HOME » NEWS » National-international » CRIME NEWS TAMIL NADU MAN SETS FIRE TO HIS LOVER AND HER MOTHER THEN KILLS HIMSELF IN CHENNAI SCT

Crime News: ಪ್ರೀತಿಸಿದ ಹುಡುಗಿಯನ್ನು ಸುಟ್ಟು, ತಾನೂ ಬೆಂಕಿ ಹಚ್ಚಿಕೊಂಡ ಪ್ರಿಯಕರ

Murder Today: ಬೇರೆಯವರನ್ನು ಮದುವೆಯಾಗಲು ನಿರ್ಧರಿಸಿದ್ದ ಪ್ರೇಯಸಿ ಮತ್ತು ಆಕೆಯ ತಾಯಿಯ ಮೇಲೆ ಪೆಟ್ರೋಲ್ ಸುರಿದು, ಚೆನ್ನೈನ ಪ್ರಿಯಕರ ಬೆಂಕಿ ಹಚ್ಚಿದ್ದಾನೆ. ಬಳಿಕ, ತನಗೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Sushma Chakre | news18-kannada
Updated:February 6, 2021, 3:30 PM IST
Crime News: ಪ್ರೀತಿಸಿದ ಹುಡುಗಿಯನ್ನು ಸುಟ್ಟು, ತಾನೂ ಬೆಂಕಿ ಹಚ್ಚಿಕೊಂಡ ಪ್ರಿಯಕರ
ಸಾಂದರ್ಭಿಕ ಚಿತ್ರ
  • Share this:
ಚೆನ್ನೈ (ಫೆ. 6): ತಾನು ಪ್ರೀತಿಸುತ್ತಿದ್ದ ಹುಡುಗಿ ತನಗೆ ಸಿಗಲಿಲ್ಲವೆಂಬ ಕೋಪದಿಂದ ಆ ಯುವತಿ ಮತ್ತು ಆಕೆಯ ತಾಯಿಗೆ ಬೆಂಕಿ ಹಚ್ಚಿ, ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊರುಕ್ಕುಪೇಟೆಯ 26 ವರ್ಷದ ರಂಜಿತಾ ಎಂಬ ಯುವತಿಯನ್ನು 29 ವರ್ಷದ ಭೂಪಾಲನ್ 7 ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆ ಕೂಡ ಈತನನ್ನು ಪ್ರೀತಿಸುತ್ತಿದ್ದಳು. ಆದರೆ, ಇತ್ತೀಚೆಗೆ ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡ ಭೂಪಾಲನ್ ಆಕೆ ಮತ್ತು ಆಕೆಯ ತಾಯಿಗೆ ಬೆಂಕಿ ಹಚ್ಚಿ, ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶುಕ್ರವಾರ ರಂಜಿತಾಳ ಮನೆಗೆ ಬಂದ ಭೂಪಾಲನ್ ಆಕೆಯ ಜೊತೆ ಜಗಳವಾಡಿದ್ದ. ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ರಂಜಿತಾ ಭೂಪಾಲನ್ ಜೊತೆ ಸಂಪರ್ಕ ಕಡಿದುಕೊಂಡಿದ್ದಳು. ತನ್ನಿಂದ ದೂರ ಇರುವಂತೆ ಸೂಚಿಸಿದ್ದ ಆಕೆಯ ಮಾತಿನಿಂದ ನೊಂದಿದ್ದ ಭೂಪಾಲನ್ ಆಕೆಯ ಮನೆಯಲ್ಲೇ ಆಕೆಗೆ ಮತ್ತು ಆಕೆಯ ತಾಯಿಯ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾನೆ. ಬಳಿಕ, ತನಗೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಪ್ರೇಯಸಿಯ ಇನ್​ಸ್ಟಾಗ್ರಾಂ ಫೋಟೋ ನೋಡಿ ಅಸೂಯೆ; ಬ್ಲೇಡ್​ನಿಂದ ಯುವತಿಯ ಕೆನ್ನೆ ಸೀಳಿದ ಪ್ರೇಮಿ

ಬಿಟೆಕ್ ಪದವೀಧರನಾಗಿರುವ ಭೂಪಾಲನ್ 7 ವರ್ಷಗಳಿಂದ ರಂಜಿತಾಳನ್ನು ಪ್ರೀತಿಸುತ್ತಿದ್ದ. ರಂಜಿತಾಳ ತಂದೆ ಸಾವನ್ನಪ್ಪಿದ ಬಳಿಕ ಆಕೆ ಚೆನ್ನೈ ಕಾರ್ಪೋರೇಷನ್​ನಲ್ಲಿ ಕೆಲಸಕ್ಕೆ ಸೇರಿದ್ದಳು. ಬಳಿಕ ಭೂಪಾಲನ್ ಜೊತೆಗಿನ ಸಂಪರ್ಕವನ್ನು ಕಡಿದುಕೊಂಡಿದ್ದ ಆಕೆ ಬೇರೆಯವರೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಳು ಎನ್ನಲಾಗಿದೆ. ಆದರೆ, ರಂಜಿತಾ ತನ್ನಿಂದ ದೂರವಾಗುವುದನ್ನು ಸಹಿಸದ ಭೂಪಾಲನ್ ಆಕೆಯನ್ನು ಕೊಂದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ.
Youtube Video

ರಂಜಿತಾಳ ಮನೆಯಿಂದ ಜೋರಾದ ಗಲಾಟೆ, ಕಿರುಚಾಟ ಕೇಳಿ ಪಕ್ಕದ ಮನೆಯವರು ಬಂದು ನೋಡುವಷ್ಟರಲ್ಲಿ ರಂಜಿತಾ, ಆಕೆಯ ತಾಯಿ ಹಾಗೂ ಭೂಪಾಲನ್ ದೇಹ ಸುಟ್ಟುಹೋಗಿತ್ತು. ಮೂರೂ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ ನಡೆಸಲಾಗುತ್ತಿದೆ.
Published by: Sushma Chakre
First published: February 6, 2021, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories