news18-kannada Updated:February 23, 2021, 11:28 AM IST
ಸಾಂದರ್ಭಿಕ ಚಿತ್ರ
ನವದೆಹಲಿ (ಫೆ. 23): ಜೈಲಿನಲ್ಲಿ ಫೋನ್, ಸಿಗರೇಟ್, ಡ್ರಗ್ಸ್ ಮುಂತಾದ ವಸ್ತುಗಳು ಕಳ್ಳಸಾಗಣೆಯಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ. ಇದೇ ರೀತಿ, ಪಂಜಾಬ್ನ ಜೈಲೊಂದರಲ್ಲಿ ಕಳ್ಳಸಾಗಣೆ ಮಾಡಿದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧವೇ ಕೇಸ್ ದಾಖಲಿಸಲಾಗಿದೆ.
ಪಂಜಾಬ್ನ ರೋಪಾರ್ ಜಿಲ್ಲಾ ಜೈಲಿಗೆ ಭಾನುವಾರ ಸೆಲ್ ಫೋನ್ ಮತ್ತು ತಂಬಾಕು ಪ್ಯಾಕೆಟ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಹಿರಿಯ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಜಲಂಧರ್ನ ಪಂಜಾಬ್ ಸಶಸ್ತ್ರ ಪೊಲೀಸ್ ಅಧಿಕಾರಿ ಮಲ್ಕಿತ್ ಸಿಂಗ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಮಾಹಿತಿಯ ಪ್ರಕಾರ, ಜೈಲಿನ ಉಪ ಅಧೀಕ್ಷಕರು ಮಲ್ಕಿತ್ ಸಿಂಗ್ ಅವರು ಭಾನುವಾರ ಬೆಳಗ್ಗೆ 6 ಗಂಟೆಗೆ ಜೈಲಿನಲ್ಲಿ ಕರ್ತವ್ಯಕ್ಕೆ ಸೇರಬೇಕಿತ್ತು. ಆದರೆ, ಪ್ರವೇಶದ್ವಾರದಲ್ಲಿ ನಡೆದ ಶೋಧದ ವೇಳೆ ಆತನ ಪೇಟದಲ್ಲಿ ಸೆಲ್ಫೋನ್ ಮತ್ತು ತಂಬಾಕಿನ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ದೂರು ದಾಖಲಿಸಿದ್ದಾರೆ.
ಈ ಸಂಬಂಧ ಹಿರಿಯ ಕಾನ್ಸ್ಟೇಬಲ್ ವಿರುದ್ಧ ಕಾರಾಗೃಹ ಕಾಯ್ದೆಯ ಸೆಕ್ಷನ್ 52 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published by:
Sushma Chakre
First published:
February 23, 2021, 11:28 AM IST