news18-kannada Updated:July 31, 2020, 9:39 PM IST
ಗಂಡನನ್ನು ಹೊತ್ತು ಸಾಗಿದ ಹೆಂಡತಿ
ಮಧ್ಯಪ್ರದೇಶ (ಜು. 31): ಮಹಿಳೆಯೊಬ್ಬಳು ಬೇರೆ ಪುರುಷರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆ ಎಂಬ ಆರೋಪದಲ್ಲಿ ಆಕೆ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯುವ ಶಿಕ್ಷೆ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ 7 ಜನರನ್ನು ಬಂಧಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಮೂರು ಮಕ್ಕಳ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪಿಸಿ ಸ್ಥಳೀಯರು ಆಕೆಯ ಗಂಡನನ್ನು ಆಕೆಯ ಹೆಗಲ ಮೇಲೆ ಹೊರೆಸಿ, ರಸ್ತೆಯಲ್ಲಿ ಸಾಗಬೇಕೆಂದು ಶಿಕ್ಷೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಧ್ಯಪ್ರದೇಶದ ಝಾಬುವಾ ಜಿಲ್ಲೆಯಲ್ಲಿ ನಡೆದ ಈ ಘಟನೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: ಆಲ್ಕೋಹಾಲ್ ಬದಲು ಸ್ಯಾನಿಟೈಸರ್ ಸೇವಿಸಿ ಭಿಕ್ಷುಕರು ಸೇರಿ ಆಂಧ್ರದ 10 ಜನ ಸಾವು
ಮಹಿಳೆ ಬೇರೊಬ್ಬಳೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೆ ಎಂದು ಗಂಡಸರ ಗುಂಪು ಆಕೆಗೆ ರಸ್ತೆಯಲ್ಲೇ ಕೋಲುಗಳಿಂದ ಹೊಡೆದಿರುವ ವಿಡಿಯೋಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಆಕೆ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯುವಾಗಲೂ ಕೋಲುಗಳಿಂದ ಹೊಡೆದು, ಹಿಂಸೆ ನೀಡುತ್ತ, ಪ್ರಾಣಿಯಂತೆ ನಡೆಸಿಕೊಳ್ಳಲಾಗಿತ್ತು. ಆಕೆಯನ್ನು ಗೇಲಿ ಮಾಡುತ್ತಾ, ಹೆದರಿಸಲಾಗಿತ್ತು. ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯಲಾಗದೆ ಒದ್ದಾಡುತ್ತಿದ್ದಾಗ ಕೋಲಿನಿಂದ ಬಾರಿಸಿ, ಹಿಂಸೆ ನೀಡಲಾಗಿತ್ತು.
ಈ ವಿಡಿಯೋ ನೋಡಿದ ಪೊಲೀಸರು ಆ ಮಹಿಳೆಯ ಗಂಡ ಸೇರಿದಂತೆ 7 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಗುಜರಾತ್ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಹಿಳೆ ಮತ್ತು ಆಕೆಯ ಪತಿ ಇತ್ತೀಚೆಗೆ ಮನೆಗೆ ವಾಪಾಸ್ ಬಂದಿದ್ದರು. ಆ ಮಹಿಳೆ ತನ್ನ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಗಂಡ ಆರೋಪಿಸಿದ್ದ. ಆದ್ದರಿಂದ ಕುಟುಂಬ ಮತ್ತು ಇತರ ಗ್ರಾಮಸ್ಥರು ಮಹಿಳೆಯನ್ನು ನಡುರಸ್ತೆಯಲ್ಲಿ ಶಿಕ್ಷಿಸಿದ್ದರು.
Published by:
Sushma Chakre
First published:
July 31, 2020, 9:39 PM IST