Crime News: 90 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 20ರ ಯುವಕ!

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪ್ರದೇಶದಲ್ಲಿ 20 ವರ್ಷದ ಯುವಕನೊಬ್ಬ 90 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿರುವ ಅಮಾನುಷ ಘಟನೆ ನಡೆದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಕೊಯಮತ್ತೂರು (ನ. 15): ಎಳೆಗೂಸಿನ ಮೇಲೆ, ವಿವಾಹಿತರ ಮೇಲೆ, ಯುವತಿಯರ ಮೇಲೆ, ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸುವ ಹೀನ ಮನಸ್ಥಿತಿಯವರ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ, ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪ್ರದೇಶದಲ್ಲಿ 20 ವರ್ಷದ ಯುವಕನೊಬ್ಬ 90 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿರುವ ಅಮಾನುಷ ಘಟನೆ ನಡೆದಿದೆ.

    ಪೊಲ್ಲಾಚಿಯ ಕುಮಾರನ್ ನಗರದ ನಿವಾಸಿಯಾದ 20 ವರ್ಷದ ಮೈದೀನ್ ಎಂಬಾತನೇ ಅಜ್ಜಿಯ ಮೇಲೆ ಅತ್ಯಾಚಾರ ನಡೆಸಲು ಮುಂದಾದ ಯುವಕ. ಕೂಲಿ ಕಾರ್ಮಿಕನಾಗಿದ್ದ ಈತ, ಕುಡಿತದ ಅಮಲಿನಲ್ಲಿ ಅಜ್ಜಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಹಳ್ಳಿಯಲ್ಲಿರುವ ತನ್ನ ತೋಟದಲ್ಲಿನ ಗುಡಿಸಲಿನಲ್ಲಿ ಮಲಗಿದ್ದ ಅಜ್ಜಿಯ ಮೇಲೆ ರಾತ್ರಿ ಮೈದೀನ್ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ರಾತ್ರಿ 11 ಗಂಟೆಗೆ ಮನೆಯ ರೂಮಿನಲ್ಲಿ ಅಜ್ಜಿ ಮಲಗಿದ್ದಾಗ ಮನೆಯೊಳಗೆ ನುಗ್ಗಿದ ಮೈದೀನ್ ಈ ಕೃತ್ಯ ಎಸಗಿದ್ದಾನೆ.

    ತನ್ನ ಮೈಮೇಲೆ ಮೈದೀನ್ ಬಿದ್ದಿದ್ದನ್ನು ನೋಡಿ ಗಾಬರಿಗೊಂಡ ಅಜ್ಜಿ ಏಳುವಷ್ಟರಲ್ಲಿ ಆತ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ತಕ್ಷಣ ಅಜ್ಜಿ ಜೋರಾಗಿ ಕಿರುಚಿಕೊಂಡಾಗ ಆಕೆಯ ಮಗ ಓಡಿಬಂದಿದ್ದಾರೆ. ಹೊರಗೆ ಮಲಗಿದ್ದ ಅಜ್ಜಿಯ 55 ವರ್ಷದ ಮಗ ಓಡಿಬಂದು ಆ ಯುವಕನನ್ನು ಥಳಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡ ಯುವಕ ಓಡಿಹೋಗಿದ್ದಾನೆ.

    ಈ ವಿಷಯ ತಿಳಿದ ಗ್ರಾಮಸ್ಥರು ಆ ಯುವಕನನ್ನು ಹಿಡಿದು, ಮಾರನೇ ದಿನವೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲ್ಲಾಚಿಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆತನನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
    Published by:Sushma Chakre
    First published: