ಉತ್ತರಪ್ರದೇಶ; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು All India Majlis-e-Ittehadul Muslimeen ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವಿನ ಮಾತಿನ ಸಮರ ಇದೀಗ ತಾರಕಕ್ಕೆ ಏರಿದೆ. ಭಾನುವಾರ ಮುಸ್ಲಿಮ್ ರಾಷ್ಟ್ರೀಯ ಮಂಚ್ ಉತ್ತರಪ್ರದೇಶದ ಘಾಸಿಯಾಬಾದ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಮೋಹನ್ ಭಾಗವತ್, "ಭಾರತದಲ್ಲಿ ಇಸ್ಲಾಮ್ ಧರ್ಮ ಅಪಾಯದಲ್ಲಿದೆ ಎಂದು ಸೃಷ್ಟಿಸಲಾದ ಭಯದ ಬಲೆಗೆ ಮುಸ್ಲಿಮರು ಸಿಲುಕಬಾರದು. ಎಲ್ಲಾ ಭಾರತೀಯರದ್ದೂ ಒಂದೇ ಡಿಎನ್ಎ ಆಗಿದ್ದು, ಪೂಜಾಚರಣೆ ವಿಚಾರದಿಂದ ಜನರನ್ನ ಬೇರ್ಪಡಿಸಲು ಸಾಧ್ಯವಿಲ್ಲ. ಹಾಗೆಯೇ, ಗೋ ರಕ್ಷಣೆ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ಸಹ ಸರಿಯಲ್ಲ. ಅಂಥವರು ಹಿಂದುತ್ವದ ವಿರುದ್ಧವಾಗಿದ್ದಾರೆ" ಎಂದು ಅಭಿಪ್ರಾಯಪ ಟ್ಟಿದ್ದರು. ಆದರೆ, ಭಾಗವತ್ ಅವರ ಈ ಮಾತಿಗೆ ತಿರುಗೇಟು ನೀಡಿರುವ ಅಸಾದುದ್ದೀನ್ ಓವೈಸಿ, "ದೇಶದಲ್ಲಿ ಗೋವಿನ ಹೆಸರಲ್ಲೊ ಕೊಲೆ ಮಾಡುತ್ತಿರುವ ವರಿಗೆ ಹಿಂದುತ್ವದ ಸರ್ಕಾರವೇ ಬೆನ್ನೆಲುಬಾಗಿದೆ" ಎಂದು ಟೀಕಿಸಿದ್ದಾರೆ.
ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಿರುಗೇಟು ನೀಡಿರುವ ಅಸಾದುದ್ದೀನ್ ಓವೈಸಿ, "ಆರ್‌ಎಸ್‌ಎಸ್‌ನ ಭಾಗವತ್ ಅವರು ಗುಂಪುಹತ್ಯೆ ಮಾಡಿದವರು ‘ಹಿಂದುತ್ವ ವಿರೋಧಿ’ ಎಂದು ಹೇಳಿದ್ದಾರೆ. ಆದರೆ, ಗೋ ರಕ್ಷಣೆಗೆ ಮುಂದಾಗುವ ಈ ಅಪರಾಧಿಗಳಿಗೆ ಹಸು ಮತ್ತು ಎಮ್ಮೆಯ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಆದರೆ, ಜುನೈದ್, ಅಖ್ಲಾಕ್, ಪೆಹ್ಲೂ, ರಕ್ಬರ್, ಅಲಿಮುದ್ದೀನ್ ಎಂಬ ಹೆಸರುಗಳ ಆಧಾರದ ಮೇಲೆ ಜನರನ್ನು ಕೊಲ್ಲವ ಬಗೆಯನ್ನು ಸಾಕಷ್ಟು ತಿಳಿದಿದ್ದಾರೆ. ಈ ಅಪರಾಧಿಗಳಿಗೆ ಹಿಂದುತ್ವ ಸರ್ಕಾರದ ಬೆಂಬಲವಿದೆ" ಎಂದು ಕಿಡಿಕಾರಿದ್ದಾರೆ.
केंद्रीय मंत्री के हाथों अलीमुद्दीन के कातिलों की गुलपोशी हो जाती है, अखलाक़ के हत्यारे की लाश पर तिरंगा लगाया जाता है, आसिफ़ को मारने वालों के समर्थन में महापंचायत बुलाई जाती है, जहाँ भाजपा का प्रवक्ता पूछता है कि "क्या हम मर्डर भी नहीं कर सकते?" 2/3
— Asaduddin Owaisi (@asadowaisi) July 5, 2021
RSS के भागवत ने कहा "लिंचिंग करने वाले हिंदुत्व विरोधी"।इन अपराधियों को गाय और भैंस में फ़र्क़ नहीं पता होगा लेकिन क़त्ल करने के लिए जुनैद, अखलाक़, पहलू, रकबर, अलीमुद्दीन के नाम ही काफी थे।ये नफ़रत हिंदुत्व की देन है, इन मुजरिमों को हिंदुत्ववादी सरकार की पुश्त पनाही हासिल है। 1/3
— Asaduddin Owaisi (@asadowaisi) July 5, 2021
"ಹೇಡಿತನ, ಹಿಂಸೆ ಮತ್ತು ಕೊಲೆ ಗೋಡ್ಸೆಯ ಹಿಂದುತ್ವ ಚಿಂತನೆಯ ಅವಿಭಾಜ್ಯ ಅಂಗವಾಗಿದೆ. ಮುಸ್ಲಿಮರನ್ನು ಹತ್ಯೆ ಮಾಡುವುದು ಈ ಚಿಂತನೆಯ ಪರಿಣಾಮವಾಗಿದೆ” ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Karnataka Weather Today: ಇಂದು ಮತ್ತು ನಾಳೆ ರಾಜ್ಯದಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ!
ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಓವೈಸಿ ಪಕ್ಷದ ಸ್ಪರ್ಧೆ ಮುಸ್ಲಿಂ ಸಮುದಾಯದ ಮತಗಳನ್ನು ಒಡೆಯಲಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳಿಗೆ ಅನಾನುಕೂಲವಾಗಲಿದೆ. ಆದರೆ, ಅತಿದೊಡ್ಡ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮತಗಳು ಒಡೆದು ಹೋಗುವುದರಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ