Crime News: ಮಗನಿಗೆ ತಿಳಿಯದಂತೆ ಸೊಸೆಯನ್ನೇ ಮಾರಾಟ ಮಾಡಿದ ಮಾವ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಮಗ ಮನೆಯಲ್ಲಿ ಇಲ್ಲದಿದ್ದ ವೇಳೆ ಮಾವನೇ ತನ್ನ ಸೊಸೆಯನ್ನು ಕರೆದುಕೊಂಡು ಹೋಗಿ 80 ಸಾವಿರ ರೂ.ಗೆ ಮಾರಾಟ ಮಾಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋ ಬಳಿ ನಡೆದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಅವರಿಬ್ಬರೂ ಸೋಷಿಯಲ್ ಮೀಡಿಯಾ ಮೂಲಕ ಪರಿಚಿತರಾಗಿದ್ದರು. ಆ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿತ್ತು. ಅವರಿಬ್ಬರೂ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಅದೊಂದು ದಿನ ಆತ ಕೆಲಸದಿಂದ ಮನೆಗೆ ವಾಪಾಸ್ ಬಂದಾಗ ಹೆಂಡತಿ ಇಲ್ಲದಿರುವುದನ್ನು ಕಂಡು ಕಂಗಾಲಾಗುತ್ತಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಆತನ ಹೆಂಡತಿ ಕೇವಲ 80,000 ರೂ.ಗೆ ಮಾರಾಟವಾಗಿದ್ದಾಳೆ ಎಂಬುದು ತಿಳಿಯುತ್ತದೆ. ಹಾಗಾದರೆ, ಆಕೆಯನ್ನು ಮಾರಾಟ ಮಾಡಿದ್ದು ಯಾರು?

ಮಾವ-ಸೊಸೆಯ ಸಂಬಂಧ ತಂದೆ-ಮಗಳ ಸಂಬಂಧದ ಹಾಗೆಂದು ದೊಡ್ಡವರು ಹೇಳುತ್ತಾರೆ. ಆದರೆ, ಇಲ್ಲೊಬ್ಬ ಮಾವ ತನ್ನ ಮಗನಿಗೆ ಗೊತ್ತಾಗದಂತೆ ಸೊಸೆಯನ್ನು 80 ಸಾವಿರ ರೂ.ಗೆ ಮಾರಾಟ ಮಾಡಿದ್ದಾನೆ! ಉತ್ತರ ಪ್ರದೇಶದ ಲಕ್ನೋಗೆ ಸಮೀಪವಿರುವ ಬರಬಂಕಿ ಎಂಬ ಊರಿನಲ್ಲಿ ಈ ಘಟನೆ ನಡೆದಿದೆ. ಗಾಜಿಯಾಬಾದ್​ನಲ್ಲಿ ವಾಸವಾಗಿದ್ದ ಪ್ರಿನ್ಸ್​ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಅದು ಆತನ ಅಪ್ಪನಿಗೆ ಇಷ್ಟವಿರಲಿಲ್ಲ.

ಟ್ಯಾಕ್ಸಿ ಡ್ರೈವರ್ ಆಗಿದ್ದ ಪ್ರಿನ್ಸ್​ ಬೆಳಗ್ಗೆ ಮನೆಯಿಂದ ಹೊರಗೆ ಹೋದರೆ ಸಂಜೆ ವಾಪಾಸ್ ಬರುತ್ತಿದ್ದ. ಕೆಲವು ದಿನಗಳ ಹಿಂದೆ ಪ್ರಿನ್ಸ್​ನ ತಂದೆ ಆತನ ಮನೆಗೆ ಬಂದು ತನ್ನ ಸೊಸೆಯ ಜೊತೆ ಚೆನ್ನಾಗಿ ಮಾತನಾಡಿದ್ದರು. ತನ್ನ ಜೊತೆ ತಮ್ಮ ಮನೆಗೆ ಬಾ, ಸಂಜೆ ಮಗ ಬಂದ ನಂತರ ವಾಪಾಸ್ ಕಳುಹಿಸುತ್ತೇನೆ ಎಂದು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಮಾವನ ಜೊತೆ ಅವರ ಮನೆಗೆ ಹೋಗಿದ್ದ ಆಕೆಗೆ ಅಲ್ಲಿ ಶಾಕ್ ಕಾದಿತ್ತು.

ಇದನ್ನೂ ಓದಿ: Viral Video: ಸೀರೆಯುಟ್ಟು ಕುದುರೆ ಓಡಿಸಿದ ಭಾರತೀಯ ನಾರಿ; ಮಹಿಳೆಯ ಅಶ್ವ ಸವಾರಿಯ ವಿಡಿಯೋ ವೈರಲ್

ಇತ್ತ, ರಾತ್ರಿ ಮನೆಗೆ ವಾಪಾಸ್ ಬಂದ ಪ್ರಿನ್ಸ್​ಗೆ ಮನೆಯಲ್ಲಿ ಹೆಂಡತಿ ಇಲ್ಲದಿರುವುದನ್ನು ಕಂಡು ಗಾಬರಿಯಾಗಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಆಕೆ ಅವರ ಅಪ್ಪನ ಜೊತೆ ಹೋಗಿದ್ದಾಗಿ ತಿಳಿಸಿದ್ದರು. ಹೆಂಡತಿಯನ್ನು ಕರೆದುಕೊಂಡು ಹೋಗಲು ಅಪ್ಪನ ಮನೆಗೆ ಬಂದ ಪ್ರಿನ್ಸ್​ಗೆ ಅಲ್ಲಿ ಅಪ್ಪ ಹಾಗೂ ಹೆಂಡತಿ ಇಬ್ಬರೂ ಕಾಣಲಿಲ್ಲ. ಇದರಿಂದ ಇನ್ನಷ್ಟು ಗಾಬರಿಯಾದ ಆತ ಪೊಲೀಸರಿಗೆ ದೂರು ನೀಡಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಪ್ರಿನ್ಸ್​ನ ತಂದೆ ತಮ್ಮ ಮಗನಿಗೆ ಗೊತ್ತಾಗದಂತೆ ಸೊಸೆಯನ್ನು 80,000 ರೂ.ಗೆ ಮಾರಾಟ ಮಾಡಿದ್ದಾರೆಂಬ ವಿಷಯ ಗೊತ್ತಾಗಿತ್ತು.

ಮಗ ತನ್ನಿಷ್ಟದ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ಆತನ ತಂದೆ ತಮ್ಮ ಸೊಸೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಅಲ್ಲದೆ, ತಾವೇ ಮುಂದೆ ನಿಂತು ಆಕೆಯನ್ನು ಬೇರೊಬ್ಬರೊಂದಿಗೆ ಮದುವೆ ಮಾಡಿಸಲು ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿನ್ಸ್​ನ ತಂದೆ ಸೇರಿದಂತೆ 8 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Published by:Sushma Chakre
First published: