Fingerprint Surgery: ಕುವೈತ್‌ಗೆ ವೀಸಾ ಪಡೆಯಲು ಅಭ್ಯರ್ಥಿಗಳಿಗೆ ಬೆರಳಚ್ಚು ಶಸ್ತ್ರಚಿಕಿತ್ಸೆ ಮಾಡ್ತಿದ್ರಂತೆ ಈ ಖದೀಮರು!

ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ಕುವೈತ್‌ಗೆ ಕಳ್ಳಸಾಗಣೆ ಮಾಡಲು ಅಕ್ರಮವಾಗಿ ಬೆರಳಚ್ಚು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಇಬ್ಬರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಅಂತೆಯೇ ಕೇರಳದಲ್ಲಿ ಬೆರಳಚ್ಚು ಮಾದರಿಗಳನ್ನು ಬದಲಾಯಿಸಲು ಖದೀಮರು 11 ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು ಪ್ರತಿಯೊಂದಕ್ಕೆ 25,000 ಶುಲ್ಕ ವಿಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆರಳಚ್ಚು ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಖದೀಮರ ಬಂಧನ

ಬೆರಳಚ್ಚು ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಖದೀಮರ ಬಂಧನ

  • Share this:
ತಪ್ಪಿತಸ್ಥರನ್ನು ಪತ್ತೆಹಚ್ಚಲು ಇಲ್ಲವೇ ಅಪರಾಧವನ್ನು (Crime) ಕಂಡುಹಿಡಿಯಲು ಬೆರಳಚ್ಚುಗಳು (Fingerprints) ಮೂರ್ಖ-ನಿರರ್ಥಕ ವಿಧಾನವೆಂಬುದಾಗಿ ಯಾರಾದರೂ ಪರಿಗಣಿಸಿದ್ದರೆ ನಿಮ್ಮ ಪರಿಗಣನೆ ಸುಳ್ಳಾಗುವುದು ಖಂಡಿತ. ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ಕುವೈತ್‌ಗೆ (Kuwait) ಕಳ್ಳಸಾಗಣೆ ಮಾಡಲು ಅಕ್ರಮವಾಗಿ ಬೆರಳಚ್ಚು ಶಸ್ತ್ರಚಿಕಿತ್ಸೆ (surgery) ನಡೆಸುತ್ತಿದ್ದ ಇಬ್ಬರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಅಂತೆಯೇ ಕೇರಳದಲ್ಲಿ ಬೆರಳಚ್ಚು ಮಾದರಿಗಳನ್ನು ಬದಲಾಯಿಸಲು ಖದೀಮರು 11 ಶಸ್ತ್ರಚಿಕಿತ್ಸೆಗಳನ್ನು ನಡೆಸಿರೋದು ಗೊತ್ತಾಗಿದೆ. ಪ್ರತಿಯೊಂದಕ್ಕೆ ರೂ 25,000 ಶುಲ್ಕ ವಿಧಿಸಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಕುವೈತ್‌ನಲ್ಲಿ ಮರು ಪ್ರವೇಶ ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರನ್ನು ಬಂಧಿಸಲಾಗಿದೆ. ಶಸ್ತ್ರಚಿಕಿತ್ಸೆಗೆ ಬಳಸಲಾದ ವೈದ್ಯಕೀಯ ಕಿಟ್‌ಗಳು (Medical kit) ಹಾಗೂ ಇತರ ದಾಖಲೆಗಳು ಇದೀಗ ಪೊಲೀಸರ ವಶದಲ್ಲಿದೆ.

ನಾಲ್ವರು ಆರೋಪಿಗಳ ಬಂಧನ 
ಮಲ್ಕಾಜಿಗಿರಿ ವಲಯದ ವಿಶೇಷ ಕಾರ್ಯಾಚರಣೆ ತಂಡ ಘಟಕೇಸರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಗಜ್ಜಲಕೊಂಡುಗರಿ ನಾಗ ಮುನೇಶ್ವರ ರೆಡ್ಡಿ, ಸಾಗಬಾಳ ವೆಂಕಟ್ ರಮಣ, ಬೋವಿಲ್ಲ ಶಿವಶಂಕರ ರೆಡ್ಡಿ ಮತ್ತು ರೆಂಡ್ಲ ರಾಮಕೃಷ್ಣಾ ರೆಡ್ಡಿ ಎಂಬ ನಾಲ್ವರನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಕಡಪಾದಿಂದ ಬಂದಿದ್ದು ಹೈದರಾಬಾದ್‌ನ ಹೋಟೆಲ್‌ನಲ್ಲಿ ತಂಗಿದ್ದರು. ಘಟಕೇಸರ್‌ನಲ್ಲಿ ಹೆಚ್ಚಿನ ಜನರಿಗೆ ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಿದ್ಧರಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ:  Kamala Pujari: ಐಸಿಯುನಲ್ಲಿದ್ದವರ ಜೊತೆ ಹೀಗಾ ವರ್ತಿಸೋದು? ಪದ್ಮಶ್ರೀ ಪುರಸ್ಕೃತೆಗೆ ಇದೆಂಥಾ ಅಪಮಾನ?

ಪೊಲೀಸರ ಪ್ರಕಾರ, ಗಜ್ಜಲಕೊಂಡೂಗರಿ ನಾಗ ಮುನೇಶ್ವರ ರೆಡ್ಡಿ ಅವರು 36 ರ ಹರೆಯದ ರೇಡಿಯಾಲಜಿಸ್ಟ್ ಮತ್ತು ವೈಎಸ್ಆರ್ ಕಡಪಾ ಜಿಲ್ಲೆಯ ಕೃಷ್ಣ ಡಯಾಗ್ನೋಸ್ಟಿಕ್ಸ್ನಲ್ಲಿ ಎಕ್ಸ್-ರೇ ತಂತ್ರಜ್ಞರಾಗಿದ್ದ. ನಾಗ ಮುನೇಶ್ವರ ರೆಡ್ಡಿ ತನ್ನ ಸಹಪಾಠಿ ಆಗಿರುವ ತಿರುಪತಿಯ ಡಿಬಿಆರ್ ಆಸ್ಪತ್ರೆಯಲ್ಲಿ ಅರಿವಳಿಕೆ ತಂತ್ರಜ್ಞರಾದ 39 ವರ್ಷದ ಸಗಬಾಲಾ ವೆಂಕಟ್ ರಮಣನನ್ನು ಭೇಟಿಯಾಗುತ್ತಾನೆ.

ಮುನೇಶ್ವರ ರೆಡ್ಡಿ ಈ ಹಿಂದೆ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಭೇಟಿಯಾಗಿದ್ದು, ವೀಸಾ ಅವಧಿ ಮುಗಿಯುತ್ತಿದ್ದಂತೆ ಆತನನ್ನು ಭಾರತಕ್ಕೆ ಗಡೀಪಾರು ಮಾಡಿರುವ ಸುದ್ದಿಯನ್ನು ತಿಳಿದುಕೊಂಡಿರುತ್ತಾರೆ.

ಇದೇ ವ್ಯಕ್ತಿ ಶ್ರೀಲಂಕಾಕ್ಕೆ ತೆರಳಿ ಬೆರಳ ತುದಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಂತರ ಕುವೈತ್‌ಗೆ ಮರಳಿರುತ್ತಾರೆ. ತಾವು ಕೂಡ ಇಂತಹುದ್ದೇ ಯೋಜನೆಯನ್ನು ಮಾಡಬಹುದು ಎಂಬುದನ್ನು ಅರಿತುಕೊಂಡ ಮುನೇಶ್ವರ್ ಸಹಪಾಠಿಯೊಂದಿಗೆ ಯೋಜನೆಯನ್ನು ರೂಪಿಸುತ್ತಾರೆ.

ಶಸ್ತ್ರಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಹಣವೆಷ್ಟು
ಅರಿವಳಿಕೆ ತಜ್ಞ ವೆಂಕಟ ರಾಮನ್ ಅವರೊಂದಿಗೆ ರಾಜಸ್ಥಾನಕ್ಕೆ ತೆರಳಿದ ಮುನೇಶ್ವರ್ ಇಬ್ಬರಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿ ತಲಾ ರೂ 25,000 ಶುಲ್ಕ ವಿಧಿಸುತ್ತಾರೆ. ಕೇರಳದ ಮತ್ತೊಬ್ಬ ವ್ಯಕ್ತಿ ಕೂಡ ಶಸ್ತ್ರಚಿಕಿತ್ಸೆಗಾಗಿ ಮುನೇಶ್ವರ್ ಅವರನ್ನು ಸಂಪರ್ಕಿಸಿದ್ದು ಇಬ್ಬರೂ ಕೇರಳಕ್ಕೆ ತೆರಳಿ ರೂ 1.5 ಲಕ್ಷ ವೆಚ್ಚದಲ್ಲಿ ಇತರ ಆರು ಜನರ ಬೆರಳ ತುದಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಇದನ್ನೂ ಓದಿ: Viral Story: ವಿಮಾನದಲ್ಲಿ ಕೆಟ್ಟ ವರ್ತನೆ ತೋರಿಸಿದ ಪ್ರಯಾಣಿಕರು! ಸಿಟ್ಟಿಗೆದ್ದ ಪೈಲಟ್ ಏನು ಮಾಡಿದ್ರು ಗೊತ್ತಾ?

ಶಸ್ತ್ರಚಿಕಿತ್ಸೆಗಳನ್ನು ಹೇಗೆ ನಡೆಸಲಾಗುತ್ತದೆ?
ಶಸ್ತ್ರಚಿಕಿತ್ಸೆಗಳನ್ನು ನಡೆಸಲು, ಗಜ್ಜಲಕೊಂಡೂಗರಿ ಮತ್ತು ಸಗಬಾಲಾ ಅವರು ಅಭ್ಯರ್ಥಿಗಳ ಬೆರಳ ತುದಿಯ ಮೇಲಿನ ಪದರವನ್ನು ಕತ್ತರಿಸಿ, ಅಂಗಾಂಶದ ಒಂದು ಭಾಗವನ್ನು ತೆಗೆದು ಮತ್ತೆ ಹೊಲಿಗೆ ಹಾಕುತ್ತಾರೆ. ಈ ಗಾಯವು ಒಂದೆರಡು ದಿನಗಳಲ್ಲಿ ವಾಸಿಯಾಗುತ್ತದೆ ಹಾಗೂ ಶಸ್ತ್ರಚಿಕಿತ್ಸೆಯು ಒಂದು ವರ್ಷದವರೆಗೆ ಬೆರಳಚ್ಚು ಮಾದರಿಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸುತ್ತದೆ.ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡ ಜನರು ನಂತರ ತಮ್ಮ ಬೆರಳಚ್ಚುಗಳನ್ನು ಭಾರತದ ವಿಶಿಷ್ಟ ಗುರುತಿನ ವ್ಯವಸ್ಥೆ ಆಧಾರ್ ಅಡಿಯಲ್ಲಿ ನವೀಕರಿಸುತ್ತಾರೆ ಮತ್ತು ಹೊಸ ವಿಳಾಸದೊಂದಿಗೆ ಕುವೈತ್‌ಗೆ ಪ್ರಯಾಣಿಸಲು ಹೊಸ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:  Toll Plate: ಇನ್ಮುಂದೆ ಹೊಸ ರೀತಿಯಲ್ಲಿ ಟೋಲ್ ಸಂಗ್ರಹಣೆಗೆ ಪ್ಲ್ಯಾನ್; ಹೇಗಿರಲಿದೆ ಟೋಲ್‌ ಪ್ಲೇಟ್‌?

25 ವರ್ಷದ ಬೋವಿಲ್ಲ ಶಿವಶಂಕರ ರೆಡ್ಡಿ ಮತ್ತು 38 ವರ್ಷದ ರೆಂಡ್ಲ ರಾಮ ಕೃಷ್ಣಾ ರೆಡ್ಡಿ ಕುವೈತ್‌ನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕ್ರಿಮಿನಲ್ ಚಟುವಟಿಕೆಗಾಗಿ ಕುವೈತ್‌ನಿಂದ ಗಡೀಪಾರು ಮಾಡಿರುವ ಇವರಿಗೆ ಶಸ್ತ್ರಚಿಕಿತ್ಸೆಯ ವಿಧಾನವು ಅಧಿಕಾರಿಗಳ ಕಣ್ತೆಪ್ಪಿಸುವಲ್ಲಿ ಸಹಾಯ ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ.
Published by:Ashwini Prabhu
First published: