ಮ್ಯಾಟ್ರಿಮೊನಿ ವಂಚನೆ; ಮದುವೆಗೆ ವರನನ್ನು ಹುಡುಕಲು ಹೋದ ವೈದ್ಯೆಗೆ 12 ಲಕ್ಷ ರೂ. ಪಂಗನಾಮ!

ಮೊದಲ ಗಂಡನಿಂದ ಡೈವೋರ್ಸ್​ ಪಡೆದಿದ್ದ ವೈದ್ಯೆ 2ನೇ ಮದುವೆಗಾಗಿ ತನಗೆ ತಕ್ಕ ಹುಡುಗನನ್ನು ಹುಡುಕುತ್ತಿದ್ದರು. ಆಗ ಮ್ಯಾಟ್ರಿಮೊನಿಯಲ್ಲಿ ಡಾಕ್ಟರ್​ ಫೋಟೋ ನೋಡಿ ಆತನನ್ನು ಮೆಸೇಜ್ ಮೂಲಕ ಸಂಪರ್ಕಿಸಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹೈದರಾಬಾದ್ (ಮಾ. 12): ಮದುವೆಯಾಗಲು ಈಗ ಮೊದಲಿನಂತೆ ಬ್ರೋಕರ್​ಗಳ ಮೊರೆಹೋಗಬೇಕಾದ ಅಗತ್ಯವಿಲ್ಲ. ಬೆರಳ ತುದಿಯಲ್ಲೇ ಸಾಕಷ್ಟು ಮ್ಯಾಟ್ರಿಮೊನಿ ವೆಬ್​ಸೈಟ್​ಗಳು ಇರುವುದರಿಂದ ಮದುವೆಯಾಗಲು ಬಯಸುವ ಪ್ರತಿಯೊಬ್ಬರೂ ಒಂದಲ್ಲಾ ಒಂದು ಮ್ಯಾಟ್ರಿಮೊನಿ ವೆಬ್​ಸೈಟಿನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರುತ್ತಾರೆ. ಆದರೆ, ಹೀಗೆ ಮ್ಯಾಟ್ರಿಮೊನಿಯನ್ನು ಕುರುಡಾಗಿ ನಂಬಿ ಮೋಸ ಹೋದವರ ಸಂಖ್ಯೆಯೂ ಕಡಿಮೆಯೇನಿಲ್ಲ!

ಹೈದರಾಬಾದ್​ನಲ್ಲಿ ಇಂತಹ ಘಟನೆಯೊಂದು ನಡೆದಿದ್ದು, ಉತ್ತಮ ಸಂಬಳವಿರುವ, ವಿದೇಶದಲ್ಲಿರುವ ಹುಡುಗನನ್ನು ಮದುವೆಯಾಗಬೇಕೆಂಬ ಹುಡುಕಾಟದಲ್ಲಿದ್ದ ಮಹಿಳೆಯೊಬ್ಬರು ಬರೋಬ್ಬರಿ 12.45 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅಂದಹಾಗೆ, ಈ ರೀತಿ ಲಕ್ಷಾಂತರ ರೂ. ಪಂಗನಾಮ ಹಾಕಿಸಿಕೊಂಡ ಮಹಿಳೆ ಹೈದರಾಬಾದ್​ನ ಖ್ಯಾತ ವೈದ್ಯೆ ಎಂಬುದು ಅಚ್ಚರಿಯ ಸಂಗತಿ.

ಇದನ್ನೂ ಓದಿ: Viral Video: ಬಂಡೀಪುರದಲ್ಲಿ ಆನೆ ಮೇಲೆ ಫೈರಿಂಗ್; ಮಾನವೀಯತೆ ಮರೆತ ಅರಣ್ಯ ಇಲಾಖೆ ಸಿಬ್ಬಂದಿ ಅಮಾನತು

ಮೊದಲ ಗಂಡನಿಂದ ಡೈವೋರ್ಸ್​ ಪಡೆದಿದ್ದ ವೈದ್ಯೆ 2ನೇ ಮದುವೆಗಾಗಿ ತನಗೆ ತಕ್ಕ ಹುಡುಗನನ್ನು ಹುಡುಕುತ್ತಿದ್ದರು. ಆಗ ಮ್ಯಾಟ್ರಿಮೊನಿಯಲ್ಲಿ ಹುಡುಗನೊಬ್ಬನ ಫೋಟೋ ನೋಡಿ ಆತನನ್ನು ಮೆಸೇಜ್ ಮೂಲಕ ಸಂಪರ್ಕಿಸಿದ್ದರು. ತಾನು ಇಂಗ್ಲೆಂಡ್​ನಲ್ಲಿ ಆರ್ಥೋಪೆಡಿಕ್ ಸರ್ಜನ್ ಆಗಿರುವುದಾಗಿ ಹೇಳಿಕೊಂಡಿದ್ದ ಆತ ಹೈದರಾಬಾದ್​ನ ವೈದ್ಯೆಗೆ ಮೆಚ್ಚುಗೆಯಾಗಿದ್ದ. ಆತ ಕೂಡ ಆಕೆಯನ್ನು ಮದುವೆಯಾಗಲು ಇಷ್ಟವಿರುವುದಾಗಿ ತಿಳಿಸಿದ್ದ.

ಇಬ್ಬರ ನಡುವೆ ವಾಟ್ಸಾಪ್​ನಲ್ಲಿ ಚಾಟಿಂಗ್, ವಿಡಿಯೋ ಸಂಭಾಷಣೆ ನಡೆದಿತ್ತು. ಇಬ್ಬರ ನಡುವೆ ಆಪ್ತತೆ ಬೆಳೆದ ಕೆಲವು ದಿನಗಳ ನಂತರ ಆತ ಆಕೆಗಾಗಿ ಇಂಗ್ಲೆಂಡ್​ನಿಂದ ದುಬಾರಿ ಉಡುಗೊರೆಗಳನ್ನು ಕಳುಹಿಸಿರುವುದಾಗಿ ಹೇಳಿದ್ದ. ತಾನು ಪ್ರೀತಿಯಿಂದ ಚಿನ್ನದ ಆಭರಣ, ದುಬಾರಿ ಮೊಬೈಲ್ ಫೋನ್, ವಾಚ್, ಡಾಲರ್​ಗಳನ್ನು ಕೊರಿಯರ್ ಮೂಲಕ ಕಳುಹಿಸಿದ್ದಾಗಿ ತಿಳಿಸಿದ್ದ.

ಇದನ್ನೂ ಓದಿ: ಅರೆ ಬೆಂದ ಹೆಣ ತಂದು ಅಡುಗೆ ಮಾಡಿದ ಗಂಡ; ಭೀಕರ ದೃಶ್ಯ ಕಂಡು ಮನೆ ಬಿಟ್ಟು ಓಡಿದ ಹೆಂಡತಿ!

ತನಗಾಗಿ ತನ್ನ ಪ್ರಿಯಕರ ವಿದೇಶದಿಂದ ಉಡುಗೊರೆ ಕಳಿಸಿದ್ದನ್ನು ಕೇಳಿದ ವೈದ್ಯೆ ಬಹಳ ಖುಷಿಯಾಗಿದ್ದಳು. ಅದಾದ ಕೆಲವೇ ದಿನಗಳಲ್ಲಿ ಅಬಕಾರಿ ಇಲಾಖೆಯ ಕಚೇರಿಯಿಂದ ಫೋನ್ ಮಾಡುತ್ತಿರುವುದಾಗಿ ಹೇಳಿಕೊಂಡು ವ್ಯಕ್ತಿಯೋರ್ವ ಕರೆ ಮಾಡಿದ್ದ. ಇಂಗ್ಲೆಂಡ್​ನಿಂದ ಆಕೆಗೆ ಉಡುಗೊರೆಗಳ ಬಾಕ್ಸ್​ ಬಂದಿದೆ ಎಂದು ಆತ ತಿಳಿಸಿದ್ದ. ಅದಾದ ನಂತರ ಕೊರಿಯರ್ ಬಾಯ್ ಹೆಸರಿನಲ್ಲಿ ಇನ್ನೋರ್ವ ಕರೆ ಮಾಡಿ ಉಡುಗೊರೆಗಳನ್ನು ಬಿಡಿಸಿಕೊಳ್ಳಲು 12.45 ಲಕ್ಷ ಹಣ​ ಕಟ್ಟಬೇಕು ಎಂದು ಹೇಳಿದ್ದ. ಹಣವನ್ನು ಪಾವತಿ ಮಾಡಲು ಬ್ಯಾಂಕ್ ಅಕೌಂಟ್​ ನಂಬರ್ ಕೂಡ ನೀಡಿದ್ದ.

ಇದನ್ನೂ ಓದಿ: ಮಗಳ ಪಾಲಿಗೆ ಅಪ್ಪನೇ ಮೃತ್ಯು; 3 ವಾರಗಳ ನಂತರ ಬಯಲಾಯ್ತು ತೆಲಂಗಾಣ ಯುವತಿ ಕೊಲೆ ರಹಸ್ಯ

ಅವರನ್ನು ನಂಬಿ ಹಣ ಕೊಟ್ಟ ಬಳಿಕ ತಾನು ಯಾಮಾರಿದ ವಿಷಯ ಆ ವೈದ್ಯೆಗೆ ಗೊತ್ತಾಗಿತ್ತು. ತಕ್ಷಣ ಪೊಲೀಸರಿಗೆ ದೂರು ನೀಡಿದ ಹೈದರಾಬಾದ್​ ವೈದ್ಯೆ ನಾಲ್ವರ ವಿರುದ್ಧ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಪೊಲೀಸರು ದೆಹಲಿಯಲ್ಲಿ ವಾಸವಾಗಿದ್ದ ಮೂವರು ನೇಪಾಳಿಗಳನ್ನು ಬಂಧಿಸಿದ್ದಾರೆ. ಇನ್ನೋರ್ವ ನೈಜೀರಿಯನ್ ಪ್ರಜೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಲ್ಲದೆ, ಆರೋಪಿಗಳಿಂದ 18 ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೇ, ಆರೋಪಿಗಳು ನೀಡಿದ್ದ ಅಕೌಂಟ್​ ನಂಬರ್ ಆಧರಿಸಿ ಬ್ಯಾಂಕ್ ಖಾತೆಗಳಲ್ಲಿದ್ದ 3,05,076 ರೂ. ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
First published: