ಮಹಿಳೆಗೆ ಗುಂಡು ಹಾರಿಸಿ, ನಡುರಸ್ತೆಯಲ್ಲಿ ಕಾರಿನಿಂದ ತಳ್ಳಿದ ಪೊಲೀಸ್ ಅಧಿಕಾರಿ!

Crime News: ದೆಹಲಿ ಎಸ್​ಐ ಸಂದೀಪ್ ದಹಿಯಾ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಭಾನುವಾರ ಕಾರಿನಲ್ಲಿ ಹೋಗುವಾಗ ಇಬ್ಬರ ಜಗಳ ಅತಿರೇಕಕ್ಕೆ ಹೋಗಿ, ಕೋಪದಿಂದ ಸಂದೀಪ್ ಆಕೆಯ ಮೇಲೆ ಗುಂಡು ಹಾರಿಸಿ, ಕಾರಿನಿಂದ ರಸ್ತೆಗೆ ತಳ್ಳಿದ್ದರು. ಈ ವೇಳೆ ಇನ್ನೋರ್ವ ಎಸ್​ಐ ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ.

Sushma Chakre | news18-kannada
Updated:September 28, 2020, 9:11 AM IST
ಮಹಿಳೆಗೆ ಗುಂಡು ಹಾರಿಸಿ, ನಡುರಸ್ತೆಯಲ್ಲಿ ಕಾರಿನಿಂದ ತಳ್ಳಿದ ಪೊಲೀಸ್ ಅಧಿಕಾರಿ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ. 28): ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಗೆ ಗುಂಡು ಹಾರಿಸಿ, ಚಲಿಸುತ್ತಿದ್ದ ತಮ್ಮ ಕಾರಿನಿಂದ ಆಕೆಯನ್ನು ರಸ್ತೆಗೆ ತಳ್ಳಿ ಹೋಗಿದ್ದಾರೆ. ಈ ಘಟನೆಯಲ್ಲಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ವಿಚಿತ್ರವೆಂದರೆ ಇನ್ನೋರ್ವ ಪೊಲೀಸ್ ಅಧಿಕಾರಿ ಬಂದು ಆ ಮಹಿಳೆಯ ಜೀವ ಉಳಿಸಿದ್ದಾರೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ಆ ಪೊಲೀಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಅಷ್ಟಕ್ಕೂ ಪೊಲೀಸ್ ಆಕೆಯನ್ನು ಕಾರಿನಿಂದ ತಳ್ಳಲು ಕಾರಣವೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ನವದೆಹಲಿಯ ಅಲೀಪುರದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಇಲ್ಲಿನ ಸಬ್​ ಇನ್​ಸ್ಪೆಕ್ಟರ್ ಸಂದೀಪ್ ದಹಿಯಾ ಎಂಬುವವರು ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ತಮ್ಮ ಹೆಂಡತಿಯ ಜೊತೆ ಸದಾ ಜಗಳವಾಡುತ್ತಿದ್ದ ಅವರು ಆಕೆಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದರು. ಹೀಗಾಗಿ, ಕಳೆದ ವರ್ಷದಿಂದ ಅವರು ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಆದರೆ, ಅವರಿಬ್ಬರ ನಡುವೆಯೂ ಇತ್ತೀಚೆಗೆ ಹಲವು ಬಾರಿ ಜಗಳವಾಗಿತ್ತು. ಭಾನುವಾರ ಕಾರಿನಲ್ಲಿ ಹೋಗುವಾಗಲೂ ಎಸ್​ಐ ಸಂದೀಪ್ ದಹಿಯಾ ಮತ್ತು ಆ ಮಹಿಳೆಯ ನಡುವೆ ಜಗಳ ನಡೆದಿತ್ತು.

ಇದನ್ನೂ ಓದಿ: ದೆಹಲಿ ಫ್ಲ್ಯಾಟ್​ನಲ್ಲಿ ಯುವತಿಯ ಕೊಳೆತ ಶವ ಪತ್ತೆ; 3 ದಿನಗಳಿಂದ ಆಕೆಯ ಪ್ರಿಯಕರ ನಾಪತ್ತೆ

ಇಬ್ಬರ ಜಗಳ ಅತಿರೇಕಕ್ಕೆ ಹೋಗಿ, ಕೋಪದಿಂದ ಸಂದೀಪ್ ದಹಿಯಾ ಆಕೆಯ ಮೇಲೆ ಗುಂಡು ಹಾರಿಸಿ, ಚಲಿಸುವ ಕಾರಿನಿಂದ ರಸ್ತೆಗೆ ತಳ್ಳಿದ್ದರು. ಗುಂಡೇಟಿನ ಜೊತೆಗೆ ರಭಸವಾಗಿ ಕೆಳಗೆ ಬಿದ್ದಿದ್ದರಿಂದ ಆಕೆಯ ದೇಹಕ್ಕೆ ಸಾಕಷ್ಟು ಗಾಯಗಳಾಗಿದ್ದವು. ಅದೇವೇಳೆ ಕಚೇರಿಗೆ ಹೋಗುತ್ತಿದ್ದ ಶಾಹ್​ಬಾದ್​ ಡೈರಿ ಪೊಲೀಸ್ ಠಾಣೆಯ ಎಸ್​ಐ ಜೈವೀರ್ ಎಂಬುವವರು ಆ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದರು ಎಂದು ದೆಹಲಿ ಉತ್ತರ ವಿಭಾಗದ ಡಿಸಿಪಿ ಗೌರವ್ ಶರ್ಮ ತಿಳಿಸಿದ್ದಾರೆ.

ಸದ್ಯಕ್ಕೆ ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆಕೆ ತನ್ನ ಮೇಲೆ ಗುಂಡಿನ ದಾಳಿ ನಡೆದಿದ್ದಾಗಿ ಹೇಳಿಕೆ ನೀಡಿದ್ದಾಳೆ. ನಾಪತ್ತೆಯಾಗಿರುವ ಎಸ್​ಐ ಸಂದೀಪ್ ದಹಿಯಾ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ಗೌರವ್ ಶರ್ಮ ಮಾಹಿತಿ ನೀಡಿದ್ದಾರೆ.
Published by: Sushma Chakre
First published: September 28, 2020, 9:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading