HOME » NEWS » National-international » CRITICALLY ILL MAN FROM KERALAS KASARGOD DIES AFTER POLICE STOP AMBULANCE FROM ENTERING KARNATAKA MAK

ಕಾಸರಗೋಡಿನಿಂದ ಕರ್ನಾಟಕಕ್ಕೆ ಪ್ರವೇಶಿಸಲು ಮುಂದಾದ ಆಂಬ್ಯುಲೆನ್ಸ್‌ಗೆ ಪೊಲೀಸ್ ತಡೆ; ಕೊರೋನಾ ಸೋಂಕಿತ ವ್ಯಕ್ತಿ ಸಾವು!

ಗಡಿ ದಾಟಿ ಕರ್ನಾಟಕದ ಒಳಗೆ ಬರಲು ಯಾವುದೇ ವಾಹನಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಪರಿಣಾಮ ಕಳೆದ ಒಂದು ವಾರದಲ್ಲಿ 4ಜನ ರೋಗಿಗಳು ಕಾಸರಗೋಡಿನಿಂದ ಗಡಿ ದಾಟಿ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದ್ದಾರೆ.

MAshok Kumar | news18-kannada
Updated:April 1, 2020, 10:18 AM IST
ಕಾಸರಗೋಡಿನಿಂದ ಕರ್ನಾಟಕಕ್ಕೆ ಪ್ರವೇಶಿಸಲು ಮುಂದಾದ ಆಂಬ್ಯುಲೆನ್ಸ್‌ಗೆ ಪೊಲೀಸ್ ತಡೆ; ಕೊರೋನಾ ಸೋಂಕಿತ ವ್ಯಕ್ತಿ ಸಾವು!
ಪ್ರಾತಿನಿಧಿಕ ಚಿತ್ರ.
  • Share this:
ಕಾಸರಗೋಡು (ಏಪ್ರಿಲ್ 01); ಇಲ್ಲಿನ ಕೊರೋನಾ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಸಲುವಾಗಿ ಆಂಬ್ಯಲೆನ್ಸ್‌ ಮೂಲಕ ಕರ್ನಾಟಕಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಲ್ಪಾಡಿಯಲ್ಲಿ ಗಡಿ ದಾಟಲು ಕರ್ನಾಟಕ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ 49 ವರ್ಷದ ರೋಗಿ ಆಂಬ್ಯಲೆನ್ಸ್‌ನಲ್ಲೇ ಸಾವನ್ನಪ್ಪಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಕಾಸರಗೋಡು ಕರ್ನಾಟಕಕ್ಕೆ ತುಂಬಾ ಹತ್ತಿರವಾದ ಕೇರಳದ ಜಿಲ್ಲೆ. ಕಾಸೆರಗೋಡಿಗಿಂತ ನೆರೆಯ ಮಂಗಳೂರಿನಲ್ಲಿ ಅತ್ಯುತ್ತಮ ಹೈಟೆಕ್ ಆಸ್ಪತ್ರೆಗಳು ಹಾಗೂ ಉತ್ತಮ ಚಿಕಿತ್ಸೆ ಸಿಗುವ ಭರವಸೆಯಲ್ಲಿ ದಶಕಗಳಿಂದ ಕಾಸರಗೋಡಿನ ಜನ ವೈದ್ಯಕೀಯ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ, ಕೊರೋನಾ ವೈರಸ್‌ ಭೀತಿಯಿಂದಾಗಿ ಅಂತಾರಾಜ್ಯ ಗಡಿಯನ್ನು ಮುಚ್ಚಲಾಗಿದೆ.

ಹೀಗಾಗಿ ಗಡಿ ದಾಟಿ ಕರ್ನಾಟಕದ ಒಳಗೆ ಬರಲು ಯಾವುದೇ ವಾಹನಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಪರಿಣಾಮ ಕಳೆದ ಒಂದು ವಾರದಲ್ಲಿ 4ಜನ ರೋಗಿಗಳು ಕಾಸರಗೋಡಿನಿಂದ ಗಡಿ ದಾಟಿ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದ್ದಾರೆ.

ಕಳೆದ ವಾರ ಗಡಿದಾಟುವ ಅವಕಾಶ ಸಿಗದ ಕಾರಣ ಓರ್ವ ಮಹಿಳೆ  ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಲ್ಪಾಡಿಯಲ್ಲಿ ಆಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೂ, ಚಿಕಿತ್ಸೆಗೆಂದು ಬರುವ ರೋಗಿಗಳಿಗೂ ಗಡಿ ದಾಟಲು ಅವಕಾಶ ನೀಡಲಾಗುತ್ತಿಲ್ಲ.

ಇದನ್ನೂ ಓದಿ : ತಮಿಳುನಾಡಿನಲ್ಲಿ ಒಂದೇ ದಿನ 57 ಕೊರೋನಾ ಸೋಂಕಿತರು ಪತ್ತೆ; ಇದರಲ್ಲಿ ದೆಹಲಿ ನಿಜಾಮುದ್ದೀನ್​ ಸಭೆಯಲ್ಲಿ ಪಾಲ್ಗೊಂಡವರು 50 ಮಂದಿ
First published: April 1, 2020, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories