Viral Video: ವಡೋದರಾ ಪ್ರವಾಹದಲ್ಲಿ ತೇಲಿಬಂದ ಮೊಸಳೆ ಮಾಡಿದ್ದೇನು? ಇಲ್ಲಿದೆ ಶಾಕಿಂಗ್ ವಿಡಿಯೋ

ಗುಜರಾತ್​ನ ವಡೋದರದಲ್ಲಿ ಇದುವರೆಗೂ 5 ಸಾವಿರಕ್ಕೂ ಹೆಚ್ಚು ಜನರನ್ನು ಪ್ರವಾಹದಿಂದ ರಕ್ಷಿಸಿ ಎತ್ತರದ ಪ್ರದೇಶಗಳಿಗೆ ಸಾಗಿಸಲಾಗಿದೆ. ಆದರೆ, ಪ್ರತಿದಿನ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

Sushma Chakre | news18
Updated:August 2, 2019, 3:40 PM IST
Viral Video: ವಡೋದರಾ ಪ್ರವಾಹದಲ್ಲಿ ತೇಲಿಬಂದ ಮೊಸಳೆ ಮಾಡಿದ್ದೇನು? ಇಲ್ಲಿದೆ ಶಾಕಿಂಗ್ ವಿಡಿಯೋ
ವಡೋದರ ಪ್ರವಾಹದಲ್ಲಿ ಕಾಣಿಸಿಕೊಂಡ ಮೊಸಳೆ
Sushma Chakre | news18
Updated: August 2, 2019, 3:40 PM IST
ಕಳೆದ ವರ್ಷ ಕೇರಳದಲ್ಲಿ ಉಂಟಾದ ಭಾರೀ ಮಳೆಯಿಂದ ರಾಜ್ಯಕ್ಕೆ ರಾಜ್ಯವೇ ಮುಳುಗಡೆಯಾಗಿತ್ತು. ಈ ಬಾರಿ ಅದೇ ರೀತಿಯ ಪರಿಸ್ಥಿತಿ ಮಹಾರಾಷ್ಟ್ರ ಮತ್ತು ಗುಜರಾತ್​ನ ವಡೋದರದಲ್ಲಿ ನಿರ್ಮಾಣವಾಗಿದೆ. ವಡೋದರದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆ, ಮನೆಯೊಳಗೆಲ್ಲ ನೀರು ತುಂಬಿದೆ.

ಇದೀಗ, ವಡೋದರದಲ್ಲಿ ತುಂಬಿರುವ ನೀರಿನ ವಿಡಿಯೋವೊಂದು ವೈರಲ್ ಆಗಿದ್ದು, ರಸ್ತೆಯಲ್ಲಿ ತುಂಬಿದ್ದ ನೀರಿನಲ್ಲಿ ಸಾಗುತ್ತಿದ್ದ ನಾಯಿಗಳ ಹಿಂದೆ ಮೊಸಳೆಯೊಂದು ತೇಲಿಕೊಂಡು ಬಂದು ದಾಳಿ ನಡೆಸಿರುವ ದೃಶ್ಯ ಸೆರೆಯಾಗಿದೆ. ಒಂದು ವಾರದಿಂದ ವಡೋದರ ಮತ್ತು ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಎಲ್ಲೆಡೆ ಜಲಾವೃತವಾಗಿದೆ. ರಸ್ತೆಯಲ್ಲಿ ತುಂಬಿದ ನೀರು ಮನೆಯೊಳಗೂ ಬರುತ್ತಿದ್ದು, ಹಾವು, ವಿಷಕಾರಿ ಪ್ರಾಣಿಗಳು, ಮೊಸಳೆಗಳು ನೀರಿನೊಂದಿಗೆ ಊರು ಪ್ರವೇಶಿಸಿವೆ. ಇದರಿಂದ ಜನರು ಆತಂಕ ಪಡುವಂತಾಗಿದೆ.





ಪ್ಲಾಸ್ಟಿಕ್​ನಿಂದ ತಯಾರಾಗುತ್ತಿದೆ ಟಿ-ಶರ್ಟ್​; ರೈಲ್ವೆ ಇಲಾಖೆಯಿಂದ ಹೊಸ ಚಿಂತನೆ

ವಿಡಿಯೋದಲ್ಲಿ ಜನರು ತಮ್ಮ ಮನೆಯ ಬಳಿ ಕಬ್ಬಿಣದ ಕಂಬಿಗಳನ್ನು ಹಿಡಿದುಕೊಂಡು ನಿಂತಿರುವುದನ್ನು ಕಾಣಬಹುದು. ಜನರ ಪಕ್ಕದಲ್ಲೇ ನಾಯಿಗಳು ಹಾದುಹೋಗುತ್ತಿದ್ದು, ಅದರ ಹಿಂದೆ ಮೊಸಳೆಯೊಂದು ತೇಲಿಬಂದು ನಾಯಿಯ ಕಾಲಿಗೆ ಬಾಯಿ ಹಾಕಿ ಹಿಡಿಯಲು ಹೋದ ದೃಶ್ಯ ನೋಡಿ ಜನರು ಗಾಬರಿಗೊಂಡಿದ್ದಾರೆ. ಆದಷ್ಟು ಬೇಗ ಮನೆಯೊಳಗೆ ನುಗ್ಗಿದ ನೀರನ್ನು ಖಾಲಿ ಮಾಡಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಬೇಕೆಂಬ ಬೇಡಿಕೆ ಹೆಚ್ಚುತ್ತಲೇ ಇದೆ.



ಜೊಮಾಟೋಗೆ ಟ್ವಿಟ್ಟರ್​ನಲ್ಲಿ ಬೆಂಬಲ ನೀಡಿದ ಊಬರ್ ಈಟ್; ಅಷ್ಟಕ್ಕೂ ಆಗಿದ್ದೇನು?

ವಡೋದರದಲ್ಲಿ ಇದುವರೆಗೂ 5 ಸಾವಿರಕ್ಕೂ ಹೆಚ್ಚು ಜನರನ್ನು ಪ್ರವಾಹದಿಂದ ರಕ್ಷಿಸಿ ಎತ್ತರದ ಪ್ರದೇಶಗಳಿಗೆ ಸಾಗಿಸಲಾಗಿದೆ. ಆದರೆ, ಪ್ರತಿದಿನ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ಮುಂದುವರೆಸಿದ್ದಾರೆ. ವಿಶ್ವಾಮಿತ್ರಿ ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಈ ನದಿಯಲ್ಲಿರುವ ಮೊಸಳೆ, ಆಮೆಗಳೆಲ್ಲ ಊರೊಳಗೆ ಪ್ರವೇಶಿಸಿವೆ.
First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...