news18-kannada Updated:March 15, 2020, 12:32 PM IST
ಸಾಂದರ್ಭಿಕ ಚಿತ್ರ
ಹೈದರಾಬಾದ್ (ಮಾ. 15): ಆಕೆಗೆ 3 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಗಂಡನೊಂದಿಗೆ ಸುಖವಾದ ಜೀವನ ನಡೆಸುವ ಕನಸು ಕಾಣುತ್ತಿದ್ದ ಆಕೆ ಅಂದುಕೊಂಡಿದ್ದೇ ಬೇರೆ, ಅಲ್ಲಿ ಆಗಿದ್ದೇ ಬೇರೆ. ತನ್ನ ಗಂಡನಿಗೆ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧವಿದೆ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಗೆ ದೊಡ್ಡ ಆಘಾತವಾಗಿತ್ತು. ಆ ಬೇರೊಬ್ಬ ಹೆಣ್ಣು ಬೇರಾರೂ ಅಲ್ಲ ತನ್ನ ಅಮ್ಮನೇ ಎಂದು ತಿಳಿದಾಗ ಆಕೆ ಕುಸಿದುಹೋಗಿದ್ದಳು!
ತನಗೆ ಜನ್ಮ ಕೊಟ್ಟ ಅಮ್ಮನ ಜೊತೆ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾಗುತ್ತಿದ್ದಂತೆ ಆಘಾತಕ್ಕೀಡಾದ ಆ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ದಾಂಪತ್ಯ ಜೀವನಕ್ಕೆ ಅಮ್ಮನೇ ಮುಳುವಾದ ಈ ವಿಚಿತ್ರ ಘಟನೆ ನಡೆದಿರುವುದು ಹೈದರಾಬಾದ್ನ ಮೀರ್ಪೇಟೆಯಲ್ಲಿ.
ವಂದನಾ ಎಂಬ 19 ವರ್ಷದ ಯುವತಿಗೆ ಕಳೆದ ಡಿಸೆಂಬರ್ನಲ್ಲಿ ನವೀನ್ ಕುಮಾರ್ ಎಂಬಾತನ ಜೊತೆ ಮದುವೆಯಾಗಿತ್ತು. ಆಕೆಯ ಅಮ್ಮ ಅನಿತಾಳೇ ಹುಡುಗನನ್ನು ಹುಡುಕಿ ತನ್ನ ಮಗಳಿಗೆ ಮಾಡಿಸಿದ್ದಳು. ಮದುವೆಯಾದ 1 ತಿಂಗಳು ಎಲ್ಲವೂ ಚೆನ್ನಾಗಿತ್ತು. ಆದರೆ, ಕ್ರಮೇಣ ತನ್ನ ಗಂಡ ನವೀನ್ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿರುವ ಬಗ್ಗೆ ವಂದನಾಗೆ ಅನುಮಾನ ಉಂಟಾಗಿತ್ತು.
ಇದನ್ನೂ ಓದಿ: 4 ವರ್ಷದ ಮಗನಿಂದಲೇ ಬಯಲಾಯ್ತು ಅಮ್ಮನ ಅಕ್ರಮ ಸಂಬಂಧ; ಆಮೇಲೆ ನಡೆದಿದ್ದು ದೊಡ್ಡ ದುರಂತ!
ಆ ಮಹಿಳೆ ಯಾರೆಂದಯ ಪತ್ತೆಹಚ್ಚಲು ಮುಂದಾದಾಗ ಅದು ತನ್ನ ತಾಯಿಯೇ ಎಂದು ತಿಳಿದು ವಂದನಾಗೆ ಶಾಕ್ ಆಗಿತ್ತು. ಗಂಡನಿಂದ ಡೈವೋರ್ಸ್ ಪಡೆದು ಮಕ್ಕಳಾದ ವಂದನಾ ಮತ್ತು ಸಂಜನಾ ಜೊತೆ ಜೀವನ ನಡೆಸುತ್ತಿದ್ದ ಅನಿತಾಗೆ ತನಗಿಂತ ಬಹಳ ಚಿಕ್ಕವನಾದ ನವೀನ್ ಜೊತೆ ಸ್ನೇಹ ಬೆಳೆದಿತ್ತು. ಆ ಸ್ನೇಹದಿಂದ ಆಗಾಗ ಮನೆಗೆ ಬರುತ್ತಿದ್ದ ನವೀನ್ ಜೊತೆ ಅನಿತಾ ಅಕ್ರಮ ಸಂಬಂಧ ಹೊಂದಿದ್ದಳು.
ನವೀನ್ ಬೇರೆ ಯಾರನ್ನಾದರೂ ಮದುವೆಯಾದರೆ ತನ್ನಿಂದ ದೂರವಾಗುತ್ತಾನೆ ಎಂದು ಅನಿತಾ ತನ್ನ ಮಗಳು ವಂದನಾಳನ್ನು ಆತನಿಗೆ ಕೊಟ್ಟು ಮದುವೆ ಮಾಡಿದ್ದಳು. ವಂದನಾ ಹೈದರಾಬಾದ್ನ ಕಾಲೇಜಿನ ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದರಿಂದ ಆಕೆಗೆ ತನ್ನ ಅಮ್ಮ ಮತ್ತು ನವೀನ್ನ ಅನೈತಿಕ ಸಂಬಂಧದ ಬಗ್ಗೆ ಗೊತ್ತಿರಲಿಲ್ಲ. ಓದು ಮುಗಿಸಿ ಮನೆಗೆ ಬಂದ ಮಗಳಿಗೆ ಅನಿತಾ ಮದುವೆ ಮಾಡಿಸಿದ್ದಳು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದ ಹೆಂಡತಿ!ಮಗಳ ಜೊತೆ ನವೀನ್ನನ್ನು ಮದುವೆ ಮಾಡಿದ ನಂತರವೂ ಅನಿತಾ ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಬಗ್ಗೆ ಅಮ್ಮನ ಬಳಿ ವಂದನಾ ಜಗಳ ಮಾಡಿದಾಗ ಆಕೆ ತನ್ನ ಮಗಳಿಗೇ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದಳು. ಈ ವಿಷಯ ತಿಳಿದು ಆಘಾತದಿಂದ ವಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಎಲ್ಲ ವಿಷಯದ ಬಗ್ಗೆ ಗೊತ್ತಿದ್ದ ಅನಿತಾಳ ಕಿರಿಯ ಮಗಳು ಸಂಜನಾ ತನ್ನ ಅಕ್ಕನ ಸಾವಿಗೆ ಅಮ್ಮ ಮತ್ತು ಭಾವನೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಆ ದೂರಿನ ಅನ್ವಯ ಅನಿತಾ ಮತ್ತು ನವೀನ್ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
First published:
March 15, 2020, 12:32 PM IST