HOME » NEWS » National-international » CRIME NEWS PUNJAB TEACHER BEATEN UP FACE BLACKENED FOR SEXUALLY HARASSING SSLC STUDENT STG SCT

Crime News: ಸ್ಪೆಷಲ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ಮುಖಕ್ಕೆ ಮಸಿ ಬಳಿದ ಜನರು

Rape News Today: ಲೈಂಗಿಕ ಕಿರುಕುಳದ ಆರೋಪದಡಿ ಶಿಕ್ಷೆಗೆ ಒಳಗಾಗಿರುವ ವಿಕಾಸ್ ಕುಮಾರ್ ತರಗತಿ ಮುಗಿದ ಬಳಿಕ ಬಾಲಕಿಗೆ ಸ್ಪೆಷಲ್ ಕ್ಲಾಸ್ ಅಟೆಂಡ್ ಮಾಡಲು ಹೇಳಿದ್ದಾನೆ. ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವ ನೆಪದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿಯ ಕಡೆಯವರು ಆರೋಪಿಸಿದ್ದಾರೆ.

news18-kannada
Updated:April 17, 2021, 2:20 PM IST
Crime News: ಸ್ಪೆಷಲ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ಮುಖಕ್ಕೆ ಮಸಿ ಬಳಿದ ಜನರು
ಪ್ರಾತಿನಿಧಿಕ ಚಿತ್ರ
  • Share this:
ಪಂಜಾಬ್ (ಏ. 17): ಪಂಜಾಬ್‌ನ ಜಲಂದರ್ ನಗರದಲ್ಲಿನ ಪಗ್ವಾರ ತಾಲೂಕಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಶಾಲೆಯ ಶಿಕ್ಷಕನಿಗೆ ವಿದ್ಯಾರ್ಥಿನಿಯ ಸಂಬಂಧಿಕರು, ಮುಖಕ್ಕೆ ಮಸಿ ಬಳಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

ವಿಕಾಸ್ ಕುಮಾರ್ ಎಂದು ಗುರುತಿಸಲಾಗಿರುವ ಶಿಕ್ಷಕನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-ಎ (ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ನವದೀಪ್ ಸಿಂಗ್ ತಿಳಿಸಿದ್ದಾರೆ. ಇನ್ನು, ಲೈಂಗಿಕ ಕಿರುಕುಳದ ಆರೋಪದಡಿ ಶಿಕ್ಷೆಗೆ ಒಳಗಾಗಿರುವ ವಿಕಾಸ್ ಕುಮಾರ್ ಸೋಮವಾರ ಎಂದಿನಂತೆ ತರಗತಿ ಮುಗಿದ ಬಳಿಕ ಇನ್ನೂ ಹೆಚ್ಚಿನ ವಿಷಯಗಳನ್ನು ಕಲಿಸುತ್ತೇನೆ ಎಂದು ಬಾಲಕಿಗೆ ಸ್ಪೆಷಲ್ ಕ್ಲಾಸ್ ಅಟೆಂಡ್ ಮಾಡಲು ಹೇಳಿದ್ದಾನೆ. ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವ ನೆಪದಲ್ಲಿ ಈ ಕೃತ್ಯವೆಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿಯ ಕಡೆಯವರು ಆರೋಪಿಸಿದ್ದಾರೆ.

ಸ್ಪೆಷಲ್ ಕ್ಲಾಸ್ ನೆಪದಲ್ಲಿ ಅಪ್ರಾಪ್ತ ಬಾಲಕಿ ಒಂಟಿಯಾಗಿದ್ದಾಗ ಆಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತನ್ನ ಮೊಬೈಲ್ ಫೋನ್‌ನಲ್ಲಿದ್ದ ಅಶ್ಲೀಲ ಸಿನಿಮಾ, ಫೋಟೋ ಮತ್ತು ವಿಡಿಯೋ ವನ್ನು ನೋಡಲು ಆಕೆಗೆ ಬಲವಂತ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ. ಆದರೆ ಬಾಲಕಿ ಶಿಕ್ಷಕನ ಈ ಕೃತ್ಯಗಳನ್ನು ನಿರಾಕರಿಸಿದಾಗ, ಅಶ್ಲೀಲ ನಡವಳಿಕೆಯನ್ನು ಆಕೆ ಮುಂದೆ ಪ್ರದರ್ಶಿಸಿದ್ದಾನೆ. ಈ ಘಟನೆಯಿಂದ ಮನನೊಂದ ಬಾಲಕಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಗುರುವಾರ ಆಕೆಯ ಮನೆಯವರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ಚೆನ್ನಾಗಿ ತಳಿಸಿದ್ದಾರೆ. ಅಲ್ಲದೇ ಮುಖಕ್ಕೆ ಮಸಿ ಕೂಡ ಬಳಿದಿದ್ದಾರೆ.

ಇದನ್ನೂ ಓದಿ: ಹಲ್ಲೆ ಮಾಡಿದ ವ್ಯಕ್ತಿಯ ಕಾಲು ಕಚ್ಚಿ ಒಡತಿಯನ್ನು ಕಾಪಾಡಿದ ಸಾಕು ನಾಯಿ!

ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಶಿಕ್ಷಕ ಶಾಲೆಯಲ್ಲಿ ಟ್ರೈನರ್ ಆಗಿದ್ದರೆಂದು ಪತ್ರಿಕೆಯೊಂದು ವರದಿ ಮಾಡಿದೆ. ಇನ್ನು, ಶಾಲೆಯ ಪ್ರಾಂಶುಪಾಲರಾದ ಕುಸುಮಾ ಈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಶಾಲಾ ಅಧಿಕಾರಿಗಳು ಎಂದಿಗೂ ಅನೈತಿಕ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ. ಕೂಡಲೇ ಲೈಂಗಿಕ ಕಿರುಕುಳ ಆರೋಪ ಹೊತ್ತ ಶಿಕ್ಷಕನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಕುಸುಮಾ ತಿಳಿಸಿದ್ದಾರೆ.

ಇವತ್ತಿನ ದಿನಗಳಲ್ಲಿ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಲಿವೆ. ಅಕ್ಕ ಪಕ್ಕದ ಮನೆಯವರನ್ನೂ ಸಹ ಈ ವಿಷಯದಲ್ಲಿ ನಂಬುವ ಕಾಲಘಟ್ಟದ್ದಲ್ಲಿ ನಾವಿಲ್ಲ ಎನ್ನುವುದನ್ನು ಪದೇ ಪದೇ ಕೆಲವು ಘಟನೆಗಳು ನಿಜ ಮಾಡುತ್ತಲೇ ಇವೆ. ಇನ್ನು ಮಕ್ಕಳು ಬಹುತೇಕ ಸಮಯವನ್ನು ಕಳೆಯುವ ಶಾಲೆಗಳು ಸಹ ಇದಕ್ಕೆ ಹೊರತಾಗಿಲ್ಲ. ಇತ್ತೀಚೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದರಲ್ಲೂ ಪುಟ್ಟ ಮಕ್ಕಳ ವಿಷಯದಲ್ಲಿ ಈ ಆತಂಕ ಕೊಂಚ ಹೆಚ್ಚಾಗಿಯೇ ಇದೆ. ಒಳ್ಳೆಯದು , ಕೆಟ್ಟದ್ದು ಅರಿವಿರಿದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕೆಟ್ಟ ಮನಸ್ಸುಗಳು ಶಾಲೆಯ ಕಾಂಪೌಂಡ್ ಒಳಗಿರುವುದು ಆತಂಕಕಾರಿ ವಿಷಯ.
ಪ್ರಾಥಮಿಕ ಶಾಲಾ ಮಕ್ಕಳು ಇಲ್ಲವೇ ಹೈಸ್ಕೂಲ್ ವಿದ್ಯಾರ್ಥಿಗಳು ಸಹ ಈ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನಿಜಕ್ಕೂ ದುರಂತ. ಅದರಲ್ಲೂ ಕೆಲವೊಂದು ಕಡೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಮೊದಲೇ ತಯಾರಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆ ಪೋಷಕರ ಅನುಮಾನವನ್ನು ಪುಷ್ಠಿಕರಿಸುವ ಇಂತಹ ಘಟನೆಗಳು ಎಷ್ಟೋ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಹಕ್ಕನ್ನೇ ಕಸಿದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಶಾಲೆಗಳು ಇನ್ನಷ್ಟು ಸುರಕ್ಷತೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಈಗ ಇನ್ನಷ್ಟು ಹೆಚ್ಚಾಗಿದೆ.
Published by: Sushma Chakre
First published: April 17, 2021, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories