ಅತ್ಯಾಚಾರಕ್ಕೆ ವಿರೋಧಿಸಿದ ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿದ ಯುವಕ ಬಂಧನ

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ 21 ವರ್ಷದ ಕೃಷ್ಣ ಗುಪ್ತ ಎಂಬಾತ 15 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ. ಅದಕ್ಕೆ ಆಕೆ ವಿರೋಧಿಸಿದ್ದರಿಂದ ಕೋಪಗೊಂಡ ಆತ ಆಕೆಯ ಮೇಲೆ ಪೆಟ್ರೋಲ್ ಚೆಲ್ಲಿ, ಬೆಂಕಿ ಹಚ್ಚಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ (ನ. 8): ದೇಶದಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಕೊರೋನಾ ಆತಂಕದ ನಡುವೆಯೂ ಅಪರಾಧ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸಿದ ವ್ಯಕ್ತಿಯೋರ್ವ ಆಕೆ ಅದಕ್ಕೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ನಡೆದಿದೆ. 15 ವರ್ಷದ ದಲಿತ ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳಲು ಮುಂದಾದ 21 ವರ್ಷದ ಯುವಕ ಇದೀಗ ಜೈಲು ಸೇರಿದ್ದಾನೆ. ಮೈ ತುಂಬ ಸುಟ್ಟ ಗಾಯಗಳಿಂದ ನರಳುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

  ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನವೆಂಬರ್ 6ರಂದು ಈ ಘಟನೆ ನಡೆದಿದೆ. 21 ವರ್ಷದ ಕೃಷ್ಣ ಗುಪ್ತ ಎಂಬಾತ 15 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ. ಆದರೆ, ಆಕೆ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ ಪೆಟ್ರೋಲ್ ಚೆಲ್ಲಿ, ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ಗಾಯಗೊಂಡಿದ್ದ ಯುವತಿಯನ್ನು ವಾರಾಣಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

  ಇದನ್ನೂ ಓದಿ: Sasikanth Senthil: ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ನಾಳೆ ಕಾಂಗ್ರೆಸ್​ಗೆ ಸೇರ್ಪಡೆ

  ಬಾಲಕಿಯ ಊರಿನವನೇ ಆದ ಕೃಷ್ಣ ಗುಪ್ತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದ. ಆ ವೇಳೆ ಈ ಘಟನೆ ನಡೆದಿದೆ ಎಂದು ದುಭಾರ್ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಅನಿಲ್ ಚಂದ್ರ ತಿವಾರಿ ತಿಳಿಸಿದ್ದಾರೆ. ನನ್ನ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಲು ಕೃಷ್ಣ ಗುಪ್ತ ಪ್ರಯತ್ನಿಸಿದ್ದ. ಅದಕ್ಕೆ ಆಕೆ ವಿರೋಧಿಸಿದ್ದರಿಂದ ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಲಾಗಿದೆ ಎಂದು ಬಾಲಕಿಯ ತಂದೆ ದೂರು ನೀಡಿದ್ದರು.

  ಆ ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಕೃಷ್ಣ ಗುಪ್ತ ವಿರುದ್ಧ ಐಪಿಸಿ, ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಹಾಗೇ, ಆತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
  Published by:Sushma Chakre
  First published: