ತಮಿಳುನಾಡಿನಲ್ಲಿ ಅಪ್ಪನಿಂದ ಮಗಳ ಮೇಲೆ ಅತ್ಯಾಚಾರ; ತಂದೆಯಿಂದಲೇ ಗರ್ಭಿಣಿಯಾದ ಅಪ್ರಾಪ್ತ ಬಾಲಕಿ

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಅಪ್ಪನೇ ಅತ್ಯಾಚಾರವೆಸಗಿ, ಆಕೆ ಗರ್ಭ ಧರಿಸಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಗಪಟ್ಟಣಂ (ಜೂ. 8): ಆತ ಕ್ಯಾಬ್​ ಚಾಲಕ. ಮನೆಯಲ್ಲಿ ಹೆಂಡತಿ ಮತ್ತು ಮಗಳನ್ನು ಬಿಟ್ಟು ಕೆಲಸದ ನಿಮಿತ್ತ ವಾರದ ಬಹುತೇಕ ದಿನಗಳನ್ನು ಹೊರಗೇ ಕಳೆಯುತ್ತಿದ್ದ. ಅದೊಂದು ದಿನ ಆತನ 14 ವರ್ಷದ ಮಗಳಿಗೆ ತೀವ್ರವಾಗಿ ಹೊಟ್ಟೆನೋವು ಶುರುವಾಗಿತ್ತು. ಆತನ ಹೆಂಡತಿ ಫೋನ್ ಮಾಡಿ ಈ ವಿಷಯ ತಿಳಿಸಿದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದ. ಗಂಡನ ಮಾತು ಕೇಳಿ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಆಕೆಗೆ ಮಗಳು ಗರ್ಭಿಣಿಯಾಗಿದ್ದಾಳೆಂಬ ವಿಷಯ ತಿಳಿದು ಶಾಕ್ ಆಗಿತ್ತು!

ಮಗಳಿಗೆ ಮೂರು ತಿಂಗಳಾಗಿದೆ ಎಂಬ ವಿಷಯವನ್ನು ವೈದ್ಯರು ಹೇಳಿದಾಗ ಮಗಳನ್ನು ಕರೆದುಕೊಂಡು ಬಂದ ಅಮ್ಮ ಆಕೆಗೆ ಹೊಡೆದು, ಬಡಿದು ಗಲಾಟೆ ಮಾಡಿದ್ದಳು. ಈ ವಿಷಯ ನಿನ್ನ ಅಪ್ಪನಿಗೆ ಗೊತ್ತಾದರೆ ಅವರು ಸುಮ್ಮನಿರುತ್ತಾರ? ಎಂದು ಮಗಳ ಮುಂದೆ ಗೋಳಾಡಿದ್ದಳು. ಆಗ ಮಗಳು ಹೇಳಿದ ಮಾತು ಕೇಳಿ ಆಕೆ ಅಲ್ಲೇ ಕುಸಿದು ಬಿದ್ದಿದ್ದಳು. ಅಳುತ್ತಾ ಅಮ್ಮನ ಎದುರು ಸತ್ಯ ಹೇಳಿದ ಮಗಳು ತನ್ನ ಮೇಲೆ ಅಪ್ಪ ಮನೆಗೆ ಬಂದಾಗಲೆಲ್ಲ ಅತ್ಯಾಚಾರ ನಡೆಸುತ್ತಿದ್ದ ಎಂದು ಒಪ್ಪಿಕೊಂಡಳು.

ಇದನ್ನೂ ಓದಿ: ತಂಗಿ ಮೇಲೆ ಅತ್ಯಾಚಾರವೆಸಗಿದ ಗಂಡನನ್ನು ಕೊಡಲಿಯಿಂದ ಕೊಚ್ಚಿ ಕೊಂದ ತುಂಬು ಗರ್ಭಿಣಿ

ಈ ಘಟನೆ ನಡೆದಿರುವುದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ. 14 ವರ್ಷದ ಬಾಲಕಿಯ ಮೇಲೆ ಅಪ್ಪನೇ ಅತ್ಯಾಚಾರವೆಸಗಿ, ಆಕೆ ಗರ್ಭ ಧರಿಸಿರುವ ಘಟನೆ ನಡೆದಿದೆ. ತನ್ನ ಅಪ್ರಾಪ್ತ ಮಗಳ ಮೇಲೆ ಗಂಡ ನಡೆಸಿರುವ ದೌರ್ಜನ್ಯಕ್ಕೆ ತಕ್ಕ ಪಾಠ ಕಲಿಸಬೇಕೆಂದು ಆ ಬಾಲಕಿಯ ತಾಯಿ ತನ್ನ ಮಗಳೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಆ ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ.
First published: