂ, ಹಾನಿ ಮೌಲ್ಯಮಾಪನ ಮತ್ತು ಪಾವತಿಯಾಗಲು ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಸುಸ್ಥಿರ ಕೃಷಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಡಾ ಜಿ ವಿ ರಾಮಾಂಜನೇಯುಲು ತಿಳಿಸಿದ್ದಾರೆ.

First published: