ಮಗಳ ಕೊಲೆ ಆರೋಪದಲ್ಲಿ ಜೈಲು ಸೇರಿದ ಅಪ್ಪ; ಪ್ರಿಯಕರನ ಜೊತೆ ಯುವತಿ ಪತ್ತೆ!

Crime News: ಅಪ್ಪ, ಅಣ್ಣ ತನ್ನನ್ನು ಕೊಂದಿದ್ದಾರೆ ಎಂಬ ಆರೋಪದಲ್ಲಿ ಜೈಲು ಸೇರಿದ್ದರೆ ಆಕೆ ತನ್ನ ಪ್ರಿಯಕರನ ಜೊತೆ ಆರಾಮಾಗಿ ಜೀವನ ನಡೆಸುತ್ತಿದ್ದಳು. ಈ ವಿಷಯ ಒಂದೂವರೆ ವರ್ಷದ ಬಳಿಕ ಪೊಲೀಸರಿಗೆ ಗೊತ್ತಾಗಿದೆ.

Sushma Chakre | news18-kannada
Updated:August 8, 2020, 2:04 PM IST
ಮಗಳ ಕೊಲೆ ಆರೋಪದಲ್ಲಿ ಜೈಲು ಸೇರಿದ ಅಪ್ಪ; ಪ್ರಿಯಕರನ ಜೊತೆ ಯುವತಿ ಪತ್ತೆ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಆ. 8): ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಕೊಲೆ ಮಾಡಿದ ಆರೋಪದಲ್ಲಿ ಆಕೆಯ ಅಪ್ಪ, ಅಣ್ಣ ಮತ್ತು ಪಕ್ಕದ ಊರಿನವನನ್ನು ಜೈಲಿಗೆ ಕಳುಹಿಸಲಾಗಿತ್ತು. ಒಂದೂವರೆ ವರ್ಷ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಆದರೆ, ವಾಸ್ತವವಾಗಿ ಅಲ್ಲಿ ಆಗಿದ್ದೇ ಬೇರೆ! ಅಸಲಿ ವಿಚಾರ ತಿಳಿದ ಪೊಲೀಸರು ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ತಾವು ಮಾಡಿದ ಒಂದೇ ಒಂದು ತಪ್ಪಿನಿಂದ ನಿರಪರಾಧಿಗಳು ಜೈಲಿನಲ್ಲಿ ಕಾಲ ಕಳೆಯುವಂತಾಯಿತಲ್ಲ ಎಂದು ಪೇಚಾಡುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ?

ಮಗಳ ಕೊಲೆಯ ಆರೋಪದಲ್ಲಿ ಜೈಲು ಸೇರಿದ್ದ ಅಪ್ಪ ಇದೀಗ ನಿರಪರಾಧಿಯೆಂದು ಸಾಬೀತಾಗಿದೆ. ಅವರ ಜೊತೆ ಶಿಕ್ಷೆ ಅನುಭವಿಸಿದ್ದ ಮಗ ಕೂಡ ಈಗ ನಿರಪರಾಧಿ ಎಂದು ಗೊತ್ತಾಗಿದೆ. ಅವರು ಯಾರನ್ನು ಕೊಲೆ ಮಾಡಿದ್ದರು ಎಂದು ಹೇಳಲಾಗಿತ್ತೋ ಆಕೆ ಇನ್ನೂ ಜೀವಂತವಾಗಿಯೇ ಇದ್ದಾಳೆ ಎಂಬ ವಿಷಯ ಒಂದೂವರೆ ವರ್ಷದ ಬಳಿಕ ಪೊಲೀಸರಿಗೆ ಗೊತ್ತಾಗಿದೆ. ಅಪ್ಪ, ಅಣ್ಣ ತನ್ನನ್ನು ಕೊಂದಿದ್ದಾರೆ ಎಂಬ ಆರೋಪದಲ್ಲಿ ಜೈಲು ಸೇರಿದ್ದರೆ ಆಕೆ ತನ್ನ ಪ್ರಿಯಕರನ ಜೊತೆ ಆರಾಮಾಗಿ ಜೀವನ ನಡೆಸುತ್ತಿದ್ದಳು.

ಇದನ್ನೂ ಓದಿ: Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!

ಈ ವಿಷಯ ತಿಳಿದು ಖುದ್ದು ಪೊಲೀಸರೂ ಶಾಕ್ ಆಗಿದ್ದಾರೆ. ಹಾಗೇ, ವಿನಾಕಾರಣ ತಮ್ಮ ಮನೆಯ ಇಬ್ಬರು ಗಂಡಸರನ್ನು ಜೈಲಿಗೆ ಕಳುಹಿಸಿದ ಪೊಲೀಸರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಯುವತಿಯರ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳು ಬದುಕಿದ್ದರೂ ಆಕೆಯ ಕೊಲೆ ಆರೋಪದಲ್ಲಿ ಮೂವರಿಗೆ ಜೈಲು ಶಿಕ್ಷೆ ನೀಡಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಿತ್ರವಾದ ಘಟನೆಯಿಂದ ಉತ್ತರ ಪ್ರದೇಶದ ಪೊಲೀಸರು ತಲೆ ತಗ್ಗಿಸುವಂತಾಗಿದೆ.

2019ರ ಫೆಬ್ರವರಿ 6ರಂದು ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಮಾಲಾಪುರ ಗ್ರಾಮದಲ್ಲಿ ನಡೆದ ಘಟನೆಯಿದು. ಯುವತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಆದಂಪುರ ಪೊಲೀಸ್ ಠಾಣೆಯ ಸಿಬ್ಬಂದಿ ಯುವತಿಯ ಅಪ್ಪ ಸುರೇಶ್, ಆಕೆಯ ಮತ್ತೋರ್ವ ಅಣ್ಣ ರೂಪ್ ಕಿಶೋರ್ ಹಾಗೂ ಪಕ್ಕದ ಊರಿನವನಾದ ದೇವೇಂದ್ರನನ್ನು ಬಂಧಿಸಿದ್ದರು. ಆ ಯುವತಿಯನ್ನು ಕೊಲೆ ಮಾಡಿದ್ದ ಗನ್, ಆಕೆಯ ಬಟ್ಟೆ ಕೂಡ ಸಿಕ್ಕಿದ್ದರಿಂದ ಅವರಿಗೆ ಜೈಲು ಶಿಕ್ಷೆಯೂ ಆಗಿತ್ತು.

ಇದನ್ನೂ ಓದಿ: ಗಂಡನ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ದೆವ್ವ ಬರುತ್ತೆ!; ಮಾವನ ಮಾತು ಕೇಳಿ ಸೊಸೆ ಶಾಕ್
ಯುವತಿಯ ಇನ್ನೋರ್ವ ಅಣ್ಣ ರಾಹುಲ್ ಪೊಲೀಸ್ ಠಾಣೆಗೆ ಬಂದು ತನ್ನ ತಂಗಿ ಕೊಲೆಯಾಗಿಲ್ಲ ಆಕೆ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ. ತನ್ನ ತಂಗಿ ಪಕ್ಕದ ಊರಿನ ರಾಕೇಶ್ ಎಂಬಾತನ ಜೊತೆ ಓಡಿಹೋಗಿದ್ದಾಳೆ. ಅವರಿಗೆ ಈಗ ಒಂದು ಮಗುವೂ ಇದೆ. ವಿನಾಕಾರಣ ನಮ್ಮ ಮನೆಯವರನ್ನು ಬಂಧಿಸಿ, ಜೈಲು ಶಿಕ್ಷೆ ನೀಡಿದ್ದೀರಿ ಎಂದು ಆರೋಪಿಸಿದ್ದಾರೆ. ಮಾಡಿಲ್ಲದ ಕೊಲೆಯನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿ, ನನ್ನ ಅಪ್ಪ ಮತ್ತು ಅಣ್ಣನನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ರಾಹುಲ್ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದಿಂದ ಉತ್ತರ ಪ್ರದೇಶದ ಪೊಲೀಸರು ತಲೆತಗ್ಗಿಸುವಂತಾಗಿದೆ.
Published by: Sushma Chakre
First published: August 8, 2020, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading