ಪ್ರಿಯಕರನೊಂದಿಗೆ ಬೆಡ್​ರೂಮಿನಲ್ಲಿದ್ದ ಮಗಳಿಗೆ ಶಾಕ್ ಕೊಟ್ಟ ಅಮ್ಮ; ಗಾಬರಿಯಾದ ಯುವತಿ ಮಾಡಿದ್ದೇನು?

Crime News: ಅಪ್ಪ-ಅಮ್ಮ ಮನೆಯಲ್ಲಿ ಇಲ್ಲದ ಸಮಯ ನೋಡಿ ಪ್ರಿಯಕರನನ್ನು ಮನೆಗೆ ಕರೆದಿದ್ದ 17 ವರ್ಷದ ಅಪ್ತಾಪ್ತ ಯುವತಿ ಆತನೊಂದಿಗೆ ಬೆಡ್​ರೂಮಿನಲ್ಲಿ ಸಲ್ಲಾಪ ನಡೆಸಿದ್ದಳು. ಅಷ್ಟರಲ್ಲಿ ಮನೆಯ ಬಾಗಿಲು ತೆರೆದ ಸದ್ದಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮುಂಬೈ (ಮಾ. 9): ಹರೆಯವೆಂದರೆ ಹಾಗೇ... ಯಾವುದು ತಪ್ಪು, ಯಾವುದು ಸರಿ ಎಂಬುದು ಗೊತ್ತಾಗದ ವಯಸ್ಸದು. ಗಂಡು-ಹೆಣ್ಣು ಆಕರ್ಷಣೆಗೆ ಒಳಗಾಗಿ ಮಾಡಿಕೊಳ್ಳುವ ಯಡವಟ್ಟುಗಳಿಗೆ ಕೆಲವೊಮ್ಮೆ ಜೀವನಪೂರ್ತಿ ಬೆಲೆ ತೆರಬೇಕಾಗುತ್ತದೆ. ಮುಂಬೈನಲ್ಲಿ ಹೈಸ್ಕೂಲ್ ಓದುತ್ತಿದ್ದ ಆ ಹುಡುಗಿ ಆಗಷ್ಟೇ ಹರೆಯಕ್ಕೆ ಕಾಲಿಟ್ಟಿದ್ದಳು. ಚೆಂದದ ಹುಡುಗನನ್ನು ನೋಡಿ ಮರುಳಾಗಿದ್ದ ಆಕೆ ಅಪ್ಪ-ಅಮ್ಮ ಮನೆಯಲ್ಲಿಲ್ಲದ ಸಮಯ ನೊಡಿ ಆತನನ್ನು ಮನೆಗೆ ಕರೆದುಕೊಂಡು ಬಂದಿದ್ದಳು. ಆದರೆ, ಅಲ್ಲಿ ಆಗಿದ್ದೇ ಬೇರೆ!

  ಬಾಯ್​ಫ್ರೆಂಡ್ ಜೊತೆಗೆ ತನ್ನ ಬೆಡ್​ರೂಮಿನಲ್ಲಿದ್ದ 17 ವರ್ಷದ ಯುವತಿ ಆತನೊಂದಿಗೆ ಸಲ್ಲಾಪ ನಡೆಸಿದ್ದಳು. ಅಷ್ಟರಲ್ಲಾಗಲೇ ಮನೆಯ ಹೊರಗಿನ ಬಾಗಿಲು ತೆರೆದ ಸದ್ದಾಗಿತ್ತು. ಮನೆಯಲ್ಲಿ ಅಪ್ಪ-ಅಮ್ಮ ಇಲ್ಲದ ವೇಳೆ ನೋಡಿ ಬಾಯ್​ಫ್ರೆಂಡ್​ಗೆ ಮನೆಗೆ ಬರಲು ಹೇಳಿದ್ದ ಆಕೆಗೆ ಏನು ಮಾಡಬೇಕೆಂದು ತೋಚಲಿಲ್ಲ. ಅಮ್ಮನ ಧ್ವನಿ ಕೇಳಿ ಮನೆಯೊಳಗೆ ಬಂದಿದ್ದು ಅಮ್ಮನೇ ಎಂಬುದು ಆ ಯುವತಿಗೆ ಖಾತರಿಯಾಗಿತ್ತು. ಬೆಡ್​ರೂಮಿನಲ್ಲಿ ಗೆಳೆಯನೊಂದಿಗೆ ಸಿಕ್ಕಹಾಕಿಕೊಂಡರೆ ಅಮ್ಮ ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಹೆದರಿಕೆಯೂ ಉಂಟಾಗಿತ್ತು.

  ಇದನ್ನೂ ಓದಿ: ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದ ಶಿಕ್ಷಕ; ಸಲ್ಲಾಪದ ಫೋಟೋ ವೈರಲ್ ಆಗುತ್ತಿದ್ದಂತೆ ಕಾಮುಕ ಪರಾರಿ

  ಆತಂಕದಲ್ಲಿ ಏನು ಮಾಡಬೇಕೆಂದು ತೋಚದ ಆಕೆ ತನ್ನ ಗೆಳೆಯನಿಗೆ ಬಟ್ಟೆ ಸರಿ ಮಾಡಿಕೊಂಡು ಅಲ್ಲಿಂದ ಎಸ್ಕೇಪ್ ಆಗಲು ಹೇಳಿದಳು. ಆತ ಬಿಟ್ಟ ಬಾಯಿ ಬಿಟ್ಟಂತೆ ಆಕೆಯನ್ನೇ ನೋಡುತ್ತಾ ನಿಂತಿದ್ದ. ಅಮ್ಮ ತನ್ನನ್ನು ಈ ಸ್ಥಿತಿಯಲ್ಲಿ ನೋಡಿದರೆ ಏನು ಗತಿ? ಎಂದು ಯೋಚಿಸಿ, ಹೆದರಿದ ಯುವತಿ ಅಮ್ಮನಿಂದ ತಪ್ಪಿಸಿಕೊಳ್ಳಲು ಕಿಟಕಿಯಿಂದ ಕೆಳಗೆ ಹಾರಿದಳು. ಮೊದಲ ಮಹಡಿಯಲ್ಲಿದ್ದ ಆಕೆಯ ಬೆಡ್​ರೂಮಿನ ಕಿಟಕಿಯಿಂದ ಕೆಳಗೆ ಹಾರಿದ್ದರಿಂದ ಆಕೆಯ ಎಡಗಾಲಿನ ಮೂಳೆ ಮುರಿದಿದೆ.

  ಇದನ್ನೂ ಓದಿ: ಮಗಳ ಪಾಲಿಗೆ ಅಪ್ಪನೇ ಮೃತ್ಯು; 3 ವಾರಗಳ ನಂತರ ಬಯಲಾಯ್ತು ತೆಲಂಗಾಣ ಯುವತಿ ಕೊಲೆ ರಹಸ್ಯ

  ಏನೋ ಸದ್ದಾಯಿತಲ್ಲ ಎಂದು ಗಾಬರಿಯಿಂದ ಹೊರಗೆ ಓಡಿಬಂದು ನೋಡಿದ ಅಮ್ಮನಿಗೆ ಮಗಳು ನೋವಿನಿಂದ ಅಳುತ್ತಾ ಅಂಗಳದಲ್ಲಿ ಬಿದ್ದಿರುವುದು ಕಂಡಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಯಾಕೆ ಕಿಟಕಿಯಿಂದ ಹಾರಿದೆ? ಎಂದು ಕೇಳಿದಾಗ ತಾನು ಬೆಡ್​ರೂಮಿನಲ್ಲಿ ಪ್ರಿಯಕರನ ಜೊತೆ ಇದ್ದ ವಿಷಯವನ್ನು ಆಕೆ ಹೇಳಿಕೊಂಡಿದ್ದಾಳೆ.

  ಮುಂಬೈನ ಕುರ್ಲಾದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಆ ಯುವತಿಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯ ಮನೆಯವರು ನೋಡಿದ ದೂರಿನ ಆಧಾರದಲ್ಲಿ ಜೇಂಡೆ ಎಂಬ ಯುವಕನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

   
  First published: