ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂಬ ಮಾತೇ ಇದೆ. ಆದರೆ, ಸ್ವಾರ್ಥ ತುಂಬಿದ ಇಂದಿನ ಪ್ರಪಂಚದಲ್ಲಿ ಕೆಲವೊಮ್ಮೆ ಎಲ್ಲ ಸಂಬಂಧಗಳೂ ಬೆಲೆ ಕಳೆದುಕೊಂಡು ಬಿಡುತ್ತವೆ. ತನ್ನ ಮಕ್ಕಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುವ ಪೋಷಕರು ಒಂದು ಕಡೆಯಾದರೆ, ಮಕ್ಕಳನ್ನು ಮೃಗಗಳಂತೆ ನಡೆಸಿಕೊಳ್ಳುವ ಕೆಲವು ಅಪ್ಪ-ಅಮ್ಮಂದಿರೂ ಇದ್ದಾರೆ. ಅದೇ ರೀತಿ, ತಾನೇ ಹೆತ್ತ ಮಗುವನ್ನು ಭೂಮಿಗೆ ಬಂದ ಕೂಡಲೇ ತಾಯಿಯೇ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾದ ಲಿಂಪೋಪೋ ಎಂಬಲ್ಲಿ ಈ ಘಟನೆ ನಡೆದಿದ್ದು, ಶೌಚಾಲಯಕ್ಕೆ ಹೋಗಿದ್ದ ಗರ್ಭಿಣಿಗೆ ಅಲ್ಲೇ ಹೆರಿಗೆಯಾಗಿತ್ತು. ಕೆಳಗೆ ಬಿದ್ದ ಮಗುವನ್ನು ಎತ್ತಿಕೊಂಡ ತಾಯಿ ಅದಕ್ಕೆ ಮನಬಂದಂತೆ ಹೊಡೆದು, ಸಾಯಿಸಿದ್ದಾಳೆ. ಮಗುವನ್ನು ಕೊಲೆ ಮಾಡಿರುವ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿದೆ.
30 ವರ್ಷದ ಮಹಿಳೆ ಕುಂಜನಿ ಕ್ಲಿನಿಕ್ಗೆ ತನ್ನ ತಾಯಿಯೊಂದಿಗೆ ತಪಾಸಣೆಗೆ ಬಂದಿದ್ದಳು. ಆಕೆಗೆ ತಾನು ಗರ್ಭಿಣಿಯಾಗಿರುವ ವಿಚಾರವೇ ತಿಳಿದಿರಲಿಲ್ಲ! ತನ್ನ ಹೊಟ್ಟೆ ಏಕೋ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ ಎಂದು ಆಕೆ ವೈದ್ಯರ ಬಳಿ ಹೇಳಿಕೊಂಡಿದ್ದಳು. ಆಗ ವೈದ್ಯರು ಆಕೆ ಗರ್ಭಿಣಿಯಾಗಿರುವ ವಿಚಾರ ತಿಳಿಸಿದಾಗ ಆಕೆ ಅದನ್ನು ಒಪ್ಪಿಕೊಳ್ಳಲಿಲ್ಲ. ನಾನು ಗರ್ಭಿಣಿಯಾಗಲು ಸಾಧ್ಯವೇ ಇಲ್ಲ, ಸರಿಯಾಗಿ ಪರೀಕ್ಷೆ ಮಾಡಿ ಎಂದು ವೈದ್ಯರ ಮುಂದೆಯೇ ರಂಪಾಟ ಮಾಡಿದ್ದಳು.
ಇದನ್ನೂ ಓದಿ: Murder News: ಪ್ರೇಯಸಿಯನ್ನು ಕೊಂದು ಅಡುಗೆಮನೆಯಲ್ಲೇ ಸಮಾಧಿ; ಪೇಂಟಿಂಗ್ನಿಂದ ಬಯಲಾಯ್ತು ಕೊಲೆ ರಹಸ್ಯ!
ಅದಾಗಿ 2 ದಿನದ ನಂತರ ಮತ್ತೊಮ್ಮೆ ವೈದ್ಯರ ಬಳಿ ತಪಾಸಣೆಗೆಂದು ಬಂದಿದ್ದ ಆಕೆ ತನ್ನ ತಾಯಿಯ ಬಳಿ ಬಾತ್ ರೂಂಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಳು. ಬಾತ್ ರೂಂಗೆ ಹೋಗಿದ್ದ ಆಕೆಗೆ ಅಲ್ಲೇ ಹೆರಿಗೆ ನೋವು ಶುರುವಾಗಿತ್ತು. ಆಕೆಗೆ ಅಲ್ಲೇ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಹುಟ್ಟಿದ ಕೂಡಲೇ ಅದನ್ನು ಮುದ್ದಾಡುವ ಬದಲು ಅಥವಾ ವೈದ್ಯರ ಬಳಿ ಕರೆದುಕೊಂಡು ಹೋಗುವ ಬದಲು ಆಕೆ ಆ ಮಗುವಿಗೆ ಹೊಡೆಯಲಾರಂಭಿಸಿದಳು.
ಶೌಚಾಲಯವನ್ನು ಕ್ಲೀನ್ ಮಾಡುತ್ತಿದ್ದ ಮಹಿಳೆಗೆ ಟಾಯ್ಲೆಟ್ ರೂಮಿನಿಂದ ಮಗು ಅಳುತ್ತಿರುವ ಶಬ್ದ ಕೇಳಿತು. ತಾಯಿ ಹೊಡೆಯುತ್ತಿದ್ದುದರಿಂದ ಆಗಷ್ಟೇ ಹುಟ್ಟಿದ ಕಂದಮ್ಮ ಜೋರಾಗಿ ಅಳುತ್ತಿತ್ತು. ಅದನ್ನು ಕೇಳಿದ ಕ್ಲೀನಿಂಗ್ ಮಹಿಳೆ ಈ ವಿಷಯವನ್ನು ವೈದ್ಯರಿಗೆ ತಿಳಿಸಿದ್ದಳು. ಟಾಯ್ಲೆಟ್ ಬಾಗಿಲನ್ನು ಒಡೆದು ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಕೆಳಗೆ ಬಿದ್ದಿತ್ತು. ಅದರ ಮೈಯಿಂದ ರಕ್ತವೂ ಸುರಿಯುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ