ಅಪ್ಪನಿಂದ 1 ಕೋಟಿ ರೂ. ವಸೂಲಿ ಮಾಡಲು ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಂಡ ಯುವತಿ!

ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಕೋಟ್ಯಾಧೀಶರಾದ ತನ್ನ ಅಪ್ಪ-ಅಮ್ಮನ ಬಳಿ 1 ಕೋಟಿ ರೂ. ವಸೂಲಿ ಮಾಡಲು ಪ್ಲಾನ್ ಮಾಡಿದ್ದಳು. ಅದಕ್ಕಾಗಿ ತನ್ನ ಬಾಯ್​ಫ್ರೆಂಡ್ ಜೊತೆ ಸೇರಿ ಕಿಡ್ನಾಪ್ ನಾಟಕವಾಡಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಜು. 26): ಹಣಕ್ಕಾಗಿ ಕೆಲವರು ಏನು ಬೇಕಾದರೂ ಸಿದ್ಧರಿರುತ್ತಾರೆ ಎಂಬುದಕ್ಕೆ ಉತ್ತರ ಪ್ರದೇಶದ 19 ವರ್ಷದ ಯುವತಿ ತಾಜಾ ಉದಾಹರಣೆಯಾಗಿದ್ದಾಳೆ. ತನ್ನ ಅಪ್ಪ-ಅಮ್ಮನಿಂದ 1 ಕೋಟಿ ರೂ. ವಸೂಲಿ ಮಾಡಲು ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಂಡು ನಾಟಕವಾಡಿರುವ ಈ ಯುವತಿಯ ನಿಜರೂಪ ಈಗ ಬಯಲಾಗಿದೆ.

ಉತ್ತರ ಪ್ರದೇಶದ ಎತಾಹ್ ಜಿಲ್ಲೆಯ ನಾಗ್ಲಾ ಭಾಜ್ನಾ ಎಂಬ ಹಳ್ಳಿಯಲ್ಲಿ 19 ವರ್ಷದ ಯುವತಿ ತನ್ನ ಬಾಯ್​ಫ್ರೆಂಡ್ ಜೊತೆ ಸೇರಿ ಅಪ್ಪ-ಅಮ್ಮನಿಂದ ಹಣ ವಸೂಲಿ ಮಾಡಲು ಪ್ಲಾನ್ ಮಾಡಿದ್ದಳು. ಅದಕ್ಕಾಗಿ ಉಪಾಯ ಮಾಡಿ, ತನ್ನ ಬಾಯ್​ಫ್ರೆಂಡ್​ನಿಂದಲೇ ತನ್ನನ್ನು ಕಿಡ್ನಾಪ್ ಮಾಡಿಸಿಕೊಂಡು, ಅಪ್ಪ-ಅಮ್ಮನಿಗೆ ಬೆದರಿಕೆ ಕರೆ ಮಾಡಿಸಿ, 1 ಕೋಟಿ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ.

ಗುರುವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಯುವತಿಯ ಬಗ್ಗೆ ಆಕೆಯ ಅಪ್ಪ-ಅಮ್ಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅನಾಮಿಕನೊಬ್ಬ ಫೋನ್ ಮಾಡಿ, ನಿಮ್ಮ ಮಗಳನ್ನು ನಾವು ಅಪಹರಿಸಿದ್ದೇವೆ. 1 ಕೋಟಿ ರೂ. ಕೊಟ್ಟರೆ ಆಕೆಯನ್ನು ಬಿಡುತ್ತೇವೆ ಎಂದು ಬೆದರಿಕೆಯೊಟ್ಟಿದ್ದ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆ ಯುವತಿಯನ್ನು ಫಾರ್ಮ್​ಹೌಸ್​ ಒಂದರಲ್ಲಿ ಬಂಧಿಸಿದ್ದಾರೆ. ಆಕೆಯ ಬಾಯ್​ಫ್ರೆಂಡ್ ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ: Crime News: ಗೇಮ್ ಆಡಿದ್ದಕ್ಕೆ ಮಗನಿಂದ ಮೊಬೈಲ್ ಕಿತ್ತುಕೊಂಡ ಅಮ್ಮ; ಕೋಪದಿಂದ ಆತ್ಮಹತ್ಯೆ ಮಾಡಿಕೊಂಡ ಬಾಲಕ

ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಕೋಟ್ಯಾಧೀಶರಾದ ತನ್ನ ಅಪ್ಪ-ಅಮ್ಮನ ಬಳಿ ಖರ್ಚಿಗಾಗಿ ಹಣ ವಸೂಲಿ ಮಾಡಲು ಪ್ಲಾನ್ ಮಾಡಿದ್ದಳು. ತನ್ನ ಅಪ್ಪ ಸ್ಕೂಲ್ ನಿರ್ಮಿಸಲು 1 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ ಎಂಬ ವಿಷಯ ಯುವತಿಗೆ ಗೊತ್ತಾಗಿತ್ತು. ಆ ಹಣವನ್ನು ಪಡೆಯಲು ತಾನೇ ಗುರುವಾರ ರಾತ್ರಿ ಮನೆಯಿಂದ ಹೊರಗೆ ಬಂದಿದ್ದಳು. ನಂತರ ಆಕೆಯನ್ನು ಆಕೆಯ ಬಾಯ್​ಫ್ರೆಂಡ್​ ಬೈಕ್​ನಲ್ಲಿ ಫಾರ್ಮ್​ಹೌಸ್​ಗೆ ಕರೆದುಕೊಂಡು ಹೋಗಿದ್ದ.

ಮಾರನೇ ದಿನ ಆಕೆಯ ಬಾಯ್​ಫ್ರೆಂಡ್​ ಫೋನ್ ಮಾಡಿ ಬೆದರಿಕೆಯೊಡ್ಡಿದ್ದ. ಅಲ್ಲದೆ, 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ. ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಪೊಲೀಸರು, ಮೊದಲು ಇದು ಯಾವುದೋ ಪ್ರೊಫೆಷನಲ್ ಕಿಡ್ನಾಪರ್​ಗಳ ಕೆಲಸ ಎಂದು ನಾವು ಭಾವಿಸಿದ್ದೆವು. ಆದರೆ, ಅವರು ಫೋನ್ ಮಾಡುತ್ತಿದ್ದ ಸಮಯ, ಮಾತನಾಡುತ್ತಿದ್ದ ರೀತಿಯೆಲ್ಲವನ್ನೂ ಗಮನಿಸಿದ ನಮಗೆ ಅನುಮಾನ ಉಂಟಾಗಿತ್ತು. ಆಗ ನಮ್ಮ ಇಲಾಖೆಯವರು ಆ ಯುವತಿಯ ಮೊಬೈಲ್ ನಂಬರ್ ಟ್ರಾಕ್ ಮಾಡಿದರು. ಆಕೆ ತನ್ನ ಮೊಬೈಲ್ ಫೋನನ್ನು ತನ್ನೊಡನೆ ತೆಗೆದುಕೊಂಡು ಹೋಗಿದ್ದರಿಂದ ಅವರನ್ನು ಹಿಡಿಯಲು ಅನುಕೂಲವಾಯಿತು ಎಂದಿದ್ದಾರೆ.
Published by:Sushma Chakre
First published: